Wednesday, July 8, 2015

ಕ್ರಾಂತಿ ಪುರುಷ ಕುಮಾರರಾಮ

ವಿಜಯನಗರ ಸ್ಥಾಪನೆಯ ಕನಸುಗಾರ "ಕುಮಾರರಾಮ"





ವಿಜಯನಗರ  ಸಾಮ್ರಾಜ್ಯ (ಕ್ರಿ.ಶ. 1336  - ಕ್ರಿ.ಶ. 1565)ದ ಕನಸುಗಾರನೆಂದೇ ಪ್ರಖ್ಯಾತಿ ಹೊಂದಿರುವ ಗಂಡುಗಲಿ ಕುಮಾರರಾಮ ಬದುಕಿದ್ದು  ಕ್ರಿ.ಶ. 1290 - ಕ್ರಿ.ಶ. 1320 ರ ನಡುವೆ

ದಾಖಲೆಗಳ ಪ್ರಕಾರ ವಿಜಯ ನಗರದ ಸಂಸ್ಥಾಪಕರಾದ "ಹಕ್ಕ ಮತ್ತು ಬುಕ್ಕರು" ಕುಮಾರರಾಮನ ಮಾವನ ಮಕ್ಕಳಾಗಿದ್ದರು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ. - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ ನಾಗಿದ್ದ ನೆಂಬುದಕ್ಕೆ ಸಾಕಷ್ಟು ಚಾರಿತ್ರಿಕ ಘಟನೆಗಳ ಉಲ್ಲೇಖನಗಳು ಸಿಕ್ಕುತ್ತವೆ.



"ಕುಮಾರರಾಮ"ನು ಕಮ್ಮಟದುರ್ಗದ ರಾಜ ಕಂಪಿಲ ಮತ್ತು ಹರಿಯಾಲದೇವಿ/ಹರಿಹರದೇವಿಯರ ಮಗ. ಚಿಕ್ಕಂದಿನಲ್ಲೇ ಸಮಸ್ತ 64 ವಿದ್ಯೆಗಳನ್ನು ಕಲಿತು, ಶತ್ರು ರಾಜರನ್ನೇಲ್ಲಾ ಹಿಮ್ಮೆಟ್ಟಿಸಿ ಅಜೇಯನೆನಿಸಿದ್ದನು. ಕುಮಾರರಾಮನ ವೀರತ್ವವನ್ನು ಗಮನಿಸಿದ "ದೆಹಲಿಯ ಸುಲ್ತಾನ" ಅವನಿಗೆ ತನ್ನ ಮಗಳನ್ನು ಕೊಟ್ಟು ಬಾಂದವ್ಯ ಬೆಳೆಸಲು ನಿಶ್ಚಯಿಸುವನು. ಆದರೆ ಕಟ್ಟರ್ ಹಿಂದೂವಾದಿಯಾಗಿದ್ದ ಕುಮಾರರಾಮನು ಆ ಮುಸ್ಲಿಂ ಸಂಬಂಧವನ್ನು ನಿರಾಕರಿಸುವನು.

ಒಂದು ದಿನ ಕುಮಾರರಾಮ ತಂದೆಯೊಡನೆ ಬೇಟೆಗೆ ಹೊರಡಲು ಸಿದ್ದವಾಗುತ್ತಿದ್ದವನು ದಿಢೀರನೆ ತನ್ನ ಮನಸ್ಸನ್ನು ಬದಲಿಸಿ ಸ್ನೇಹಿತರೊಂದಿಗೆ ಆಟವಾಡಲು ಇಷ್ಟಪಟ್ಟು ತಾಯಿ ಹರಿಯಾಲದೇವಿಯಲ್ಲಿ ಮುತ್ತಿನ ಚೆಂಡನ್ನು ಬೇಡುತ್ತಾನೆ. ಆಗ ತಾಯಿ ಆತಂಕಗೊಂಡು ಮುತ್ತಿನ ಚೆಂಡಿನಿಂದ ಈವರೆಗೆ ಆಗಿರುವ ಅವಘಡವನ್ನು ಕುರಿತು ಹೇಳುತ್ತಾಳೆ.

ಆದರೆ ಕುಮಾರರಾಮ ಆಟವಾಡಲು ಆ ಚೆಂಡೆ ಬೇಕೆಂದು ಪಟ್ಟು ಹಿಡಿದಾಗ, ಅವಳು ತನ್ನೇದುರಿನಲ್ಲೇ ಚೆಂಡನ್ನು ಆಡುವಂತೆ ತಾಕೀತು ಮಾಡುತ್ತಾಳೆ. ಅದರಂತೆ ಕುಮಾರರಾಮ ಸ್ನೇಹಿತರೊಡಗೂಡಿ ಚೆಂಡಾಟವಾಡುವಾಗ ಅದು ಚಿಕ್ಕಮ್ಮ ರತ್ನೋಜಿ ಮನೆಯೊಳಗೆ ಬೀಳುತ್ತದೆ. ಕುಮಾರ ರಾಮ ಅದನ್ನು ತರ ಹೋದಾಗ ಚಿಕ್ಕಮ್ಮ ರತ್ನೋಜಿ ಅವನನ್ನು ಕಾಮುಕ ದೃಷ್ಟಿಯಿಂದ ಕಾಣುತ್ತಾಳೆ.

ತನ್ನ ಇಷ್ಟವನ್ನು ನೆರವೇರಿಸುವಂತೆ ಕುಮಾರರಾಮನನ್ನು ಪರಿ ಪರಿಯಾಗಿ ಬೇಡುತ್ತಾಳೆ. ಪರನಾರಿಸೋದರನೆಂಬ ಬಿರುದನ್ನು ಹೊಂದಿದ್ದ ಕುಮಾರರಾಮ ತಾಯಿಯ ಮಾತನ್ನು ಸಂಪೂರ್ಣವಾಗಿ ತಿರಸ್ಕರಿಸುವನು.

ಆಕೆ ಅನೈತಿಕ  ಸಂಬಂಧ ನಡೆಸಲು ಮುನ್ನಡೆದಾಗ, ಕುಮಾರರಾಮ ತಾಯಿಯ ಸ್ಥಾನದಲ್ಲಿರುವ ಅವಳನ್ನು ತಿರಸ್ಕರಿಸುವನು. ಇದರಿಂದ ರೊಚ್ಚಿಗೆದ್ದ ರತ್ನಾಜಿ ಕಂಪಿಲರಾಯನಿಗೆ(ಕುಮಾರರಾಮನ ತಂದೆಗೆ) ಇಲ್ಲಸಲ್ಲದ ದೂರನ್ನು ಹೇಳುವಳು. ಕಿರಿ ಪತ್ನಿಯ ಮಾತನ್ನು ನಂಬಿದ ಕಂಪಿಲರಾಯ ಕುಮಾರರಾಮನ ತಲೆ ತೆಗೆಯುವಂತೆ "ಮಂತ್ರಿ ಬೈಚಪ್ಪ"ನಿಗೆ ಆಜ್ಞಾಪಿಸುವನು.

"ಬೈಚಪ್ಪ" ಕುಮಾರರಾಮನನ್ನು ಬಚ್ಚಿಟ್ಟು ಅವನ ಬದಲಿಗೆ ಬೇರೊಬ್ಬರ ತಲೆ ಕಡಿದು ತಂದು ರಾಜನಿಗೆ ತೋರಿಸುವನು. ಕುಮಾರರಾಮನು ಇಲ್ಲವೆಂಬ ಸುದ್ದಿ "ದೆಹಲಿ ಸುಲ್ತಾನ"ನಿಗೆ ತಿಳಿದು ಅವನು "ಕಮ್ಮಟದುರ್ಗ"ದ ಮೇಲೆ ದಂಡೆತ್ತಿ ಬರುತ್ತಾನೆ. ಕಂಪಿಲರಾಯ ದೆಹಲಿಯ ಸುಲ್ತಾನನಿಗೆ ಸೋತು ಇನ್ನೇನು ಶರಣಾಗುವ ಸಂದರ್ಭದಲ್ಲಿ ಮಂತ್ರಿ ಬೈಚಪ್ಪ ಕುಮಾರರಾಮನನ್ನು ಹೊರಬಿಟ್ಟಾಗ ಅವನು ವೀರಾವೇಶದಿಂದ ಕಾದಾಡಿ ಶತ್ರು ಸೇನೆಯನ್ನು ಬಡಿದೋಡಿಸಿದನು.



ಕಂಪ್ಲಿಯು ಚಿಕ್ಕರಾಜ್ಯವಾಗಿದ್ದು ಇದರ ಪಕ್ಕದಲ್ಲಿ ಬಲಿಷ್ಠ ರಾಜರಾದ ವಾರಂಗಲ್ಲಿನ ಕಾಕತೀಯರು, ವೀರ ಬಲ್ಲಾಳದ ಹೊಯ್ಸಳರು, ಬಹುಮನಿ ಸುಲ್ತಾನರು ಹಾಗೂ ದೆಹಲಿಯ ಮಹಮದ್ ಬಿನ್ ತುಗಲಕ್ ಇವರುಗಳನ್ನು ಯುದ್ದದಲ್ಲಿ ಮಣಿಸಿದ್ದುದಕ್ಕೆ ಕುಮಾರರಾಮನನ್ನು ಗಂಡುಗಲಿ ಕುಮಾರರಾಮ ಎಂದು ಕರೆಯುತ್ತಿದ್ದುದು. ದೆಹಲಿಯ ತುಗಲಕ್‌ನ ಅಪಾರ ಸೇನೆಯನ್ನು ಕುಮಾರರಾಮನು 2 ಸಲ ಸೋಲಿಸಿ ಹಿಮ್ಮೆಟ್ಟಿಸುತ್ತಾನೆ. ಮೂರನೆಯ ಸಲ 2 ಲಕ್ಷಕ್ಕೂ ಮಿಗಿಲಾದ ತುಗಲಕ್‌ನ ಸೇನೆಯನ್ನು ಎದುರಿಸಿ ವೀರಾವೇಶದಿಂದ ಹೋರಾಡಿ ಶತೃಗಳ ಕುತಂತ್ರದಿಂದ ಯುದ್ಧದಲ್ಲಿ ಮಡಿದು ವೀರ ಸ್ವರ್ಗ ಹೊಂದುತ್ತಾನೆ.

ದೆಹಲಿ ಸುಲ್ತಾನನು "ಮಾತಂಗಿ" ಎನ್ನುವವಳ ನೇತೃತ್ವದಲ್ಲಿ ಕಮ್ಮಟದುರ್ಗವನ್ನು ವಶಪಡಿಸಿಕೊಳ್ಳಲು ಅಪಾರ ಸೇನೆ ಕಳುಹಿಸುವನು. ಅದುವರೆವಿಗೂ ಅಪ್ರತಿಮ ವೀರಾವೇಶದಿಂದ ಹೋರಾಡುತ್ತಿದ್ದ ಕುಮಾರರಾಮ ಮಾತಂಗಿ ಎದುರಾದಾಗ ಹೆಂಗಸಿನ ಮೇಲೆ ಕೈಯೆತ್ತುವುದು ತರವಲ್ಲವೆಂದು ತಟಸ್ಥನಾಗುತ್ತಾನೆ.ಆ ಸಮಯದಲ್ಲಿ ಮಾತಂಗಿ ಕುಮಾರರಾಮನನ್ನು ಸಂಹರಿಸಿ ಅವನ ರುಂಡವನ್ನು ದೆಹಲಿ ಸುಲ್ತಾನನಿಗೆ ಒಪ್ಪಿಸುತ್ತಾಳೆ.

ಮುಸಲ್ಮಾನರು ಎಷ್ಟಿದ್ದರೂ ಮೋಸಗಾರರೇ ಅನ್ನೋದಕ್ಕೆ ಕುಮಾರರಾಮನನ್ನ ಮೋಸದಿಂದ ದೆಹಲಿ ಸುಲ್ತಾನ್ ಕೊಂದಿದ್ದೇ (ಈ ತರಹ ಕುತಂತ್ರ ಬುದ್ಧಿ ಉಪಯೋಗ್ಸಿಯೇ ಈ ಮುಸಲ್ಮಾನರು ನಮ್ಮನ್ನಾಳಿದ್ದು) ಉದಾಹರಣೆ.

~ Vinod Hindu Nationalist

2 comments:

  1. Enter your comment...ಹಿಂದುತ್ವಕ್ಕೆ ಮತ್ತೊಂದು ಹೆಸರೇ ಕುಮಾರರಾಮ

    ReplyDelete
    Replies
    1. ಸತ್ಯ ಜೈ ಗಂಡುಗಲಿ ಕುಮಾರರಾಮ

      Delete