Tuesday, December 1, 2015

ಆರ್ಯ ದ್ರಾವಿಡ ಎಂಬ ಹಸಿ ಹಸಿ ಸುಳ್ಳು

ಆರ್ಯರಿಂದ ಭಾರತದ ಮೇಲೆ ದಾಳಿ ಎಂಬ ಪೊಳ್ಳು ವಾದ
- Vinod Hindu Nationalist



ದೇಶದಲ್ಲಿ ಅಸಹಿಷ್ಣುತೆ (Intolerance) ಮಿತಿ ಮೀರುತ್ತಿದೆ ದೇಶದಲ್ಲಿ ಉಸಿರುಗಟ್ಟೋ ವಾತಾವರಣವಿದೆ ಅಂತ ಕೆಲ ತಿಂಗಳಿನಿಂದ ಹಲವಾರು ಸಾಹಿತಿಗಳು, ಬುದ್ಧಿಜೀವಿಗಳು, ಲೇಖಕರು, ನಟ ನಟಿಯರು ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ನಿಮಗೆಲ್ಲ ತಿಳಿದ ವಿಷಯವೇ, ಅದೇ ಪ್ರಶಸ್ತಿ ವಾಪಸಾತಿ, ಅಸಹಿಣ್ಣುತೆಯ ವಾದದ ತಿಕ್ಕಾಟದಲ್ಲೇ ಅಮೀರ್ ಖಾನ್ ಕೂಡ ದೇಶದಲ್ಲಿ ಕಳೆದ 6-8 ತಿಂಗಳಿನಿಂದ ಒಂದು ತರಹ ಭಯದ ವಾತಾವರಣ ದೇಶದಲ್ಲಿದೆ, "ನನ್ನ ಪತ್ನಿ ದೇಶ ಬಿಡೋಣವೇ" ಅಂದಿದ್ದಳು ಅಂತ ಹೊಸ ವಿವಾದವನ್ನೇ ಸೃಷ್ಟಿಸಿದ್ದರು ಹಾಗು ಅಮೀರ್ ಖಾನರವರ ಪರ ವಿರೋಧವಾಗಿ ನಾನಾ ರೀತಿಯ ಪ್ರತಿಭಟನೆಗಳು ನಡೆದಿದ್ದು ತಮಗೆಲ್ಲ ತಿಳಿದ ವಿಷಯವೇ.

ಇದೇ ವಿಷಯವನ್ನಿಟ್ಟುಕೊಂಡು ಮೊನ್ನೆ ತಾನೆ ಶುರುವಾಗಿರೋ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಕೋಲಾಹಲವೆದ್ದಿತ್ತು. ಆಗ ನಮ್ಮ ದೇಶದ ಮಾನ್ಯ ಗೃಹಮಂತ್ರಿ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಮಾತನಾಡುತ್ತ ಈ ತಥಾಕತಿತ ಅಸಹಿಣ್ಣುತೆಯ ಬಗ್ಗೆ ಚರ್ಚೆ ಮಾಡುವಾಗ ಸಂವಿಧಾನ ಕರ್ತೃ ಅಂಬೇಡ್ಕರರ ವಿಷಯವನ್ನು ಪ್ರಸ್ತಾಪಿಸುತ್ತ ದಲಿತ ಶೋಷಣೆಯನ್ನು ತಮ್ಮ ಧ್ವನಿ ಎತ್ತಿ ದಲಿತರ ಹಕ್ಕುಗಳಿಗಾಗಿ ಸಮರ್ಥವಾಗಿ ಹೋರಾಟ ನಡೆಸಿ ಅವರ ಹಕ್ಕುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಹೊರತು ಅಂಬೇಡ್ಕರರು ಯಾವತ್ತೂ ದೇಶ ಬಿಡುವ ಯೋಚನೆ ಮಾಡಿರಲಿಲ್ಲ ಅಂತ ಉಲ್ಲೇಖಿಸುತ್ತ ನಮ್ಮ ದೇಶ ಸಾವಿರಾರು ವರ್ಷಗಳಿಂದ ಇಡೀ ಜಗತ್ತಿನಲ್ಲೇ ಸಹಿಷ್ಣು ರಾಷ್ಟ್ರವಾಗಿದೆ ಅನ್ನೋ ಮಾತನ್ನು ಹೇಳಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಹಾಗು ಕಲಬುರಗಿಯ ಸಂಸದ ಮಲ್ಲಿಕಾರ್ಜುನ ಖರ್ಗೆಯವರು  ಅಂಬೇಡ್ಕರ್ ದೇಶ ಬಿಡ್ತೀನಿ ಅನ್ನೋ ಮಾತನ್ನು ಆಡಿರಲೇ ಇಲ್ಲ. ನಾವು ದ್ರಾವಿಡರು ಈ ದೇಶದ ಮೂಲನಿವಾಸಿಗಳು ನೀವು(ಆರ್ಯರು) ಹೊರಗಿನಿಂದ ಬಂದವರು ಅಂತ ಒಂದು ಸ್ಟೇಟ್'ಮೆಂಟ್ ಕೊಟ್ಟಿದ್ದರು.


ಭಾರತಕ್ಕೆ ಆರ್ಯರು ಹೊರಗಿನಿಂದ ಬಂದವರು, ದ್ರಾವಿಡರು ಮೂಲನಿವಾಸಿಗಳು ಅನ್ನೋದು ಪೊಳ್ಳು ವಾದವಂತ ಎಷ್ಟೋ ಜನ ಪಾಶ್ಚಾತ್ಯ ವಿದ್ವಾಂಸರು, ಇತಿಹಾಸಕಾರರೇ ಸಾಕ್ಷ್ಯಾಧರ, ಸಂಶೋಧನೆಗಳ ಮೂಲಕ ಒಪ್ಪಿಕೊಂಡಾಗ "Aryan Invasion Theory" ಒಟ್ಟಾರೆಯಾಗಿ baseless ಅನ್ನೋದು ಜಗಜ್ಜಾಹಿರಾಗಿರುವ ಸಂದರ್ಭದಲ್ಲಿ ಮತ್ತೆ ಆ ಪೊಳ್ಳು ವಾದವನ್ನಿಟ್ಟುಕೊಂಡು ರಾಜಕಾರಣ ಮಾಡುವುದು  ಮಾತ್ರ ಇನ್ನೂ ಭಾರತದಲ್ಲಿ ನಿಂತಿಲ್ಲ ಅನ್ನುವುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಮಾತಿನಿಂದಲೆ ಅರ್ಥವಾಗುತ್ತದೆ. ಇದೇ "ಆರ್ಯರಿಂದ ಭಾರತದ ಮೇಲೆ ದಾಳಿ" ಎಂಬ ವಿಷಯ ಮಂಡಿಸಿ ಬ್ರಿಟೀಷರು ಅನುಸರಿಸಿದ divide and rule ಪಾಲಿಸಿಯನ್ನ ನಮ್ಮ ರಾಜಕಾರಣಿಗಳು ಇನ್ನೂ ಅನುಸರಿಸಿ ಜನರ ಮನಸ್ಸಿನಲ್ಲಿ ಜಾತಿಯೆಂಬ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಮಾತ್ರ ದೇಶದ ಐಕ್ಯತೆಗೆ ಮಾರಕವೇ ಸರಿ.

ಇರಲಿ ಮೊದಲು ಈ ಆರ್ಯ-ದ್ರಾವಿಡ ಅಂದರೆ ಯಾರು, ಈ ಪೊಳ್ಳು ಹಾಗು ಮೊಂಡು ವಾದವೇನು ಅನ್ನೋದು ಅರಿಯಲೇಬೇಕು. ಅದನ್ನ ತಿಳಿಸಿಕೊಡುವುದೇ ಈ ಲೇಖನದ ಉದ್ದೇಶ

ಈ Aryan Invasion Theory ಪ್ರಕಾರ ಆರ್ಯರೆಂದರೆ ಇವರು ಇರಾನ್ ಹಾಗು ಪಶ್ಚಿಮ ರಷ್ಯಾದಿಂದ ದಾಳಿಕೋರರಾಗಿ ಭಾರತದ ಮೇಲೆ ದಾಳಿ ಮಾಡಿ ಉತ್ತರ ಭಾರತದಲ್ಲಿದ್ದ ಶಾಂತಿಪ್ರೀಯ, ವ್ಯವಸಾಯವನ್ನೇ ಮೂಲ ಕಸುಬನ್ನಾಗಿಸಿಕೊಂಡಿದ್ದ, ಯುದ್ಧದ ಬಗ್ಗೆ ಮಾಹಿತಿಯೇ ಇರದ ದ್ರಾವಿಡರ ಕಗ್ಗೊಲೆ ಮಾಡಿ ದ್ರಾವಿಡರಲ್ಲಿ ಭಯದ ವಾತಾವರಣ ಸೃಷ್ಟಿಸಿ ಅವರನ್ನು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಅಟ್ಟಿದರು ಅನ್ನೋದು ಈ theory ವಾದ.

ಈ ವಾದವನ್ನು ಪುಷ್ಟಿಕರಿಸುವುದಕ್ಕೆ ಈ ಥಿಯರಿ ಕೊಡುವ ಕೆಲ ಕಾರಣಗಳು ಹೀಗಿವೆ.

ಆರ್ಯರು ಸದಾ ಯುದ್ಧಸನ್ನದ್ಧರಾಗಿ ರಥದ ಮೇಲೆ ಬರುತ್ತಿದ್ದರು, ಕುದುರೆಗಳ ಮೇಲೆ ಆರ್ಯನ್ನರು ಬಂದಿದ್ದರು(ಅಂದರೆ ಆರ್ಯರು ಬರುವ ಮುನ್ನ ಭಾರತದಲ್ಲಿ ಕುದುರೆಗಳೇ ಇರಲಿಲ್ಲ, ಆರ್ಯರು ತಂದ ಕುದುರೆಗಳಿಂದಲೇ ಈಗ ನಾವು ಭಾರತದಲ್ಲಿ ಕುದುರೆಗಳನ್ನು ಕಾಣುತ್ತಿದ್ದೇವೆ ಅನ್ನೋದು ಈ theory ಯ ವಾದ) ಹಾಗು ಈ ಆರ್ಯರು ಸದಾ ಗೋವುಗಳನ್ನು ಸಾಕುತ್ತ ಯುದ್ಧದ ಜೊತೆ ಜೊತೆಗೆ ಯಜ್ಞ ಯಾಗಾದಿಗಳನ್ನ ಮಾಡುತ್ತಿದ್ದರು. ಈ theory ಪ್ರಕಾರ ಮೊದಲು ಆರ್ಯನ್ನರು ಕ್ರಿ.ಪೂ.1400-1200 ರಲ್ಲಿ ಹರಪ್ಪ ಮೊಹೆಂಜೊದಾರೊ ಮೇಲೆ ದಾಳಿ ನಡೆಸಿ ಭಾರತಕ್ಕೆ ಕಾಲಿಟ್ಟರು ನಂತರ ಇಲ್ಲಿದ್ದ ದ್ರಾವಿಡರ ಶೋಷಣೆ ಮಾಡಿ ದಕ್ಷಿಣ ಭಾರತಕ್ಕೆ ಓಡಿಸಿದರು.

ಆದರೆ ಭಾರತದ ಜನರಿಗೆ ಗೊತ್ತಿರದ ಈ Aryan Invasion Theory ವಾದದ ಮೂಲ ಎಲ್ಲಿದೆ, ಇದನ್ನು ಭಾರತದಲ್ಲಿ ಹುಟ್ಟುಹಾಕಿದ್ದು ಯಾರು ಹಾಗು ಇದರ ಉದ್ದೇಶವೇನಿತ್ತು ಅನ್ನೋದನ್ನ ತಿಳಿಯುವುದು ಅತೀ ಅವಶ್ಯಕ.

ಈ theory ಯ ಮೂಲ ವ್ಯಕ್ತಿ ಒಬ್ಬ ಬ್ರಿಟಿಷ್ ಅಧಿಕಾರಿ ಹಾಗು ಆಗಿನ ಕಲ್ಕತ್ತಾದ ಹೈಕೋರ್ಟ್ ನ್ಯಾಯಾಧೀಶನಾಗಿದ್ದ ಸರ್ ವಿಲಿಯಂ ಜೋನ್ಸ್. ಈತ ಭಾರತಕ್ಕೆ ನ್ಯಾಯಾಧೀಶನಾಗಿ ಬ್ರಿಟಿಷರಿಂದ ನಿಯುಕ್ತಿಗೊಂಡು 1784ರಲ್ಲಿ ಬಂದು ನೆಲೆಸುತ್ತಾನೆ. ಭಾರತದ ಪ್ರಸಿದ್ಧ "ಏಷ್ಯಾಟಿಕ್ ಸೊಸೈಟಿ" ಸಂಘವನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದ್ದು ಈತನೇ.

ಈತ ಪ್ರತೀ ವರ್ಷವೂ ತನ್ನ ಸಂಘದ ಕುರಿತಾಗಿ ಅಧ್ಯಕ್ಷೀಯ ಭಾಷಣ ಮಾಡೋದು ವಾಡಿಕೆಯಾಗಿತ್ತು. 1786 ರಲ್ಲಿ ಈತ ಮಾಡಿದ ಭಾಷಣವೇ ಈ ಆರ್ಯ-ದ್ರಾವಿಡ ವಾದದ ಮೂಲ ಎನ್ನಬಹುದು. ಈತ ತನ್ನ ಭಾಷಣದಲ್ಲಿ ಸಂಸ್ಕೃತ ಭಾಷೆ ಒಂದು ಶ್ರೇಷ್ಟ ಭಾಷೆ ಹಾಗು ಈ ಭಾಷೆ ಲ್ಯಾಟಿನ್, ಗ್ರೀಕ್ ಭಾಷೆಗಳಿಗೆ ತೀರಾ ಹತ್ತಿರದ ಸಂಬಂಧವಿರುವ ಬಗ್ಗೆ ಕೆಲವು ವಾದಗಳನ್ನು ಮಂಡಿಸುತ್ತಾನೆ.








ಲ್ಯಾಟಿನ್, ಗ್ರೀಕ್ ಭಾಷೆ ಸಂಸ್ಕೃತದಷ್ಟು ಶ್ರೀಮಂತವಲ್ಲ ಅನ್ನೋದು ಇವನ ಅಭಿಪ್ರಾಯವಾಗಿತ್ತು ಹಾಗು ಅದು ನಿಜವೇ. ಈ ಭಾಷೆಗಳ ಸಾಮ್ಯತೆಯೇ ಆರ್ಯ ದ್ರಾವಿಡ ಅನ್ನೋ theory ಹುಟ್ಟಿಕೊಳ್ಳಲು ಕಾರಣವಾಯಿತು ಅನ್ನಬಹುದು, ಅಂದರೆ ಲ್ಯಾಟಿನ್, ಗ್ರೀಕ್ ಭಾಷೆ ಮಾತನಾಡುವ ಜನ ಭಾರತಕ್ಕೆ ವಲಸೆ ಬಂದು ಇಲ್ಲಿ ಲ್ಯಾಟಿನ್, ಗ್ರೀಕ್ ಭಾಷೆಯನ್ನ ಮೂಲವಾಗಿಟ್ಟುಕೊಂಡು ಸಂಸ್ಕೃತ ಎಂಬ ಭಾಷೆ ಹುಟ್ಟುಹಾಕಿದ ಅದನ್ನ ಸಂಪದ್ಭರಿತಗೊಳಿಸಲಾಯಿತು ಅನ್ನೋದು ಈತನ ಭಾಷಣದ ಒಳ ಅರ್ಥವಾಗುತ್ತು

"ಆರ್ಯನ್ನರ ದಾಳಿ" ಅನ್ನೋ ವಾದದ ಮೂಲ ವಿಲಿಯಂ ಜೋನ್ಸನಿಂದ ಆರಂಭವಾಗಿ ಅದನ್ನ ಮತ್ತಷ್ಟು ಪ್ರಚಾರ ಮಾಡಿ ಇದಕ್ಕೆ ತಾನೇ ಸೃಷ್ಟಿಸಿದ ದಾಖಲೆಗಳು, assumptions basis ಮೇಲೆ ಮತ್ತಷ್ಟು ಪ್ರಚಲಿತಗೊಳಿಸಿದ್ದು ಮುಂದೆ  ಬ್ರಿಟಿಷರಿಂದ ನಿಯುಕ್ತಿಗೊಂಡು ಭಾರತಕ್ಕೆ ಬಂದ "ಮ್ಯಾಕ್ಸ್ ಮುಲ್ಲರ್" ಎಂಬ ಜರ್ಮನಿಯ ಸಂಸ್ಕೃತ ತಜ್ಞ

1848 ರಲ್ಲಿ ಈತ ತನ್ನ ಸಂಶೋಧನೆಯಲ್ಲಿ ಮೂಲತಃ ಆರ್ಯನ್ನರು ಭಾರತದವರೇ ಅಲ್ಲ ಅವರು ಭಾರತದ ಮೇಲೆ ಸುಮಾರು ಕ್ರಿ.ಪೂ.1500 ರಿಂದ ಕ್ರಿ.ಪೂ 1200 ರ ಮಧ್ಯೆ ಭಾರತಕ್ಕೆ ವಲಸೆ ಬಂದು ವೇದಗಳನ್ನ ಸೃಷ್ಟಿಸಿದರು ಅನ್ನೋ ವಾದವನ್ನೂ ಮುಂದಿಟ್ಟನು.  ಹಿಂದೂಗಳು ಭಾರತವರೇ ಅಲ್ಲ ಅವರೇ "ಆರ್ಯರು" ಭಾರತದ ಮೇಲೆ ದಾಳಿ ಮಾಡಿ  ನೆಲೆಸಿದ ನಂತರ ದ್ರಾವಿಡರನ್ನ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಓಡಿಸಿ ನಂತರ ವೇದ ರಚನೆಗಳನ್ನ ಕೈಗೊಂಡರು ಅನ್ನೋದು ಮ್ಯಾಕ್ಸ್ ಮುಲ್ಲರನ ತಥಾಕಥಿತ "ಸಂಶೋಧನೆ"ಯಾಗಿತ್ತು.


ಇದೇ ವಾದ ಬ್ರಿಟಿಷರು ಭಾರತವನ್ನು ಒಡೆದು ಆಳಲು ಉಪಯೋಗಿಸಿಕೊಂಡು ಅಸ್ತ್ರ. ಇದರಿಂದ ಬ್ರಿಟೀಷರಿಗೇನು ಲಾಭ ಇದ್ದಿತೂ ಅಂತ ಪ್ರಶ್ನೆ ಮೂಡಬಹುದು ಅದು ಸಹಜವೇ.

ಭಾರತದ ಜನರನ್ನು ಭಾಷೆ, ಆಚಾರ ವಿಚಾರ, ವೇಷಭೂಷಣ, ಸಂಸ್ಕೃತಿಯ ಆಧಾರದ ಮೇಲೆ ಒಡೆದು ಆಳಬಹುದು ಅನ್ನೋ ಲೆಕ್ಕಾಚಾರವೇ ಬ್ರಿಟಿಷರದ್ದಾಗಿತ್ತು ಹಾಗು ಇದೆ ವಾದವನ್ನು ಸಮರ್ಥವಾಗಿ ಭಾರತೀಯರ ಮೇಲೆ ಹೇರಿ ಜನಾಂಗ, ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸಿಯೇ ಬಿಟ್ಟರು. ಆ ಕಂದಕವನ್ನ ನಮ್ಮ ಈಗಿನ ರಾಜಕಾರಣಿಗಳು ಇನ್ನಷ್ಟು ಆಳಗೊಳಿಸಿ ತಮ್ಮ ರಾಜಕಾರಣ ಮಾಡುತ್ತಿದ್ದಾರೆ.

ಅದು ಹಾಗಿರಲಿ ಈ Aryan Invasion theory ಪೊಳ್ಳು ವಾದವಂತ ಖುದ್ದು BBC(British Broadcast Corporation) ಒಪ್ಪಿಕೊಂಡಿದೆ. ಈ ಥಿಯರಿ ಸುಳ್ಳು ಅಂತ ಹಲವಾರು ಸಾಕ್ಷ್ಯಾಧಾರಗಳ ಮೂಲಕವೂ ಸಾಬೀತಾಗಿದೆ.





 ಅಂತಹ ಕೆಲವು ಸಂಶೋಧನೆಗಳು ಹೀಗಿವೆ

->> ಮ್ಯಾಕ್ಸ್ ಮುಲ್ಲರ್'ನ ಪ್ರಕಾರ ಆರ್ಯರು ಮೊದಲು  ದಾಳಿ ಮಾಡಿದ್ದು ಹರಪ್ಪ ಮೊಹೆಂಜೊದಾರೊನಲ್ಲಿ ಕ್ರಿ.ಪೂ 1200ರಲ್ಲಿ, ಆದರೆ ಈ ಊಹಾವಲೋಕನೆಯಲ್ಲಿ ಹುಳುಕಿದೆ ಅಂತ ಕಂಡು ಬಂದಿದ್ದು ಹರಪ್ಪ ಮೊಹೆಂಜೊದಾರೊ ನಾಗರಿಕತೆಗಳ excavation ದಿಂದ. ಈ ಉತ್ಖನನದ result ನೋಡಿದರೆ ಹರಪ್ಪ ಮೊಹೆಂಜೊದಾರೊ ನಾಗರೀಕತೆಗಳು ಕ್ರಿ.ಪೂ.2000-3000 ದಿಂದಲೂ ಇದ್ದವು, ಅಂದರೆ ಮ್ಯಾಕ್ಸ್ ಮುಲ್ಲರ್ ಉಲ್ಲೇಖಿಸಿದ್ದಕ್ಕಿಂತ ಮುಂಚೆಯೆ ಹರಪ್ಪ ಮೊಹೆಂಜೊದಾರೊ ಸಂಸ್ಕೃತಿ ಇತ್ತು ಅನ್ನೋದು prove ಆಯ್ತು.

->> Arya Invasion ವಾದದ ಪ್ರಕಾರ ಭಾರತದಲ್ಲಿ ಆರ್ಯರು ಕ್ರಿ.ಪೂ.1200ರಲ್ಲಿ ಬರುವುದಕ್ಕಿಂತ ಮುಂಚೆ ಭಾರತದಲ್ಲಿ ಕುದುರೆಗಳು ಹಾಗು ರಥಗಳು ಇರಲೇ ಇಲ್ಲವಂತೆ ಆದರೆ ಗುಜರಾತಿನ 'ಸರ್ಕೋಟಡ'ದಲ್ಲಿ ನಡೆದ excavation ನಲ್ಲಿ ಕುದುರೆ ಹಾಗು ರಥದ ಅವಶೇಷಗಳು ಸಿಕ್ಕಿದ್ದು ಇವು ಆ ಪ್ರಾಣಿಯ ಅವಶೇಷಗಳು ಮ್ಯಾಕ್ಸ್ ಮುಲ್ಲರ್ ವಾದಿಸಿದ್ದಕ್ಕಿಂತ 500 ರಿಂದ 700 ವರ್ಷ ಹಳೆಯದಾಗಿದ್ದವು ಅಂದರೆ ಆರ್ಯರು ಹರಪ್ಪ ನಾಗರೀಕತೆಗೆ ಬಂದರೆಂದು ನಂಬಿದ್ದ ಕಾಲಘಟ್ಟಕ್ಕೂ ಮುಂಚೆಯೇ ಭಾರತದಲ್ಲಿ ಕುದುರೆಗಳಿದ್ದವು ಅನ್ನೋದು ಸಾಬೀತಾಗಿದೆ.




->> ಮೈಕಲ್ ಡ್ಯಾನಿನೋ ಎನ್ನುವವರು ಹಾಗು ಎ.ಘೋಷ್ ಕರ್ನಾಟಕದ ಕಲಬುರಗಿ ಜಿಲ್ಲೆಯ ಕೊಡೆಕಲ್, ರಾಯಚೂರು ಜಿಲ್ಲೆಯ ಹುಲ್ಲೂರು ಬಳಿ ನವಶಿಲಾಯುಗ ಕಾಲಕ್ಕೆ ಸೇರಿದ ಕುದುರೆಗಳ ಅವಶೇಷ ಸಿಕ್ಕಿರುವುದನ್ನ ಉಲ್ಲೇಖಿಸಿದ್ದಾರೆ.

->> ಪ್ರೊಫೆಸರ್ ಬಿ.ಲಾಲ್ ಎನ್ನುವವರು ಆರ್ಯರ ವಲಸೆಯ ಬಗ್ಗೆ ಸ್ಪಷ್ಟ ವಿವರಗಳನ್ನು ಇಟಲಿಯಲ್ಲಿ 2007ರಲ್ಲಿ ನಡೆದ 19ನೇ International Conference on South Asian Archeology  ತಿಳಿಸಿದ್ದಾರೆ. ಆರ್ಯರಲ್ಲಿ ಹಲವು ಪಂಗಡಗಳಿದ್ದವು ಉದಾಹರಣೆಗೆ 'ಆಯು' ಅನ್ನುವ ಪಂಗಡ ಸಿಂಧೂ, ಸರಸ್ವತಿ ನದಿ ದಡದಿಂದ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿಗೆ ಹರಡಿ ಗಾಂಧಾರಗಳಿಗೆ ಕಡೆಗೆ ಅಂದರೆ ಅಫ್ಘಾನಿಸ್ತಾನದ ಕಂದಹಾರ ಕಡೆ ಹೊರಡುತ್ತಾರೆ. ಹಾಗೆಯೇ ಕುರು ಮತ್ತು ಪಂಚಾಲರು ಇತ್ತ ಗಂಗಾ ನದಿಯ ಕಡೆ ಹರಡುತ್ತಾರೆ, ಸೋ ಆರ್ಯರು ಪಶ್ಚಿಮದತ್ತ ಹೊರಟರೆ ಹೊರತು ಆಕಡೆಯಿಂದ ಭಾರತಕ್ಕೆ ಬಂದವರಲ್ಲ.

->> ಅಮೇರಿಕದ ಜಿಮ್ ಶಾಫರ್ ಮತ್ತು ಡೈಯೇನ್ ಲಿಚೆನ್'ಸ್ಟೀನ್ ಎಂಬ ಚರಿತ್ರಾಕಾರರು ಈ Aryan invasion theory ಯೂರೋಪಿನ ಬಿಳಿಜನರ, ಸ್ವಪ್ರತಿಷ್ಠೆಯಿಂದ ಲೇಪಿತವಾದವು ಅಂತ ಅವರು ಬರೆದ ಪುಸ್ತಕ Aryan in South Asia: Evidence, interpretation and ideology ದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.


->> ಅಂಬೇಡ್ಕರರು ಸಹಿತ ಈ ಆರ್ಯ ದಾಳಿಯನ್ನು ಸುಳ್ಳು ಅಂತ ಅವರು ಬರೆದ "Who were Shudras?" ನಲ್ಲಿ ಉಲ್ಲೇಖಿಸಿದ್ದಾರೆ.

ಹೀಗೆ ಇನ್ನೂ ಹಲವಾರು ಸಂಶೋಧನೆಗಳು ಇಡೀ ಜಗತ್ತಿನ ಕಣ್ಣಿನ ಎದುರಿವೆ. ಸಂಶೊಧನೆಗಳನ್ನಂತು ಬಿಡಿ, ಆರ್ಯರು ಭಾರತಕ್ಕೆ ದಾಳಿ ಮಾಡಿದ ಮೇಲೆ ಇಲ್ಲಿ ವೇದಗಳನ್ನು ರಚನೆ ಮಾಡಿ ದೇವರು, ಭಯ ಭಕ್ತಿ ಅನ್ನೋ concept ಜನರ ತಲೇಲಿ ತುಂಬಿದರು ಅನ್ನೋದು Aryan invasion theory ಯ ವಾದ.


ಇದನ್ನ ಒಂದು ಹಂತದಲ್ಲಿ ಸರಿ ಅಂದುಕೊಂಡರೂ ಇನ್ನೂ ಕೆಲ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಅದೇನೆಂದರೆ ಆರ್ಯರು(ಬೆಳ್ಳಗಿನ ಜನ) ಬಂದಮೇಲೆ ಜಾತಿ ಅಥವಾ ವರ್ಣವ್ಯವಸ್ಥೆ ಹುಟ್ಟಿಕೊಂಡಿತ್ತು ಹಾಗು ದ್ರಾವಿಡರಲ್ಲಿ ಅಂತಹ ಯಾವುದೇ ವರ್ಣ ಅಥವಾ ಜಾತಿ ವ್ಯವಸ್ಥೆ ಇರಲಿಲ್ಲ ಅಂತಾದರೆ ಆರ್ಯರು ರಾಮಾಯಣ ರಚನೆ ಮಾಡುವಾಗ ಯಾಕೆ ಕಪ್ಪು ಬಣ್ಣದವನಾಗಿದ್ದ ಕ್ಷತ್ರಿಯ ಕುಲದ ರಾಮನನ್ನ ಹೀರೋ ಮಾಡಿ ಬ್ರಾಹ್ಮಣನಾಗಿದ್ದ ಬಿಳಿಯ ರಾವಣನನ್ನು ವಿಲನ್ ಮಾಡದ್ರು?

ಆರ್ಯರು ಬೆಳ್ಳಗಿದ್ದರು ವೇದಗಳು, ರಾಮಾಯಣ, ಮಹಾಭಾರತ ರಚಿಸಿದ್ದರು ಅಂತಾದರೆ ಮಹಾಭಾರತದ ಹೀರೋ ಆಗಿರುವ ಕೃಷ್ಣನನ್ನು ಯಾಕೆ ದ್ರಾವಿಡರ ರಿತಿಯಲ್ಲಿ ಕಪ್ಪು ನೀಲಿ ಬಣ್ಣದ ವ್ಯಕ್ತಿಯಾಗಿ ಚಿತ್ರಿಸಿದ್ದು?

ತಮ್ಮ ಮೂಲ ದೇವರಾದ ಶಿವನನ್ನೇಕೆ ಸ್ಮಶಾನವಾಸಿಯಾಗಿ ಮತ್ತೆ ಯಾಕೆ ದ್ರಾವಿಡರ ಹಾಗೆ ಅದೇ ಕಪ್ಪು ನೀಲಿ ಬಣ್ಣದ ವ್ಯಕ್ತಿಯಾಗಿ ಚಿತ್ರಿಸಿದ್ದು?

ತಾವೇ ಸೃಷ್ಟಿಸಿದ್ದ ಈ ಆರ್ಯರ ದಾಳಿ ಅನ್ನೋ ತಥಾಕಥಿತ ಥಿಯರಿ ಸ್ವತಃ ಇಂಗ್ಲೆಂಡಿನ BBC ಸಂಸ್ಥೆ ಒಪ್ಪಿಕೊಂಡಿದೆ ಆದರೆ ನಮ್ಮ ದೇಶದ ರಾಜಕಾರಣಿಗಳು ಮಾತ್ರ ಬ್ರಿಟಿಷರ divide and rule policy ಮಾತ್ರ ಇನ್ನೂ ಬಿಟ್ಟಿಲ್ಲ.

ಈ Aryan Invasion ಥಿಯರಿ ಬಹುತೇಕ ತಥಾಕಥಿತ ಶೂದ್ರ, ದಲಿತಪರ ಅಂತ ಮಾತನಾಡೋ ಜನರು ಈಗಲೂ ಇದೇ ನಿಜ ಅಂತ ವಾದಿಸುತ್ತಾರೆ, ಇವರೆಲ್ಲ ಅಂಬೇಡ್ಕರರನ್ನ ಆದರ್ಶವಾಗಿ ತಗೋತಾರೆ ಅದರೆ ಅದೇ ಅಂಬೇಡ್ಕರು ಈ "ಆರ್ಯ ದಾಳಿ" ಸುಳ್ಳು ಅಂತ ಹೇಳಿದ್ದನ್ನು ಕೇಳುವ ಸ್ಥಿತಿಯಲ್ಲಿಲ್ಲ.

ಒಟ್ಟಾರೆಯಾಗಿ ಬ್ರಿಟಿಷರು ನಮ್ಮ ಮಾನಸಿಕತೆಯನ್ನ ಚೆನ್ನಾಗಿ ಅರಿತುಕೊಂಡೇ ಈ theory ಹುಟ್ಟುಹಾಕಿದ್ದು ನಮ್ಮ ಈಗಿನ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಇಷ್ಟೆಲ್ಲಾ ಓದಿದ ಮೇಲೆ ನಿಮಗೆ ನಿಜವಾಗಲೂ ಈ ಆರ್ಯ ದ್ರಾವಿಡರು ಯಾರು ಅಥವಾ ಈ ಪದಗಳ ಅರ್ಥ ಏನು ಅನ್ನೋ ವಿಚಾರ ತಲೆಯಲ್ಲಿ ಹುಳ ಬಿಟ್ಟ ಹಾಗೆ ಆಗಿರುತ್ತೆ.

ಈ ಆರ್ಯ ದ್ರಾವಿಡ ಪದಗಳ ಉಲ್ಲೇಖ ನಮ್ಮ ಭಾರತೀಯ ಪುರಾತನ ಗ್ರಂಥಗಳಲ್ಲುಂಟು

ಆರ್ಯ ಅಂದರೆ ಅದೊಂದು ಗೌರವಸೂಚಕ ಪದ. ನಾವು 'ಸರ್' ಅಂತ ಹೇಗೆ ಮರ್ಯಾದೆಯಿಂದ ಸಂಬೋಧಿಸುತ್ತೀವೋ ಹಾಗೆಯೇ ಆರ್ಯ, ಅಯ್ಯ ಅನ್ನೋ ಹಲವಾರು ಶಬ್ದಗಳ ಮೂಲವೇ ಆರ್ಯ.

ಇನ್ನು ಈ ದ್ರಾವಿಡ ಅಂದರೆ ಅದೊಂದು ಒಂದು ನಿರ್ದಿಷ್ಟ ಪ್ರದೇಶವಾದ ದಕ್ಷಿಣ ಭಾರತವನ್ನ ಉಲ್ಲೇಖಿಸುವ ಶಬ್ದವೇ ಹೊರತು ಬ್ರಿಟಿಷರು ಸೃಷ್ಟಿಸಿದ "ಆರ್ಯ ದಾಳಿ"ಯಲ್ಲಿನ ದ್ರಾವಿಡದ ಉಲ್ಲೇಖವಲ್ಲ.

ಇಡೀ ವಿಶ್ವದಲ್ಲೇ ಎಲ್ಲರ ಚಿತ್ತ ಭಾರತದತ್ತ ಹರಿಯುವಂತೆ ತಮ್ಮ ವಿದೇಶಾಂಗ ನೀತಿಗಳು, ನಮ್ಮ ಸಂಸ್ಕೃತಿ, ತಂತ್ರಜ್ಞಾನದ ಮೂಲಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅವಿರತ ಶ್ರಮಪಡುತ್ತಿರಬೇಕಾದರೆ ನಾವು ಮಾತ್ರ ಯಾರೋ ಹೊರದೇಶದವರು ಬರೆದ ಸುಳ್ಳು ಗೊಳ್ಳು ಇತಿಹಾಸ ಓದಿ ಇನ್ನೂ ಜಾತಿ, ಮತ ಅನ್ನೋ ಸುಳಿಗೆ ಸಿಲುಕಿ ನಮ್ಮತನ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನ ಮರೆಯುತ್ತಿರೋದು ಅಥವಾ ಮರೆತಂತೆ ನಟನೆ ಮಾಡುತ್ತಿರೋದು ನಮ್ಮ ದೇಶಕ್ಕೆ ಮಾರಕವೇ ಅನ್ನಬಹುದು.

©Vinod Hindu Nationalist

Saturday, July 25, 2015

ಆರ್ಯ ದ್ರಾವಿಡರು ಎಂಬ ಬ್ರಿಟಿಷರು ಹಿಂದುಗಳನ್ನ ಒಡೆಯಲು ಕಟ್ಟಿದ ಕಟ್ಟುಕಥೆ

ಯಾರೀ ಆರ್ಯರು ದ್ರಾವಿಡರು??


ನಮ್ಮ ದೇಶದಲ್ಲಿ ನಮ್ಮ ದಲಿತ ಸಹೋದರರನ್ನು ತಾವು ಹಿಂದುಗಳು ಅಲ್ಲ ಬದಲಾಗಿ ತಾವು "ದ್ರಾವಿಡ"ರು, ಹಿಂದುಗಳೆಲ್ಲ "ಆರ್ಯ"ರು(ಹಿಂದುಗಳು) ಬೇರೆ ದೇಶದಿಂದ ಭಾರತಕ್ಕೆ ವಲಸೆ ಬಂದು ದ್ರಾವಿಡರನ್ನ ದಕ್ಷಿಣ ಭಾರತಕ್ಕೆ ಓಡಿಸಿದರು ಅನ್ನೋ ಕಟ್ಟುಕಥೆ ಹಾಗು ಮೋಸದ ಬಲೆಯಲ್ಲಿ ಬೀಳಿಸಲು ಕಮ್ಯೂನಿಶ್ಟರು, ಮುಸಲ್ಮಾನರು, ನಕ್ಸಲ್'ರು, ಕ್ರಿಶ್ಚಿಯನ್ನರು ಹಾಗು ಇತರೆ ದೇಶದವರು(ಭಾರತದ ವಿರೋಧಿ ರಾಷ್ಟ್ರಗಳ ಕೈವಾಡವೂ) ಪ್ರಯತ್ನಪಟ್ಟು ನಮ್ಮ ದಲಿತ ಸಹೋದರರನ್ನ ಹಿಂದು ಧರ್ಮದ ವಿರುದ್ಧ ದ್ವೇಷ ಕಾರುವ ಹಾಗೆ ಮಾಡ್ತಿದ್ದಾರೆ.

ತರಹದ ದ್ವೇಷದ ಬೆಂಕಿತನ್ನಲ್ಲಿ ತುಂಬಿಕೊಂಡು ದೇಶ ಹಾಳು ಮಾಡಲು ಹೋಗಿ ಭಾರತದ, ಹಿಂದುಗಳ ನೈಜ ಇತಿಹಾಸ ಅರಿತು ರಾಷ್ಟ್ರವಾದಿಯಾದ ಒಬ್ಬ ದಲಿತ ಸಹೋದರನ ಸಂಭಾಷಣೆ ಹೀಗಿದೆ ಓದಿ

ದಲಿತ
ಸಹೋದರ: ನಮಗೆ ಆರ್ಯರ ಕಾಲದ ಚರಿತ್ರೆಯನ್ನ ದುರುಪಯೋಗಪಡಿಸಿಕೊಂಡು ಧಾರ್ಮಿಕ ಶೋಷಣೆಯ ಬಗ್ಗೆ ನಮಗೆಲ್ಲ ಬ್ರೈನ್ ವಾಶ್ ಮಾಡುತ್ತಿದ್ದರು.

ನಾನು
: ಯಾವ ರೀತಿಯ ಬ್ರೈನ್ ವಾಶ್??

ದಲಿತ
ಸಹೋದರ: ಮೊದಲಿಗೆ, ಆರ್ಯರು ಭಾರತದವರೇ ಅಲ್ಲ ಎಂಬ ನಂಬಿಕೆಯನ್ನ ಬಿತ್ತಿ, ನಿಜವಾದ ಭಾರತದವರು ಇಲ್ಲಿನ ದ್ರಾವಿಡರು ಎಂಬ ವಾದ ಬೆಳೆಸಿ, ಅವರೇ ಇಂದಿನ ಶೂದ್ರರು ಎಂಬ ಚಿತ್ರಣವನ್ನ ದಲಿತರ ಮನಸ್ಸಿನಲ್ಲಿ ತುಂಬ್ತಿದಾರೆ. ಎಲ್ಲಿಂದಲೋ ಬಂದ ಆರ್ಯರು ದ್ರಾವಿಡರ ಮೇಲೆ ಸಾಂಸ್ಕ್ರತಿಕ ಹಾಗು ಧಾರ್ಮಿಕ ದಬ್ಬಾಳಿಕೆ ನಡೆಸುತ್ತಿದ್ದಾರೆ, ಇದರ ಜೊತೆಗೆ ದ್ರಾವಿಡರ ದೇಸಿ ದೇವರುಗಳನ್ನು ಕದ್ದು ನಮ್ಮ ದೇವರುಗಳನ್ನು ತಮ್ಮ ದೇವರಗಳ ಅಡಿಯಾಳು ಮಾಡ್ಕೊಂಡಿದಾರೆ, ಹೀಗೆ ನಮ್ಮಲ್ಲಿ ನಮ್ಮ ದೇಶದ ದಲಿತರಲ್ಲಿ ಇಂತಹ ದ್ವೇಷದ ಬೀಜ ಬಿತ್ತುತ್ತಿದ್ದಾರೆ, ಅದಕ್ಕೆ ನಾನು ಬಲಿಯಾಗಿದ್ದೆ.

ನಾನು
: ಇದಕ್ಕೆ ನಿಮ್ ಜೀವನ ಹೇಗೆ ಬದಲಾವಣೆ ಆಯ್ತು?

ದಲಿತ
ಸಹೋದರ: ಹಲವಾರು ರೀತಿಯಲ್ಲಿ, ಮೊದಲನೆಯದಾಗಿ ನಾನು ಸಂಘಸಂಸ್ಥೆಗಳಗಳ ಸಂಪರ್ಕ ಪಡೆದು ಅವರ ತತ್ವಗಳಿಗೆ ಮರುಳಾಗಿ, ಅವರ ಮಾನಸಿಕ ಜೀತದಾಳಾಗಿದ್ದೆ. ನಾವು ಹಿಂದು ಧರ್ಮ ಅಂತ ಕರೆಯುವ ಧರ್ಮ ಧರ್ಮವೇ ಅಲ್ಲ ಅದು ನಮ್ಮದಲ್ಲ ಅಂತ ನಾನು ಯೋಚಿಸಲಾರಂಭಿಸಿದೆ. ಅವರು ನನ್ನನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ನಕ್ಸಲೈಟ್'ಗಳ ಸಂಪರ್ಕಕ್ಕೆ ನೂಕಿ ನನ್ನನ್ನು ನಕ್ಸಲೈಟ್ ಮಾಡಿದರು. ನಾನು ನಕ್ಸಲೈಟ್' ಪರವಾಗಿ ಮಾತನಾಡಲು ರೆಡಿಯಾದೆ

ನಾನು
: ಯಾವ ರೀತಿಯಾಗಿ?

ದಲಿತ
ಸಹೋದರ: ಉದಾಹರಣೆಗೆ, ಆರ್ಯರಿಂದ ನಮ್ಮ ದೇಶವನ್ನ ನಾವು ಹಿಂದಕ್ಕೆ ಕಸಿದುಕೊಳ್ಳಬೇಕು, ನಮಗೆ ಸ್ವತಂತ್ರ ದೇಶ "ದ್ರಾವಿಡ ದೇಶ" ಸ್ರಷ್ಟಿಸಬೇಕು ಅಂತ

ನಾನು
: ಇದನು ಹುಟ್ಟು ಹಾಕಿದ್ದು ಯಾರು?

ದಲಿತ
ಸಹೋದರ: ಇದಕ್ಕೆ ಉತ್ತರ ಸುಲಭವಾಗಿಲ್ಲ, ಆದರೆ ಇದರ ಹಿಂದೆ ಹೊರಗಿನ ಧರ್ಮಗಳ ಕೈವಾಡವಿದೆಯೆಂದೂ, ಹೊರದೇಶಗಳ ಪಿತೂರಿಯಿದೆಯೆಂದೂ, ನನಗೆ ಖಚಿತವಾಗಿ ಕಂಡುಬಂದಿದ್ದು ನಾನು ಅಮೇರಿಕಕ್ಕೆ ಹೋದಾಗ??

ನಾನು
: ಅಮೇರಿಕಕ್ಕೆ ಯಾಕೆ?

ದಲಿತ
ಸಹೋದರ: ನಾನು ಅಮೇರಿಕಕ್ಕೆ ಹೋಗಲು ಬಹುಮುಖ್ಯ ಕಾರಣ ಅಂದ್ರೆ ನನ್ನ ಆಗಿನ ದೇಶವಿದ್ರೋಹ ಚಿಂತನೆಗೆ ಪೂರಕವಾಗಿ ವೈಜ್ನಾನಿಕ ಆಧಾರ ಹುಡುಕೋದಾಗಿತ್ತು. ಅಂತಹ ಆಧಾರಗಳಿದ ಕೋಟ್ಯಂತ ಶೂದ್ರರನ್ನ(ದಲಿತರನ್) ಪ್ರಚೋದಿಸಿ ನನ್ನ "ದ್ರಾವಿಡ ದೇಶ" ಕಲ್ಪನೆ ಸಾಕಾರಗೊಳಿಸೋದಾಗಿತ್ತು.

ನಾನು
: ಯಾವ ರೀತಿಯ ವೈಜ್ನಾನಿಕ ಆಧಾರ?

ದಲಿತ
ಸಹೋದರ: DNA based ಅನುವಂಶಿಕ ಧಾತುಗಳನ್ನ ಆಧರಿಸಿದ proofs

ನಾನು
: ಹೇಗೆ?

ದಲಿತ
ಸಹೋದರ: ನಾನು ಕೇಳಿದ ಆರ್ಯ ಚರಿತ್ರೆ - ದ್ರಾವಿಡರ ಶೋಷಣೆ ನಿಜವಾಗಿದ್ದಲ್ಲಿ ಅದನೆನ್ನು 2 ರೀತಿಯಲ್ಲಿ DNA ಪರೀಕ್ಷೆಗೆ ಒಡ್ಡಬಹುದು.........

ಆರ್ಯರು
ನಿಜಕ್ಕೂ ಹೊರಗಿನಿಂದ ಬಂದದ್ದು ಸತ್ಯವಾಗಿದ್ದರೆ ಹಾಗು ದ್ರಾವಿಡರು ಮೂಲಭಾರತದವರೇ ಆಗಿದ್ದರೇ, ಇವರಿಬ್ಬರ DNA ನಲ್ಲಿ ವ್ಯತ್ಯಾಸವಿರಬೇಕು.

ಆರ್ಯರೆಂದರೆ
ಯುರೋಪಿನಿಂದ ಭಾರತದ ಮೇಲೆ ದಾಳಿಮಾಡಿ ಬಂದವರೆಂದೂ ನನಗೆ ಗೊತ್ತಿದ್ದಿದ್ದರಿಂದ ಅವರ ಹಾಗು ನಮ್ಮ ದೇಶದ ದ್ರಾವಿಡರ(ದಕ್ಷಿಣ ಭಾರತದ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) Tissue Sample ತಗೊಂಡು ಅಮೇರಿಕಕ್ಕೆ ಹೋದೆ - ಅವುಗಳ ಮಧ್ಯೆ ಇರುವ Difference ತೋರಿಸಿಕೊಡಲು

ನಾನು
: ನಿಮಗೆ ಅಂಥಹ ಪುರಾವೆ ಸಿಕ್ಕಿತೆ?

ದಲಿತ
ಸಹೋದರ: ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಮುನ್ನ ನಾನು ಅಲ್ಲಿ ಮುಖಾಮುಖಿಯಾದ ಕೆಲ ಘಟನೆಗಳನ್ನ ಹೇಳ್ತೀನಿ. ಅವು ವೈಯಕ್ತಿಕವಾಗಿದ್ರು ಇಲ್ಲಿ ಹೇಳಲೇಬೇಕಾದುದು, ಅವು ನನ್ನ ಕಣ್ಣು ತೆರೆಸಿದ್ವು.

ನಾನು: ಏನಂತಹ ವಿಷಯಗಳು?

ದಲಿತ ಸಹೋದರ: ನಾನು ಪಿ.ಎಚ್.ಡಿ.ಗೆ ಸೇರಿಕೊಂಡಾಗ DNA ಸಂಶೋಧನೆಯಲ್ಲಿ ನನಗೆ ಯಾವುದೇ ಪರಿಣಿತಿ ಇರಲಿಲ್ಲ ಸೋ ನಾನು ನನ್ನ Research ಮಾಡೋಕೆ Guide ಆಗಿ ಒಬ್ಬ ವ್ಯಕ್ತಿಯನ್ನ ಆರಿಸಿಕೊಂಡೆ, ವ್ಯಕ್ತಿ ಸೂಕ್ತ ವ್ಯಕ್ತಿನೇ ಆಗಿದ್ರು, 30 ವರ್ಷಗಳ ಹಿಂದೆ ಅಮೇರಿಕಾ ಹೋಗಿ ಅಲ್ಲೇ ನೆಲೆಸಿರೋರಾಗಿದ್ರು

ಅವರ
ಜೊತೆ ನನ್ನ ಆರ್ಯ-ದ್ರಾವಿಡ  ಕಥೆಗಳನ್ನ Discuss ಮಾಡೋಕೆ ಶುರು ಮಾಡ್ದೇ, ಹೀಗೆ ಆರ್ಯರು ದ್ರಾವಿಡರನ್ನ ಶೋಷಣೆಗೆ ಒಳಪಡಿಸಿದರು ಎಂದು ನಾನು ನಾನು ವಾದಿಸಿದಾಗ ಅವರು ಕೇಳಿದ ಪ್ರಶ್ನೆಗಳು ನನ್ನನ್ನ ಚಕಿತಗೊಳಿಸಿದ್ವು.

ನಾನು: ಅದೆಂತ ಪ್ರಶ್ನೆಗಳು?


ಇಲ್ಲಿಂದ
ಗೈಡ್ ಹಾಗು ದಲಿತ ಸಹೋದರನ Discussion ನೋಡಿ


ಗೈಡ್
: ಯಾರೋ ನಿಮ್ಮನ್ನು ಶೋಷಣೆ ಮಾಡಿದರು ಎಂದು ಹೇಳಿಕೊಳ್ಳಲು ನಿಮಗೆ ಬೇಸರವಿಲ್ವಾ?

ದಲಿತ ಸಹೋದರ: ಬೇಸರ ಯಾಕಾಗ್ಬೇಕು, ಅದು ಸತ್ಯವಿರೋವಾಗ?

ಗೈಡ್: ಅದು ಸತ್ಯ ಆಗಿದ್ರೆ ನಿಮಗೆ ನಿಜಕ್ಕೂ ಬೇಸರವಾಗಿರ್ಬೇಕು.

ದಲಿತ ಸಹೋದರ: ಯಾಕೆ?

ಗೈಡ್: ಯಾರೋ ಶೋಷಣೆ ಮಾಡಿದರು ಎಂದುಕೊಳ್ಳೋಣ, ಆದರೆ ದ್ರಾವಿಡರು ಶೋಷಣೆ ಮಾಡಿಸಿಕೊಳ್ಳೋಷ್ಟು ದಡ್ಡರಾಗಿದ್ರು ಅಂತಾನೇ ಅರ್ಥ ಅಲ್ಲವೇ?

ದಲಿತ ಸಹೋದರ: ಅವರು ದಡ್ಡರು ಎಂದಲ್ಲ, ಬದಲಿಗೆ ಅವರಿಗೆ ತಮ್ಮ ಅರಿವು ಮೂಡಲೂ ಬಿಡದಂತೆಅವರನ್ನು ಆರ್ಯರು ಶೋಷಣೆ ಮಾಡಿದ್ರು

ಗೈಡ್: ಅರಿವು ಮೂಡದಂತೆ ಮಾಡಲು ಬಿಡದಂತೆ ಶೋಷಣೆ start ಅದಾಗಲೇ ಯಾಕೆ ದ್ರಾವಿಡರು ಎಚ್ಚೆತ್ತುಕೊಳ್ಳಲಿಲ್ಲ?

ದಲಿತ ಸಹೋದರ: ಧರ್ಮದ ಹೆಸರಲ್ಲಿ ನಮ್ಮನು ಕಟ್ಟಿಹಾಕಿದರು. ಧರ್ಮವನ್ನೇ ಒಂದು ಆಯುಧವನ್ನಾಗಿ ಉಪಯೋಗಿಸಿ ನಮ್ಮನ್ನಾ ಶೋಷಿಸಿದ್ರು.

ಗೈಡ್: ಧರ್ಮವನ್ನೇ ಯಾಕೆ ಆಗಲೇ ವಿರೋಧಿಸಲಿಲ್ಲ?

ದಲಿತ ಸಹೋದರ: ಇದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ಹೌದು, ಶೋಷಣೆ start ಆಗುವ ಮುನ್ನ ಎಲ್ಲರೂ ಸಮಾನರೇ ಆಗಿರಬೇಕು, then after ಎಲ್ಲೋ ಒಂದೆಡೆ ಯಾವುದೋ ಒಂದು ಕಾಲಘಟ್ಟದಲ್ಲಿ ಶೋಷಣೆ start ಆಗಿರಬಹುದು, ಆದರೆ ಆಗಲೇ ಯಾಕೆ ನನ್ನವರು(ದ್ರಾವಿಡರು) ವಿರೋಧ ತೋರಲಿಲ್ಲ. ಶತಮಾನಗಳ ಕಾಲ ಯಾಕೆ ಮೌನವಾಗಿದ್ರು, ನನ್ನವರೇಕೆ ವಿರೋಧ ತೋರಲಿಲ್ಲ. ನನ್ನವರೇಕೆ ಶೋಷಣೆಗೆ ಬಲಿಯಾದರು ಎಂದು ನಾನು ಯೋಚಿಸುತ್ತಾ ಕುಳಿತಾಗ ನನ್ನ ಗೈಡ್ ಹೇಳಿದರು.

ಗೈಡ್: ಇಲ್ಲಿ ಕೇಳಿ, ಯಾರೋ ನನಗೆ ಮೋಸ ಮಾಡಿಬಿಟ್ಟರು ಎಂದು ಹೇಳೋರನ್ನ ನಾನು ಗೌರವಿಸಲ್ಲ. ಮೋಸಕ್ಕೆ ಬಲಿಯಾಗೊಂತ ಅಮಾಯಕರೆಂದು ಕರುಣೆಯೂ ತೋರಿಸಲ್ಲ. ಬದಲಿಗೆ ಬೇರೋಬ್ಬರು ಮೋಸ ಮಾಡಿದ್ದರು, ಅದನ್ನ ಅರಿಯದೇ ನಿದ್ದೆ ಮಾಡೋ ಸೋಂಬೇರಿಗಳು & ಅಂತಹ ನಿದ್ದೆಯಿಂದ ಎದ್ದು ನಾನು ಮೋಸ ಹೋಗ್ಬಿಟ್ಟೆ ಅಂತ ದುಃಖಿಸುವ "ಅಳಬುರಕಿ ದಡ್ಡರು" ಅಂತೆ ಕರೀತಿನಿ

ದಲಿತ ಸಹೋದರ: ನನಗೂ ಅವರ ಮಾತು ನಿಜ ಅನ್ಸಿತ್ತು, ಹೌದು ನನ್ನವರನ್ನು(ದ್ರಾವಿಡರನ್ನ) ಶೋಷಣೆ ಮಾಡಿದ್ದರೆ 4-5 ಸಾವಿರ ವರ್ಷಗಳ ನಂತರ ಅವರು(ಆರ್ಯರು) ಮೋಸ ಮಾಡಿಬಿಟ್ಟರು ಅನ್ನೋ ಬದಲು ನಾವು ಮೋಸ ಹೋಗಿದ್ದೇ ತಪ್ಪು ಎಂದು ತಿದ್ದಿಕೋಳ್ಳೋದು ಜಾಣತನ ಅಲ್ವೇ.

ಆದರೂ ನಾವು ಚರಿತ್ರೆಯಲ್ಲಿ ನಡೆದ ಶೋಷಣೆಯನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ. for example ದ್ರಾವಿಡರು ಶೋಷಣೆಗೆ ಒಳಗಾಗಳು ಆಗ್ ಮೇಲಿನ ಜಾತಿಯವರು ಬಳಸಿದ್ದ ಸಂಸ್ಕ್ರತವೇ ಕಾರಣ. ಅದರಲ್ಲಿ ರಚಿಸಿದ ಜ್ನಾನವನ್ನು ತಮಗಲ್ಲದೇ ಬೇರೆಯವರಿಗೆ ಸಿಗದಂತೆ ಕಾಪಾಡಿಕೊಂಡರು.

ಗೈಡ್: ಹೇಗೆ?

ದಲಿತ ಸಹೋದರ: ದ್ರಾವಿಡರಿಗೆ ಸಂಸ್ಕ್ರತವನ್ನ ಕಲಿಯೋಕೆ ಬಿಡಲಿಲ್ಲ, ಅವರು ಸಂಸ್ಕ್ರತ ಕಲಿಯುವುದು ಧರ್ಮವಿರೋಧ ಅಂದ್ರು.

ಗೈಡ್: ಇದೆಲ್ಲ ನಿಮ್ಮ ಭ್ರಮೆ & ಇತ್ತೀಚಿನ false thinking ಅಷ್ಟೇ

ದಲಿತ ಸಹೋದರ: How?

ಗೈಡ್:

1) ರಾಮಾಯಣ ಬರೆದೋರ್ಯಾರು? "ವಾಲ್ಮೀಕಿ". ಅತನು ಬೇಡ ಅಲ್ಲವೇ, ಅಂದರೆ ಒಂದು ಬುಡಕಟ್ಟಿನ ಜನಾಂಗಕ್ಕೆ ಸೇರಿದವ. ನಿನ್ನ ದ್ರಷ್ಟಿಯಲ್ಲಿ ಅತನು ದ್ರಾವಿಡನೇ ಇರಬೇಕಲ್ಲವೇ?

2) ಮಹಾಭಾರತ ಬರೆದದ್ದು "ವ್ಯಾಸ" ಅವನು ಒಬ್ಬ ಬೆಸ್ತರವನು. ನಿನ್ನ ಪರಿಕಲ್ಪನೆಯಲ್ಲಿ ಅವನು ಆರ್ಯ ಇರಲಿಕ್ಕಿಲ್ಲ.

3) ಕಾಳಿದಾಸ ಯಾರು ಗೊತ್ತಲ್ಲ? ಆತ ಕುರುಬ, ಅಂದರೆ ನಿನ್ನ ಪ್ರಕಾರ ದ್ರಾವಿಡನೇ ಆಗಿರಬೇಕು.

4) ಹಾಗೆಯೇ ವೇದಗಳನ್ನ ರಚಿಸಿದವರು "ದನಗಾಹಿಗಳು" ಎಂದು ಚರಿತ್ರಾಕಾರರೇ ಹೇಳ್ತಾರೆ, ದನಗಾಹಿಗಳು ಬಹುಷಃ ಗೊಲ್ಲರು ಅಥವಾ ಯಾದವರು ಅಲ್ಲವೇ?

ಅಂದರೆ ಅವರೆಲ್ಲ ಬಹುಷಃ  ಬ್ರಾಹ್ಮಣರೇ ಅಲ್ಲ ನಿಜ ಅಲ್ವೆ ಒಪ್ಗೋತಿರಾ?

ಇವರೆಲ್ಲ ನಿನ್ನ ದ್ರಷ್ಟಿಯಲ್ಲಿ ದ್ರಾವಿಡರಾಗಿದ್ದವರು. ಸಂಸ್ಕ್ರತದಲ್ಲಿ ರಾಮಾಯಣ, ಮಹಾಭಾರತ, ಶಾಕುಂತಲ ಮುಂತಾದ ಮೇರುಕ್ರತಿಗಳನ್ನ, ವೇದಗಳನ್ನ ರಚಿಸಿರಬೇಕಾದರೆ ಅವರಿಗೆ ಸಂಸ್ಕ್ರತ knowledge ಪರಿಣಿತಿ ಇತ್ತು ಅಂದಂಗೆ ಅಲ್ವಾ? ದ್ರಾವಿಡರಿಗೆ ಸಂಸ್ಕ್ರತ ಕಲಿಯಲು ನಿಷೇಧವಿದ್ರೆ ಕ್ರತಿಗಳ ರಚನೆ ಅವರಿಂದ ಹೇಗೆ ಸಾಧ್ಯ ಆಗ್ತಿದ್ವು?

ದಲಿತ ಸಹೋದರ: ಮತ್ತೇ ಈಗಿನ ಬ್ರಾಹ್ಮಣರು ಮಾತ್ರ ಯಾಕೆ ವೇದಗಳನ್ನ contract ಪಡೆದಂತೆ ವರ್ತಿಸ್ತಾರೆ?

ಗೈಡ್: ಅವರು(ಬ್ರಾಹ್ಮಣರು) ಹೇಳೋದನ್ನ ನೀವು ಒಪ್ಪುತ್ತೀರಿ ಅದಕ್ಕೆ. ರಾಮಾಯಣವನ್ನ ಸುಡಬೇಕು, ಭಗವದ್ಗೀತೆಯನ್ನ ಸುಡಬೇಕು ಅಂತ ದ್ರಾವಿಡಪರ ವಾದಿಗಳು ಹೇಳೋದನ್ನ ಕೇಳಿದ್ರೆ ನನಗೆ ನಗು ಬರತ್ತೆ, ಯಾಕಂದ್ರೆ ಅವು ಅವರದ್ದೇ ಕ್ರತಿಗಳು, ಅವರದ್ದೇ ಆಸ್ತಿ, ಅವರೇ ತಮ್ಮ ಗ್ರಂಥಗಳನ್ನ ಧಿಕ್ಕರಿಸಿದಾಗ ಹಾಗೇ ಅವುಗಳನ್ನ ಅನಾಥವಾದಾಗ ಯಾರೋ ತಮ್ಮ ಸ್ವತ್ತು ಮಾಡ್ಕೊಂಡ್ರಿಯಾ ಅದು ಯಾರ ತಪ್ಪು??

ದಲಿತ ಸಹೋದರ: ನನಗೆ ಅವರ ವಾದದಲ್ಲೂ ಸತ್ಯವಿದೆ ಅನ್ನಿಸ್ತು

ಗೈಡ್: ಹಾಗೆಯೇ 4 ವರ್ಣಗಳು ಬಂದಿರೋದು ಆರ್ಯಕಾಲದಲ್ಲಿನ ಸಮಾಜದಿಂದಲೇ ಅಲ್ವೇ?

ದಲಿತ ಸಹೋದರ: ಹೌದು

ಗೈಡ್: 4 ವರ್ಣಗಳು ಯಾವುವು? ಬ್ರಾಹ್ಮಣ, ಕ್ಷತ್ರಿಯ, ವೈಶ್ಯ & ಶೂದ್ರ...... ಹಾಗೆ 4 ವರ್ಣಗಳನ್ನ ಮಾಡಿದ್ದು ಯಾವ ಜನರನ್ನ? ಆಗ ಅಲ್ಲಿದ್ದ ಎಲ್ಲರನ್ನೂ ಸೇರಿಸಿ, ಅಂದರೆ ಆರ್ಯ ಸಮಾಜದಲ್ಲಿ ಶೂದ್ರರೂ ಸೇರಿದ್ದಾರೆ ಎಂದರ್ಥ ಅಲ್ವೇ? ಅಂದರೆ ಅಂದಿನ ಶೂದ್ರರೂ ಆರ್ಯರೇ ಅಲ್ವೇ? ಆರ್ಯರು ಬೇರೆ, ದ್ರಾವಿಡರು ಬೇರೆ ಎಂಬ ವಾದ, ಭೇಧ ಹುಟ್ಟುಹಾಕಿದ್ದೇ ಬ್ರಿಟಿಷರು ಭಾರತಕ್ಕೆ ಬಂದಮೇಲೆ

ದಲಿತ ಸಹೋದರ: ಹಾಗಿದ್ದರೆ ವೇದಕಾಲದಲ್ಲಿ ಬಿಳಿ ಮತ್ತು ಕಪ್ಪು ಜನರ ಮಧ್ಯೆ ನಡೆಯುತ್ತಿದ್ದ ಕಲಹಗಳು??

ಗೈಡ್: ಮೊದಲನೆಯದಾಗಿ ವೇದ ಕಾಲದಲ್ಲಿ ಬಿಳಿ ಹಾಗು ಕಪ್ಪು ಎಂಬ ಎರಡು ಪಂಗಡಗಳಿದ್ದವು ಅವು ಸದಾ ಜಗಳದಲ್ಲಿ ತೊಡಗಿರುತ್ತಿದ್ದವು ಅನ್ನೋದು ಪಾಶ್ಚಾತ್ಯರ ವ್ಯಾಖ್ಯಾನ. ಎಲ್ಲ ನಾಗರೀಕತೆಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಕಲಹಗಳು ಎಲ್ಲ ಕಡೆಯೂ, ಎಲ್ಲರ ಚರಿತ್ರೆಯಲ್ಲಿಯೂ ಇದ್ದೆ ಇವೆ.

ಇವನ್ನು ಎರಡು ಜನಾಂಗಗಳ ನಡುವಿನ ಯುದ್ಧ ಅನ್ನುವುದಕ್ಕಿಂತ 'ಜ್ಞಾನ ಮತ್ತು 'ಅಜ್ಞಾನ'ಗಳ ಮಧ್ಯದ ಯುದ್ಧ ಅಷ್ಟೇ..... ಈಜಿಪ್ಟ್, ಪರ್ಶಿಯಾ, ಝೋರಾಸ್ಟ್ರದವರು, ಇವರೆಲ್ಲರಲ್ಲಿಯೂ 'ಕತ್ತಲು' ಮತ್ತು 'ಬೆಳಕು' ಜನರ ಮಧ್ಯೆ ಎಂದು ಕಲಹಗಳಿದ್ವು....... ಹಾಗೆಯೇ "ಬೈಬಲ್"ನಲ್ಲಿ ಹೇಳಿರುವ ದೇವರು ಅತ್ತು ಸನಾತರ ಮಧ್ಯೆ ಕೂಡ. ಇಂತಹ ಹಿನ್ನೆಲೆಯಿಂದ ಯೂರೋಪಿನ ಜನ ಆರ್ಯರ ಅಂತರ'ಕಲಹಗಳಿಗೆ 'ಕರಿ'-ಶೂದ್ರರು ಮತ್ತು 'ಬಿಳಿ'-ಆರ್ಯರ ಮದ್ಯದ ಕಲಹ ಎಂಬ ಅರ್ಥ ಕೊಟ್ಟರು. ಅದನ್ನು ಮತ್ತು glorify ಮಾಡಿ ನಮ್ಮಲ್ಲಿ ಮಾತ್ರ(Only in India) ಇಂಥಹ ಅನ್ಯಾಯ ನಡೀತಿದೆ ಅನ್ನೋ ಭಾವ, ಮನಸ್ಥಿತಿ ತುಂಬಿಬಿಟ್ಟರು.

ಇದೆಲ್ಲದರಿಂದ ಅವರು ಮಾಡಿದ್ದೇನು ಗೊತ್ತೆ?

ದಲಿತ ಸಹೋದರ: ಏನು?

ಗೈಡ್: ನಿಮಗಿಂತ ನಾವು ಮೇಲು, ಉಚ್ಚ ಸಂಸ್ಕ್ರತಿಯವರು ಎಂಬ ಮಾನಸಿಕ ದರ್ಬಾರು ನಡೆಸಿದರು. ಭಾರತಕ್ಕೆ ಬಂದು ನೆಲೆಸಿರೋ "ಡೇವಿಡ್ ಫ್ರಾಲಿ" ಅನ್ನೋರು ಹೀಗೆ ಬರೀತಾರೆ:

This served a social, political and economic purpose of domination, proving the superiority of Western culture, religion or political system……. It makes Hindus feel that their culture is not great…….. Western Vedic scholars did in the intellectual sphere what the British army did in the political realm- discredit, divide and conquer the Hindus.

ನೀವು ಆರ್ಯರ ದೇವರು ಬೇರೆ, ದ್ರಾವಿಡರ ದೇವರು ಬೇರೆ ಎಂದಿರಿ. ಹಾಗೆಯೇ ನಿಮ್ಮ ದೇವರುಗಳನ್ನು ಕಸಿದುಕೊಂಡು ಅವರು(ಆರ್ಯರು) ಅಧಿಪತ್ಯ ಸಾಧಿಸಲು ಪ್ರಯತ್ನಿಸಿದ್ದಾರೆ ಎಂದೂ complaint ಮಾಡ್ತೀರ.... ಆದರೆ ನಿಮ್ಮದೇ ದೇವರುಗಳನ್ನ ನೀವು ಅನಾಥರನ್ನಾಗಿಸಿ ಒಪ್ಪದೇ ಇದ್ದಾಗ(example ಕರುಣಾನಿಧಿ & Tamil Nadu political people) ದೇವರುಗಳನ್ನ ವ್ಯಾಪಾರ ಮಾದೂವಾ ಜಾಣತನ ಅವರು(ಆರ್ಯರು) ತೋರಿಸಿದರು ಅಂದ್ರೆ ಅದಕ್ಕೆ ನೀವೇ ಅವಕಾಶ ಮಾಡಿಕೊಟ್ಟದ್ದು ಅಲ್ವಾ?

ದಲಿತ ಸಹೋದರ: ಹೇಗೆ ನನಗೆ ಅರ್ಥವಾಗಲಿಲ್ಲ?

ಗೈಡ್: ಸಾಮಾನ್ಯವಾಗಿ ಚರಿತ್ರಾಕಾರರು ಹೇಳುವಂತೆ ಆರ್ಯರು ಬೆಳ್ಳಗಿದ್ದವರು, ದ್ರಾವಿಡರು ಕಪ್ಪು ಜನ ಅಲ್ವೇ?

ದಲಿತ ಸಹೋದರ: ಹೌದು ಸತ್ಯ

ಗೈಡ್: ಹಾಗಿದ್ದಲ್ಲಿ ಕೃಷ್ಣ ಮತ್ತು ರಾಮ, ಹನುಮಂತ, ಈಶ್ವರ್, ಪಾರ್ವತಿ ಇವರೆಲ್ಲ ಯಾವ ಬಣ್ಣ?

ದಲಿತ ಸಹೋದರ: ನೀಲಿ

ಗೈಡ್: ನೀಲಿ ಅಂದರೆ ಕಪ್ಪು, ಹಾಗಿದ್ಡ್ರಿಯಾ ಅವರು ಬೆಳ್ಳಗಿನ ಜನ ಅಲ್ಲ, ಅಂದರೆ ಅವರು ದ್ರಾವಿಡರಾಗಿರಬೇಕು ಅಲ್ಲವೇ?

ದಲಿತ ಸಹೋದರ: ಹೌದು

ಗೈಡ್: ಆದರೆ ಇಂದು ರಾಮ, ಕೃಷ್ಣರನ್ನ ಪೂಜಿಸಬೇಡಿ ಅಂತ ಹೇಳ್ತಿರೋದು ದ್ರಾವಿಡಪರ ವಾದಿಗಳೆ, ಇದು ವಿಪರ್ಯಾಸ ಅಲ್ಲವೇ? ನಿಮ್ಮ ದೇವರುಗಳನ್ನು ನೀವೇ ಪೂಜಿಸಬೇಡಿ ಅಂತ ಹೇಳಿದಹಾಗೆ ಅಲ್ಲವೆ?

ಇಷ್ಟು ಸಂಭಾಷಣೆ ದಲಿತ ಸಹೋದರ ಹಾಗು ಆತ ಮಾಡಬೇಕೆಂದಿದ್ದ DNA research ಮಾಡ್ಬೇಕು ಅಂತ ಆರಿಸಿಕೊಂಡಿದ್ದ ಗೈಡ್' conversation.


ಮಧ್ಯೆ ದಲಿತ ಸಹೋದರ ನಡೆಸುತ್ತಿದ್ದ DNA ಬಗೆಗಿನ research ಕೂಡ ಮುಂದುವರೆದಿತ್ತು, ಅವುಗಳಿಂದ ಬರುತ್ತಿರೋ results‌ ಗಳಿಂದ ಈತ shock ಆಗಿದ್ದ

ಈಗ ಮತ್ತೇ ನನ್ನ ಆತನ conversation ಶುರು ಆಯ್ತು

ದಲಿತ ಸಹೋದರ: ಅಧ್ಯಯನದಲ್ಲಿ ನನಗೆ ದೊರೆತ results ‌ಗಳಿಂದ shock ಆಗಿದ್ದನ್ನ ಆತ ತಿಳಿಸಿದ

ನಾನು: ಎಂಥಹ results ಅವು?

ದಲಿತ ಸಹೋದರ: ಕಾರಣ, ನನಗೆ ದೊರಕಿದ DNA results ನನ್ನ expectations ಗೆ ವಿರುದ್ಧವಾದಿದ್ದವು, ನನ್ನ ನಂಬಿಕೆಗೆ(ಆರ್ಯ-ದ್ರಾವಿಡ ವಾದದ) ವಿರುದ್ಧವಾಗಿದ್ದವು.

ನಾನು: ಅಂದರೆ?

ದಲಿತ ಸಹೋದರ: ನಾನು ಈಗಾಗಲೇ ಹೇಳಿದ ಹಾಗೆ ಆರ್ಯರೆಂದು ನಂಬಲಾದ ಭಾರತದ ಗುಂಪು, ದ್ರಾವಿಡರಿಗಿಂತ ಭಿನ್ನ diffrent ಅನ್ನೋದು ನನ್ನ expectation ಆಗಿತ್ತು, ಅಲ್ಲದೇ ವರ್ಣಗಳ(ಆರ್ಯ-ದ್ರಾವಿಡರ) ಮಧ್ಯೆ ರಕ್ತ ಸಂಬಂಧವನ್ನು ನಿಷೇಧಿಸಿದ ಕಾರಣ ಎರಡು ಗುಂಪುಗಳ ಮಧ್ಯೆ ಸಾಕಷ್ಟು DNA diffrence ಇರವಹುದು ಅನ್ನೋದು ನನ್ನ ವಾದವಾಗಿತ್ತು. ಆದರೆ ಯಾವುದೇ genetica elements exchange ಆಗಿದ್ರೆ ಅದು ಇತ್ತೀಚೆಗೆ ನಡೀತಿರೋ ಅಂತರ್ಜಾತಿ ವಿವಾಹಗಳಿಂದ ಮಾತ್ರ ಸಾಧ್ಯ ಅನ್ನೋದು ನನ್ನ ಕಲ್ಪನೆ ಆಗಿತ್ತು

ನಾನು: what was ur results then?

ದಲಿತ ಸಹೋದರ: ನಾನು Test ಮಾಡಿದ್ದು, ನಮ್ಮ ದೇಹದಲ್ಲಿನ cells ಹಾಗು ಅವಕ್ಕೆ ಬೇಕಾದ ಶಕ್ತಿಯನ್ನ ಉತ್ಪಾದಿಸೋ ಮೈಟೋಕಾಂಡ್ರಿಯ ಎಂಬ cells DNA ಬಗ್ಗೆ........ ಒಂದೇ ಜಾತಿಯ ಒಳಗೆ ಸಂಬಂಧ ಬೆಳೆಸಿದರೂ ಸರಿ ಅಥವಾ ಬೇರೆ ಪಂಗಡದ ಸ್ತ್ರೀಯ ಪ್ರವೇಶವಾಗಿ ಆಕೆಯೂ ವಂಶಾದ್ ಉದ್ಧಾರಕ್ಕೆ ಕಾರಣವಾಗಿದ್ದಾರೆ, ಅದನ್ನು ಮೈಟೋಕಾಂಡ್ರಿಯಗಳ research ಡೀಮ್ಡ್ ಸುಲಭವಾಗಿ identify ಮಾಡಬಹುದು.

ನಾನು: ಮಾರಯ ನಿನ್ನ results ಏನಿತ್ತು ಅದನ್ನ ತಿಳಿಸು, curiosity ತಡೆಯೋಕ್ಕಾಗ್ತಿಲ್ಲ.

ದಲಿತ ಸಹೋದರ: ಎಲ್ಲ  research ಗಳಿಂದ ನನಗೆ ತಿಳಿದುಬಂದದ್ದು 2 ವಿಷಯಗಳು.

ಮೊದಲನೆಯದಾಗಿ ಆರ್ಯರು ಅಥವಾ ವೇದಗಳನ್ನ ರಚಿಸಿದ ಜನ ಭಾರತದ ಹೊರಗಿನಿಂದ ಬಂದವರಲ್ಲ ಬದಲಾಗಿ ಅವರು ಇಲ್ಲಿಯವರೇ, and many researchers got same results

ಎರಡನೆಯದಾಗಿ, ಆರ್ಯರ ಸಮಯದಲ್ಲಿ ಇಂದು ನಾವು ಕಾಣುವಂತೆ "ಜಾತಿ" ಪದ್ಧತಿಯಲ್ಲಿ ತೀವ್ರವಾದ ಅಸ್ಪ್ರಶ್ಯತೆ ತಾಂಡವವಾಡುತ್ತಿರಲಿಲ್ಲ.

ಒಂದು ರೀತಿಯಲ್ಲಿ ಆಗ ಜಾತಿಗಳ ಮಧ್ಯೆ ಸಂಬಂಧ ಬೆಳೆಯಲು ನಾವು ಈಗ ಇದ್ದಂತಹ ಜಾತಿ ವಿವಾಹ ಪದ್ದತಿಗಳು ಇರಲಿಲ್ಲ.

ನಾನು: ಹಾಗಿದ್ದಲ್ಲಿ, ಆಗ ಜಾತಿ ಪದ್ದತಿ ಇರಲಿಲ್ಲ ಅಂತ ಅರ್ಥಾನಾ?

ದಲಿತ ಸಹೋದರ: ಇತ್ತು. ಆದರೆ ಜಾತಿಯೊಳಗೆ ವಿವಾಹ ಮಾಡಿಕೊಳ್ಳುವ ಪದ್ದತಿ ಹಾಗು ಅಂತರ್ಜಾತಿಯ ವಿವಾಹಗಳ restriction ನಾವು ಅಂದುಕೊಂಡಷ್ಟು ತೀವ್ರವಾಗಿರಲಿಲ್ಲ. ಕುಲಗಳ ಮಧ್ಯೆ ಸಾಕಷ್ಟು ವಿವಾಹಗಳಿಗೆ ಅವಕಾಶವಿತ್ತು ಎಂದರ್ಥ.

ನನ್ನ ಸಂಶೋಧನೆ ಹಾಗೆಂದು ತೋರಿಸಿಕೊಟ್ಟಿತ್ತು, ಅಷ್ಟೇ ಅಲ್ಲ ಇತ್ತೀಚೆಗೆ ಇದೇ results ಬೇರೆಯವರೂ ತೋರಿಸಿದ್ದಾರೆ, for example, ಹೈದರಾಬಾದಿನ Centre for Cellular and Molecular Bilology (CCMB) ಸಂಸ್ಥೆ ಹಾಗು ಹಾರ್ವರ್ಡ್ university ಒಟ್ಟಿಗೆ ಕೈಗೊಂಡಿರೋ research ನಲ್ಲಿ ಕಂಡುಬಂದಿದೆ.

ಹಾಗೆಯೇ ಕ್ರಿ.ಪೂ 2200 ರಿಂದ ಕ್ರಿ..100 ರವರೆಗೆ, ಭಾರತದ ಈಗಿನ ಎಲ್ಲ ಜಾತಿಗಳ ಮಧ್ಯೆ ರಕ್ತಸಂಬಂಧ ಅವಿರತವಾಗಿ ನಡೆಯುತ್ತಲೇ ಇತ್ತು ಎಂದು, ಅವರೇ ಹೇಳುವ ಹಾಗೆ  “Caste came later(after 100AD) and drastically reduced the chances of admixture” ಅಂದರೆ 'ಜಾತಿ' ಮಧ್ಯದ ಗೋಡೆ ಅತಿ ಇತ್ತೀಚಿನ ಪದ್ದತಿ- ಕೇವಲ 1900 ವರ್ಷಗಳ ಈಚಿನದ್ದು, ಅದು ಮಿತಿ ಮೀರಿದ್ದು ಮುಸಲ್ಮಾನರ ಆಕ್ರಮಣ ಮಾಡಿ ನಮ್ಮ ಜನರನ್ನು ಜಾತಿಯತೆಯಿಂದ ನಮ್ಮ ನಮ್ಮಲ್ಲೇ ಒಡುಕುಂಟು ಮಾಡಿ ಆಳೋಕೆ ಪ್ರಯತ್ನ ಪಟ್ಟಾಗಿನಿಂದ ಅಂದರೆ ಸುಮಾರು ಕ್ರಿ..10 ನೇ ಶತಮಾನ ಹಾಗು ಬ್ರಿಟಿಷರು ಬಂದು ನಮ್ಮನ್ನಾಳಲು ಶುರು ಮಾಡಿದಾಗ



ನಾನು
: ನಿಜ ಅದು ನಾನು ಓದಿದ್ದೇನೆ ತಿಳಿದುಕೊಂಡಿದ್ದೇನೆ.

ದಲಿತ ಸಹೋದರ: ಇನ್ನೇನು ನಾನು ಅಂದುಕೊಂಡಿದ್ದ ಆರ್ಯ-ದ್ರಾವಿಡ ಇತಿಹಾಸ ಕೇವಲ ಗೊಳ್ಳು ಇತಿಹಾಸ ಅಂತ ಗೊತ್ತಾದ ಮೇಲೆ ನಾನು ನನ್ನ ಭಾರತವನ್ನ ನನ್ನ ಹಿಂದುಗಳನ್ನ ಮೊದಲು ಎಷ್ಟು ದ್ವೇಷಿಸಿದ್ದೆನೋ ಈಗ ಅಷ್ಟೇ ಪ್ರೀತಿಸ್ತಿದಿನಿ, ಹಾಗು ನಾನು ಸೇರಿಕೊಂಡಿದ್ದ ನಕ್ಸಲೈಟ್ ಗುಂಪುಗಳ ಬಗ್ಗೆಯೂ CBI ಗೆ ಮಾಹಿತಿ ನೀಡಿ ಅವರ Chief ನನ್ನೇ ಹಿಡಿದುಕೊಟ್ಟೆ.

ನಾನು: ಈಗಿನ ದಲಿತ ದಲಿತ ಅಂತ ನಮಗೆ ಶೋಷಣೆಯಾಗಿದೆ ನಾವು ಹಿಂದುಗಳಲ್ಲ, ನಮ್ಮ ದೇವರುಗಳನ್ನ ಹೀಯಾಳಿಸೋರಿಗೆ ಒಬ್ಬ ದಲಿತನಾಗಿ ನೀವು ಕೊಡೋ ಸಂದೇಶ??

ದಲಿತ ಸಹೋದರ: ಅವರಿಗೆ ಇತಿಹಾಸದ ನೈಜತೆ ಗೊತ್ತಿಲ್ಲ, ಸಂಶೋಧನೆಗಳು ಗೊತ್ತಿಲ್ಲ, facts ಗೊತ್ತಿಲ್ಲ, ಅವರು ನನ್ನ ಹಾಗೆ ಮೂಢರಾಗಿದಾರೆ, ನನ್ನಂತಹ ಅದೆಷ್ಟೋ ಯುವಕರು fake ಇತಿಹಾಸ ನಂಬುತ್ತಾ ನಮ್ಮ ದೇಶಕ್ಕೆ ವಿರೋಧಿಗಳಾಗ್ತಿದಾರೆ, ಆದರೆ ಅವರಿಗೆ ನಾನು ಒಂದು ಮಾತು ಹೇಳೋಕೆ ಇಷ್ಟಪಡ್ತಿನಿ.

ನೋಡಿ ಎಲ್ಲ ದೇಶ, ಧರ್ಮ, ಜನಾಂಗಗಳಲ್ಲೂ ಭೇದ ಭಾವ ಇದ್ದೇ ಇದೆ, ನಾವು ಬಲಿಷ್ಟರಾಗಿ ಆರ್ಥಿಕವಾಗಿ, ಬೌದ್ಧಿಕವಾಗಿ ಬೆಳೆದರೆ ಜಗತ್ತೇ ನಮ್ಮ ಕಾಲಡಿಗೆ ಬಂದು ಬೀಳತ್ತೆ, ಅದನ್ನ ಬಿಟ್ಟು ನಾವು ಶೋಷಣೆಗೊಳಗಾಗಿದ್ದೀವಿ ಆಗ್ತಿದಿವಿ ಅಂತ ಬೊಂಬ್ಡಾ ಹೊಡ್ಕೊದನ್ನ ನಿಲ್ಲಿಸಿ ನಾವು ಬೆಳೆದು ತೋರಿಸಬೇಕಾಗಿದೆ ಅಷ್ಟೆ,


ಧನ್ಯವಾದ

~ Vinod Hindu Nationalist



References:
1) The Myth of Aryan Invasion of India – David Frawely

2) Complex genetic origin of Indian populations and its implications – Tamang, RL Singh and T Kumaraswamy