Wednesday, June 24, 2015

ಅದೇ ರಾಗ ಅದೇ ಹಾಡು(So called ಬುದ್ಧಿಜೀವಿ ಹಾಗು ಬೌದ್ಧ ಜೀವಿಗಳಿಗಾಗಿ ಈ ಲೇಖನ)


ಅದೇ ರಾಗ ಅದೇ ಹಾಡು!!



ಈ ಪೋಸ್ಟ್'ನ ಕೆಲ ವಿಷಯಗಳನ್ನ ಸಂತೋಷ ತಮ್ಮಯ್ಯರವರು "ನಿಲುಮೆ"ಯಲ್ಲಿ ಬರೆದ ಅಂಕಣದಿಂದ ಕಾಪಿ ಮಾಡಲಾಗಿದೆ, ಮಿಕ್ಕಿದ್ದು ನನ್ನ ಅನುಭವ.

ಕೆಲ ಬುದ್ಧಿ(ಲದ್ದಿ) ಹಾಗು ಬೌದ್ಧ ಜೀವಿಗಳು ಹಿಂದೂಗಳನ್ನು ಯಾವಾಗಲೂ ಬೈತಾನೇ ಇರ್ತಾರೆ, ಹಿಂದೂ ಧರ್ಮವನ್ನು ಹೀಯಾಳಿಸ್ತಾನೆ ಇರ್ತಾರೆ, ನಮ್ಮ ಧರ್ಮದ ದೇವರುಗಳನ್ನ ಬಾಯಿಗೆ ಬಂದಹಾಗೆ ನಾಲಿಗೆ ಮೇಲೆ ಹಿಡಿತವಿಲ್ಲದವರ ರೀತಿ ವಿಷ ಕಕ್ಕುತ್ತಲೇ ಇರ್ತಾರೆ.



ಅದ್ವೈತ ಸಿದ್ದಾಂತ ಪ್ರತಿಪಾದಿಸಿದ, ಹಿಂದೂ ಧರ್ಮವನ್ನ ಪುನರುತ್ಥಾನಗೊಳಿಸಿದ ಶಂಕರಾಚಾರ್ಯರನ್ನಂತೂ ಬೌದ್ಧರನ್ನ, ಬೌದ್ಧ ಧರ್ಮದ ಜನರನ್ನ ದೇಶ ಬಿಟ್ಟೋಡಿಸಿದ ಕ್ರೂರಿ, ಬ್ರಾಹ್ಮಣ, ಮನುವಾದಿ ಅಂತ ಬಾಯಿಗೆ ಬಂದಹಾಗೆ ಬೈತಾರೆ.ಅಷ್ಟಕ್ಕೂ ಅವರ ಟೀಕೆಯೇನೂ ಹೊಸದಲ್ಲ.

ಬೌದ್ಧರನ್ನು ದೇಶಬಿಟ್ಟೇ ಓಡಿಸಿದರು. ರಕ್ತಪಾತ ಮಾಡಿದರು. ವೈದಿಕಶಾಹಿಯ ಮೂಲ ಪ್ರೇರಕ ಎಂದೆಲ್ಲಾ ಶಂಕರರನ್ನು ತೆಗಳುವವರು ಅನಾದಿಯಿಂದಲೂ ಇದ್ದಾರೆ. ಇದೆಲ್ಲಾ ಹುಚ್ಚು ಆರ್ಭಟಗಳು. ಬೌದ್ಧರನ್ನು ದೇಶದಿಂದ ಓಡಿಸಲು ಈ ದೇಶವೇನು ಶಂಕರಾಚಾರ್ಯರದ್ದಾಗಿತ್ತೇ? ಅವರೇನು ರಾಜರಾಗಿದ್ದರೇ?

ಭಿಕ್ಷೆ ಬೇಡುತ್ತಾ ದೇಶ ಸಂಚಾರ ಮಾಡುತ್ತಿದ್ದ ಶಂಕರರು ಬೌದ್ಧರನ್ನು ದೇಶದಿಂದ ಹೊರಗಟ್ಟಿದರು ಎನ್ನುವುದೂ ಒಂದೇ ಈ ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎನ್ನುವುದೂ ಒಂದೇ. ಅಂದು ರಾಜ್ಯವಿದ್ದುದು ರಾಜರುಗಳ ಕೈಯಲ್ಲಿ. ಶಂಕರರು ಪ್ರತಿಪಾದನೆ ಮಾಡಿದ್ದು ಆದೈತ ಸಿದ್ಧಾಂತವನ್ನು. ಆ ಸಮಯದಲ್ಲಿ ಶಂಕರರಿಗೆ ಕನಿಷ್ಠ ರಾಜಾಶ್ರಯವೂ ಇರಲಿಲ್ಲ. ಇನ್ನು ಓಡಿಸುವ ಪ್ರಶ್ನೆ ಎಲ್ಲಿಂದ ಬಂತು?

ದ್ವೈತವೇ ಆಗಲಿ, ಅದ್ವೈತವೇ ಆಗಲಿ, ವಿಶಿಷ್ಟ್ಯಾದ್ವೈತವೇ ಆಗಲಿ ಎಲ್ಲವೂ ವೇದಗಳನ್ನು ಪ್ರಮಾಣಗಳನ್ನಾಗಿ ಸ್ವೀಕರಿಸಿದ ತತ್ತ್ವಗಳು. ಭಕ್ತಿಮಾರ್ಗ, ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗಗಳನ್ನು ತಮ್ಮ ತಮ್ಮ ತತ್ತ್ವದಲ್ಲಿ ಪ್ರತಿಪಾದಿಸಿದವರು. ಇವೆಲ್ಲಕ್ಕೂ ವೇದಗಳು ಪ್ರಮಾಣಗಳು. ಅದಕ್ಕೂ ಅದೇ ಹೊತ್ತಲ್ಲಿ ಅವೈದಿಕ ಪ್ರತಿಪಾದಕರೂ ಹುಟ್ಟಿಕೊಂಡಿದ್ದರು. ಎಲ್ಲವೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಚಾರ್ವಾಕನಂಥ ನಿರೀಶ್ವರವಾದಿ. ನಾಸ್ತಿಕ ಪಂಥಕ್ಕೂ ಜಾಗಕೊಟ್ಟ ಸಮಾಜ ಭಾರತದ್ದು. ಇನ್ನು ಚಾರ್ವಾಕಕ್ಕೆ ಹೋಲಿಸಿದರೆ ಅಧುನಿಕ ಎನ್ನಬಹುದಾದ ಬೌದ್ಧವನ್ನು ಯಾರಾದರೂ ಓಡಿಸಿಯಾರೇ? ಅಲ್ಲದೆ ಅವೈದಿಕ ಪಂಥಗಳ ಒಳಗೆ ಕೂಡ ತಾತ್ವಿಕ ಭಿನ್ನಾಭಿಪ್ರಾಯಗಳಿವೆ.

ಬೌದ್ಧ ಮತ್ತು ಜೈನದೊಳಗೂ ಸಾಮ್ಯತೆಗಳಿಲ್ಲ. ಜೈನ ಇಂದೂ ಭಾರತದಲ್ಲಿ ಭದ್ರವಾಗಿದೆ. ಒಂದು ವೇಳೆ ಶಂಕರರು ಅವೈದಿಕವನ್ನೆಲ್ಲಾ ಓಡಿಸಿದರು ಎಂದಿದ್ದರೆ ಜೈನವನ್ನು ಏಕೆ ಓಡಿಸಲಿಲ್ಲ? ಬುದ್ಧಪೂರ್ವದ ಯುಗದಲ್ಲಿ ಅವೈದಿಕವನ್ನು ಪ್ರತಿಪಾದನೆ ಮಾಡುವ ಸುಮಾರು ೬೦ ಧರ್ಮಗ್ರಂಥಗಳು ಅಸ್ತಿತ್ವದಲ್ಲಿದ್ದವು.

ಹಾಗಾದರೆ ಬೌದ್ಧತತ್ವ ಭಾರತಕ್ಕೆ ಹೊಸದಲ್ಲ ಎಂದಾಯಿತು ಅಂಥದ್ದರಲ್ಲಿ ಶಂಕರ ಯಾರನ್ನು ಕೊಲ್ಲಬೇಕಿತ್ತು? ಶಂಕರರನ್ನು “ಪ್ರಚ್ಛನ್ನ ಬೌದ್ಧ” ಎಂದೇ ಏಕೆ ಕರೆದರು?

ಶಂಕರ ಚರಿತ್ರೆಯಲ್ಲಿ ಅವರು ಮಂಡನಮಿಶ್ರನೆಂಬ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ತನ್ನ ಹಿಂಬಾಲಕರಾಗಿ ಮಾಡಿಕೊಂಡರು ಎಂಬ ಉಲ್ಲೇಖಗಳು ಸಿಗುತ್ತವೆ. ಶಂಕರರಿಗೆ ಶಸ್ತ್ರಸಜ್ಜಿತವಾದ ಸೈನಿಕರು ಇದ್ದಿದ್ದರೆ ತಲೆಹಾಳು ಮಾಡಿ ಕೊಂಡು ವಾದ-ವಿವಾದ ಮಾಡುವ ಅವಶ್ಯಕತೆ ಇತ್ತೇ?

ಶಂಕರರನ್ನು ಟೀಕಿಸುವವರಿಗೆ ವಾದದಲ್ಲಿ ಗೆಲ್ಲುವ ಶಕ್ತಿ ಇಲ್ಲವೆಂದ ಮಾತ್ರಕ್ಕೆ ಸಕಲರಿಗೂ ಇರುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಸರಿಯೇ?

ಇತಿಹಾಸತಜ್ಞ ಬೆಸೆಂಟ್ ಸ್ಮಿತ್ ಹೇಳುವಂತೆ “ಭಾರತೀಯ ವೈದಿಕ ಮತೀಯರಿಂದ ಬೌದ್ಧರು ಪೀಡಿಸಲ್ಪಟ್ಟಿದ್ದಾರೆ ಎನ್ನುವುದು  ಸರಿಯಲ್ಲ. ಭಾರತೀಯ ಜನತೆಯಲ್ಲಿ ಬೌದ್ಧಮತದ ಬಗ್ಗೆ ಕಿರಿಕಿರಿ , ತಿರಸ್ಕಾರ ಉಂಟಾಗಿ ಕಟ್ಟಕಡೆಯಲ್ಲಿ ಅದು ದೇಶದಿಂದಲೇ ನಶಿಸಿಹೋಯಿತು. ಏಕೆಂದರೆ ಬೌದ್ಧರು ಮತ್ತು ಮತ್ತೆ ದೇಶದ ಸ್ವಾತಂತ್ರ್ಯ ಹಾಗೂ ಸಾಮ್ರಾಜ್ಯದ ವಿಷಯದಲ್ಲಿ ಎಸಗಿದ ಕೃತ್ಯಗಳೇ ಅವನ ವಿನಾಶಕ್ಕೆ ಕಾರಣವಾಗಿತ್ತು” ಎನ್ನುತ್ತಾರೆ. ಅದು ಐತಿಹಾಸಿಕವಾದ ಸತ್ಯ.

ಏಕೆಂದರೆ ಸಂಖ್ಯೆಯಲ್ಲಿ ಹೆಚ್ಚು ಇದ್ದ ವೈದಿಕರನ್ನು ಆಳುತ್ತಿದ್ದವರು ಬೌದ್ಧ ಮತಾನುಯಾಯಿ ಅರಸರು. ಅಶೋಕನಂಥ ರಾಜನೇ ಅಹಿಂಸೆಯ ದೃಷ್ಟಿಯಿಂದ ಕೆಲವು ಆಚರಣೆಗಳನ್ನು ನಿಷೇಸಿದ್ದ. ಶಿಕ್ಷೆಯನ್ನು ಘೋಷಿಸಿದ್ದ. ಇದು ಎಷ್ಟು ದಿನ ನಡೆದೀತು? ಜನ ಸಹಜವಾಗಿಯೇ ಆಕ್ರೋಶಗೊಂಡರು. ಅಲ್ಲದೆ ರಾಜಾಶ್ರಯದ ನೆರವಿನಿಂದ ಬೌದ್ಧ ಮತ ವಿದೇಶಗಳಿಗೆ ತೆರಳಿತು. ಅಶೋಕನೇ ತನ್ನ ಮಕ್ಕಳನ್ನು ಶ್ರೀಲಂಕಾ ಮತ್ತು ಬರ್ಮಾಗಳಿಗೆ ಕಳುಹಿಸಿದ ಉಲ್ಲೇಖಗಳಿವೆ.

ಇಷ್ಟಿದ್ದ ಮೇಲೆ ಭಾರತೀಯ ಮೂಲದ  ಬೌದ್ಧ ವಿದೇಶಕ್ಕೆ ಸಾಗಿತು ಎಂದು ಹೆಮ್ಮೆ ಪಡುವ ಬದಲು ಸಂಬಂಧವೇ ಪಡದ ಶಂಕರರನ್ನು ಏಕೆ ಎಳೆದು ತರಬೇಕು?

ಒಪ್ಪಿಕೊಳ್ಳೋಣ. ಅವೈದಿಕಕ್ಕೂ ಸ್ಥಾನಮಾನ ನೀಡಿದ ದೇಶದಲ್ಲಿ ಬೌದ್ಧ ವಿದೇಶದಲ್ಲರುವಷ್ಟೇ ಗಟ್ಟಿಯಾಗಿರಬೇಕಿತ್ತು ಎಂದುಕೊಳ್ಳೋಣ. ಅದರ ಪತನಕ್ಕೆ ಕಾರಣವಾದ ವಿಪರೀತ ವಿಧಿ ನಿಷೇಧಗಳನ್ನು ವಿಧಿಸಿದ ರಾಜರನ್ನು  ದೂರೋಣ. ಒಬ್ಬ ಅಂಬೇಡ್ಕರರಿಂದ ಅದು ಭಾರತದಲ್ಲಿ ಮರುಸ್ಥಾಪನೆಯಾದುದ್ದಕ್ಕೆ ಖುಷಿ ಪಡೋಣ. ಶಂಕರಾಚಾರ್ಯರನ್ನು ಬ್ರಾಹ್ಮಣರ ಆಸ್ತಿ ಎನ್ನುವ ಮೊದಲು ಕೊಂಚವಾದರೂ ಶಂಕರನ್ನು ಅರಿಯೋಣ. ಅರಿಯದೇ ಇದ್ದರೆ ವ್ಯಕ್ತಿ ಏನಾಗುತ್ತಾನೆ ಎನ್ನುವುದನ್ನು ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ.


 ಬುದ್ಧನು ಅನ್ಯಧರ್ಮಗಳನ್ನ ದ್ವೇಷಿಸಿ ಅಂತ ಎಂದೂ ಹೇಳಿದವನಲ್ಲ, ಅವನು ಮೋಕ್ಷ ಕಂಡುಕೊಂಡು ಬದುಕನ್ನ ಸರಳವಾಗಿ, ಅಹಿಂಸೆಯ ಮಾರ್ಗದಿಂದ ಬದುಕಿ ಅಂದ ಆ ಪುಣ್ಯಾತ್ಮನ ವಿಚಾರಧಾರೆಗಳನ್ನೇ ತಿರುಚಿ ಅವನನ್ನ ಹಿಂದೂ ವಿರೋಧಿ ಅಂತ ಅವನ ತತ್ವಗಳನ್ನ ತದ್ವಿರುದ್ಧ ರೀತಿಯಲ್ಲಿ ಪಾಲಿಸೋದು ಬೌದ್ಧ ಧರ್ಮವಾ?

ಅರಿಯದೇ ದೂರಿದರೆ ಶಂಕರರು ಬ್ರಾಹ್ಮಣರ ಆಸ್ತಿಯಾಗಿ, ಕ್ರೂರಿಯಾಗಿ ಕಾಣುತ್ತಾರೆ.ತಿಳಿದವರು ಆ ಮನಸ್ಸನ್ನು ಸಿನಿಕ, ಅಸ್ವಸ್ಥ ಎಂದು ಕರೆಯುತ್ತಾರೆ.



ನೀವು ಎಷ್ಟೇ ತೆಗಳಿದರೂ, ತುಚ್ಭವಾಗಿ ಕಂಡರೂ ಹಿಂದುಗಳು ಹಿಂದುಗಳೇ, ಶಾಂತಿಪ್ರೀಯರೇ, ಬೇರೆ ಧರ್ಮಗಳನ್ನ, ದೇವರುಗಳನ್ನ ಪೂಜಿಸಿ, ಎಲ್ಲ ಧರ್ಮಗಳು ಶ್ರೇಷ್ಟ ಅನ್ನೋರೆ.

ಇದಕ್ಕೆ ನೆನ್ನೆ ನಾನೇ ಕಂಡ ಉದಾಹರಣೆ ಹೇಳ್ತಿನಿ ಕೇಳಿ, ನೆನ್ನೆ ರಾತ್ರಿ ದಂಡು ದಂಡಾಗಿ ಕುಟುಂಬ ಸಮೇತವಾಗಿ ಕೆಲ ಜನಗಳು ಕಲಬುರಗಿಯ ರಸ್ತೆಯ ಮೇಲೆ ಹೊರಟಿದ್ರು, ಅವರನ್ನ ಅಷ್ಟು ಸಂಖ್ಯೆಯಲ್ಲಿ ಕಂಡ ನನಗೆ ಕುತೂಹಲ ತಡೆಯೋಕ್ಕಾಗದೇ "ನೀವು ಯಾವ ಊರಿಂದ ಬರ್ತಿದಿರಾ, ಎಲ್ಲಿಗೆ ಹೋಗ್ತಿದಿರಾ" ಅಂತ ಕೇಳ್ದೆ.

ಅವರು ಮಹಾರಾಷ್ಟ್ರದವರಂತೆ, ಕೊಲ್ಹಾಪುರದ ಲಕ್ಷ್ಮಿ ದರ್ಶನ ಮುಗಿಸಿ ಕಲಬುರಗಿಗೆ ಬಂದಿದ್ದರಂತೆ, ಇಲ್ಲಿಯ ಬೌದ್ಧ ಮಂದಿರದಲ್ಲಿ ಬುದ್ಧನ ದರ್ಶನವೂ ಪಡೆದು ಬಂದ್ವಿ ಈಗ ಗಾಣಗಾಪುರಕ್ಕೆ ಹೋಗಿ ದತ್ತನ ದರ್ಶನ ಪಡೆದು ವಿಜಯಪುರಕ್ಕೆ(ಬಿಜಾಪುರಕ್ಕೆ) ಹೋಗ್ತಿವಿ ಅಂತಿದ್ರು.

ನೋಡಿ ನಮ್ಮ ಜನ ಹಿಂದು, ಬೌದ್ಧ ಅಥವಾ ಬೇರೆ ಯಾವುದೇ ಧರ್ಮವನ್ನ ಹೀಯಾಳಿಸಲ್ಲ ಬದಲಾಗಿ ಎಲ್ಲ ಧರ್ಮಕ್ಕೂ ಗೌರವಿಸ್ತಾರೆ ಅನ್ನೋದಕ್ಕೆ ಸಣ್ಣ ಉದಾಹರಣೆ ಅಷ್ಟೆ, ನಮ್ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಂತೂ ಜನ ದರ್ಗಾಗಳಿಗೂ ಹೋಗಿ ಬರ್ತಾರೆ, ಅದೂ ಕೂಡ ದೇವರು ಅಂತ ನಂಬ್ತಾರೆ.

ಇಂತ ಹಿಂದುಗಳಿಗೆ ಹೀಯಾಳಿಸೋದು ಒಂದೇ ನಿಮ್(ಬೌದ್ಧ ಜೀವಿಗಳು, ಲದ್ದಿ ಜೀವಿಗಳು, ಹಿಂದುಗಳನ್ನು ಅಸಹಿಷ್ಣು ಅನ್ನುವರು) ಯೋಗ್ಯತೆ ಏನು ಅಂತ ತೋರಿಸಿಕೊಡೋದು ಒಂದೇ, ನಿಮ್ ತಲೆಮೇಲೆ ನೀವೇ ಕಲ್ಲು ಹಾಕೊಂತಿದೀರಾ ಅನ್ನೋದು ಎಚ್ಚರವಿರಲಿ, ನಿಮ್ಮ ಯೋಗ್ಯತೆ ತಿಳಿದು ಹಿಂದೂ ತಿರುಗಿಬಿದ್ದರೆ ನಿಮಗೆ ಉಳಿಗಾಲ ಇಲ್ಲ ಮೂರ್ಖರೇ!

"ಹಿಂದೂ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ" ಅನ್ನೋದನ್ನ ನೀವು ಮರೆತಿರೋ ಹಾಗಿದೆ.

ಇನ್ನೂ ಕಾಲ ಮಿಂಚಿಲ್ಲ, ಬದಲಾಗಿ, ಇಲ್ಲವಾದರೆ ನಿಮ್ಮ ಅಂತ್ಯ ನಿಮಗೆ ತುಂಬಾ ದೂರವಿಲ್ಲ.

© Vinod Hindu Nationalist​



No comments:

Post a Comment