Sunday, July 12, 2015

"ಬಾಹುಬಲಿ"ಗೂ ಮಯೂರನಿಗೂ ಸಂಬಂಧ?? ಗೊತ್ತಿಲ್ಲ, ಓದಿ


ಕನ್ನಡದ ಮೊದಲ ದೊರೆ "ಮಯೂರ"






 ತೆಲುಗಿನ "ಬಾಹುಬಲಿ" ಚಿತ್ರ ಡಾ|| ರಾಜ್‌'ಕುಮಾರ ಅಭಿನಯಿಸಿದ "ಮಯೂರ" ಚಿತ್ರದ Remake?

ಇದನ್ನು ತಿಳಿಬೇಕಾದ್ರೆ ನಾವು ಒಮ್ಮೆ ನಿಜವಾದ "ಮಯೂರ ವರ್ಮ"ನ ಇತಿಹಾಸ ತಿಳಿದುಕೊಳ್ಳಬೇಕು ಅಥವ ಡಾ||ರಾಜ್ ಅಭಿನಯದ "ಮಯೂರ" ಚಿತ್ರ ನೋಡಲೇಬೇಕು, ಈಗ ಬ್ಲಾಗ್‌'ನಲ್ಲಿ ನಾನು "ಮಯೂರ ವರ್ಮ"ನ ಬಗ್ಗೆಯೇ ಇತಿಹಾಸ ತಿಳಿಸೋಕೆ ಪ್ರಯತ್ನಪಡ್ತೀನಿ.




ನಾನು ರಿಸರ್ಚ್ ಮಾಡಿದ ಪ್ರಕಾರ ಬಾಹುಬಲಿ ಚಿತ್ರದ ಬಾಹುಬಲಿಗೂ, ಬಲ್ಲಾಳದೇವನಿಗೂ, ಮಹಿಷ್ಮತಿಗೂ, ಮಯೂರನಿಗೂ, ಜೈನ್ ಧರ್ಮಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ.


ಬಾಹುಬಲಿಯ ಚಿತ್ರ ಬಿಡುಗಡೆ ಆಗುವ ಮುನ್ನ ಇದು ರಾಜಕುಮಾರ ನಟಿಸಿರುವ "ಮಯೂರ"ಕ್ಕೂ ಸಂಬಂಧವಿದೆಯೆಂದೂ ಅಂದುಕೊಂಡಿದ್ದೆ, ಆದರೆ ಚಿತ್ರದಲ್ಲಿ "ಅಸ್ಲಂ ಖಾನ್" ಪಾತ್ರ ಇರುವದನ್ನು ತಿಳಿದ ಮೇಲೆ ಬಾಹುಬಲಿಯ ನೈಜ ಇತಿಹಾಸ ತಿಳಿದುಕೊಳ್ಳೋ ಕುತೂಹಲ ನನಗೆ ಜಾಸ್ತಿಯಾಯ್ತು, ಯಾಕೆ ಗೊತ್ತಾ? ಮಯೂರನ ಇತಿಹಾಸ ತೆಗೆದು ನೋಡಿದರೆ ಅವನಿದ್ದದ್ದು 3ನೇ ಶತಮಾನದಲ್ಲಿ ಸೋ ಅಲ್ಲಿಗೆ ಅದು ಬಾಹುಬಲಿಗೆ ಸಂಬಂಧಿಸಿದ್ದಲ್ಲ ಅನ್ನೋದು ನನಗೆ ಖಾತ್ರಿಯಾಯ್ತು, ಯಾಕೆ ಗೊತ್ತಾ? ಬಾಹುಬಲಿ ಇದ್ದದ್ದು ಸಾವಿರಾರು ವರ್ಷಗಳ ಹಿಂದೆ, ಆಗ ಇಸ್ಲಾಂ ಹುಟ್ಟಿರಲೇ ಇಲ್ಲ, ಇಸ್ಲಾಂ ಹುಟ್ಟಿದ್ದೇ 6ನೇ ಶತಮಾನದಲ್ಲಿ ಸೋ ಮಯೂರನಿಗೂ, ಬಾಹುಬಲಿಗೂ, ಅಸ್ಲಂ ಖಾನ್'ನಿಗೂ ಸಂಬಂಧವೇ ಇಲ್ಲ


ಮಯೂರನಿಗೂ ಬಾಹುಬಲಿಗು ಸಂಬಂಧವೇ ಇಲ್ಲ ಮಯೂರನ ಇತಿಹಾಸ ನಾವೆಲ್ಲ ತಿಳಿದುಕೊಳ್ಳಲೇಬೇಕು, ಯಾಕೆ ಅಂತ ಗೊತ್ತಾ? ಓದಿ

ನಿಮಗೆ ಗೊತ್ತಾ ಸಾಮಾನ್ಯ ಬ್ರಾಹ್ಮಣ ವಟುವೊಬ್ಬ ತನ್ನ ರಾಜನ ವಿರುದ್ದ ಅನ್ಯಾಯದ ದನಿ ಎತ್ತಿ, ರಾಜನ ಮುಷ್ಟಿಯಲ್ಲಿದ್ದ ಪ್ರದೇಶವನ್ನು ತನ್ನ ವಶ ಮಾಡಿಕೊಂಡು ತನ್ನದೇ ಅದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಮುಂದೆ ಅ ಬ್ರಾಹ್ಮಣ ವಟು ಕ್ಷತ್ರಿಯನಾದ ಬಗೆ.


ಇದು ನಡೆದುದು ನಮ್ಮ
ಹೆಮ್ಮೆಯ ಕನ್ನಡ ನಾಡಿನಲ್ಲಿ. ಅ ಬ್ರಾಹ್ಮಣ ಬಾಲಕ ಮತ್ತಾರು ಅಲ್ಲ ಕನ್ನಡದ ಮೊದಲ ರಾಜಮನೆತನ ಕದಂಬರ ದೊರೆ ಮಯೂರ ವರ್ಮ.


ಮೂಲತಃ ಮಯೂರ ಬ್ರಾಹ್ಮಣನೇ ಅಲ್ಲ, ಅರೇ ಮತ್ತೇ ಬ್ರಾಹ್ಮಣ ವಟು ಅಂತ ಮೆಲಿನ ಲೈನ್'ನಲ್ಲಿ ಬರೆದಿದಿರಲ್ಲಾ ಅಂತ ನೀವು ಕೇಳಬಹುದು. ಅದಕ್ಕೂ ಒಂದು ಇತಿಹಾಸವಿದೆ.


ವೈಜಯಂತಿಯ ಸಿಂಹಾಸನವನ್ನು ಆಳುತ್ತಿದ್ದ ಕದಂಬರ ಅರಸು ಚಂದ್ರವರ್ಮನನ್ನು "ಪಲ್ಲವ"ರು ಮೋಸದಿಂದ ಕೊಂದು ಅವನ ಪತ್ನಿಯನ್ನು ಘಾಸಿಗೋಳಿಸುತ್ತಾರೆ. ಆದರೆ ಸಾಯುವ ಮುನ್ನ ಮಹಾರಾಣಿ ತನ್ನ ಮಗನನ್ನು ರಾಜಗುರುಗಳಿಗೆ ಒಪ್ಪಿಸಿ ಅಸುನೀಗುತ್ತಾಳೆ.ರಾಜಗುರು, ಚಂದ್ರವರ್ಮನ ನಿಷ್ಟಾವಂತ ಮಂತ್ರಿ ಷಡಾನನ ಶರ್ಮ ಮತ್ತು ಸೇನಾಧಿಪತಿ ನರಸಿಂಹದತ್ತ ಮಗುವನ್ನು ಕಾಪಾಡುವ ಹೊಣೆ ಹೊತ್ತಿರುತ್ತಾರೆ.


ಮಗು ಮಯೂರನನ್ನು ಪಲ್ಲವರ ರಾಜಧಾನಿಯಾದ ಕಾಂಚಿನಗರದಲ್ಲಿ ಈಶಭಟ್ಟರಲ್ಲಿ ಗುಟ್ಟಾಗಿ ಬ್ರಾಹ್ಮಣನಂತೆ ಬೆಳೆಸುತ್ತಾರೆ.

ಮಯೂರ ವರ್ಮನ ಮೂಲ ಹೆಸರು ಮಯೂರ ಶರ್ಮ, ಮೂಲತಃ ಶಿವಮೊಗ್ಗ ಜಿಲ್ಲೆಯ ಇಂದಿನ ತಾಳಗುಂದ ಇವನ ಹುಟ್ಟೂರು. ಇವನು ಚಂದ್ರ ಶರ್ಮನ ಮಗನು. ಇವರ ಮನೆಯ ಸಮೀಪ ಕಡವಾಲ(ಕದಂಬ) ಮರವಿತ್ತಂತೆ ಅದಕ್ಕೆ ಇವರ ಮನೆತನದ ಹೆಸರು ಕದಂಬ ಹಾಗು ಬನವಾಸಿ (ಉತ್ತರ ಕನ್ನಡ ಕಾರವಾರ ಜಿಲ್ಲೆ) ಯ "ಮಧುಕೇಶ್ವರ" ಇವರ ಮನೆದೇವರು.
ಮಯೂರ ವರ್ಮ ಕ್ರಿ.ಶ.325 ರಿಂದ 345 ರವರೆಗೆ ಕರ್ನಾಟಕದಲ್ಲಿದ್ದ, ಈತನೇ ಕದಂಬ ಸಾಮ್ರಾಜ್ಯ ಕಟ್ಟಿದವ.
ಮಯೂರನನ್ನ ಈಶಭಟ್ಟ ಎಂಬ ಬ್ರಾಹ್ಮಣ ಸಾಕಿಕೊಂಡಿರ್ತಾನೆ.



ಆಚಾರ್ಯ ವೀರಶರ್ಮರ ಹತ್ತಿರ ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಬಾಲಕ ಮಯೂರನಿಗೆ ಹೆಚ್ಚಿನದನ್ನು ಕಲಿಯುವ ತವಕ.

ಬಾಲಕನಗಿದ್ದಗಲೇ ಅಸಾಧಾರಣ ಶೌರ್ಯ, ಸಾಹಸ ಮತ್ತು ಜಾಣ್ಮೆಯನ್ನು ಪ್ರದರ್ಶಿಸುತ್ತಿದ್ದನು
ಗುರು ವೀರಶರ್ಮರು ಮಯೂರನಿಗೆ ಇನ್ನು ಹೆಚ್ಚಿನ ವಿದ್ಯಾಭ್ಯಾಸ ನೀಡಿ ಅವನನ್ನು ದೊಡ್ಡ ಪಂಡಿತನನ್ನಾಗಿ ಮಾಡಬೇಕೆಂಬ ಹಂಬಲ.


ಆಗ ವೀರಶರ್ಮರು ಮಯೂರನ ತಂದೆಯ ಹತ್ತಿರ ಮಗನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ತಮ್ಮ ಬಿನ್ನಹ ವ್ಯಕ್ತಪಡಿಸಿದರು .ಅಂದು ತಾಳಗುಂದ ಪಲ್ಲವರ ದೊರೆಯ ಅಧೀನದಲ್ಲಿತ್ತು.
ಬನವಾಸಿ ಪ್ರದೇಶದಲ್ಲಿ ಅಂತಹ ಯಾವುದೇ ದೊಡ್ಡ ವಿದ್ಯಾ ಸಂಸ್ಥೆಗಳು ಇಲ್ಲದಿರುವುದರಿಂದ ಕಂಚಿಗೆ ಕಳುಹಿಸಿವಂತೆ ಗುರು ವೀರಶರ್ಮರು ಪ್ರಸ್ತಾಪ ಮಾಡಿದರು.

ಕಂಚಿಯು ಪಲ್ಲವರ ರಾಜಧಾನಿ , ಅದು ಅತ್ಯಂತ ವೈಭವದಿಂದ ಮೆರೆಯುತ್ತಿತು. ಮಯೂರನು ತನ್ನ ಗುರು ವೀರಶರ್ಮರ ಜೊತೆ ಕಂಚಿ ತಲುಪಿ ಘಟಿಕಸ್ಥಾನ ಸೇರಿಕೊಂಡನು. ಅತ್ಯಂತ ಸರಳನು , ತೇಜಸ್ವಿಯೂ ಮತ್ತು ಮೇಧಾವಿ ಅದ ಮಯೂರನು ಎಲ್ಲರ ಅಚ್ಚು ಮೆಚ್ಚಿನವನಾದನು.



ಹೀಗಿರುವಾಗ ಒಮ್ಮೆ …


ಪ್ರತಿದಿನ ಪುಷ್ಕರಣಿಯಲ್ಲಿ ಮಿಂದು ತನ್ನ ಪಾಡಿಗೆ ಮಯೂರನು ಆಶ್ರಮದ ಕಡೆಗೆ ನಡೆದು ಹೋಗುತ್ತಿದ್ದನು. ಅವನ ಬೆನ್ನ ಹಿಂದೆ ಪಲ್ಲವರ ಸೈನಿಕರು ಬರುತ್ತಿರುವ ಶಬ್ದ ಕೇಳಿಸಿತು. ಅದಕ್ಕವನು ವೇಗವಾಗಿ ಪಕ್ಕಕೆ ಸರಿದನು.ನಂತರ ಕುದುರೆ ಅವನ ಮುಂದೆ ಹಾದು ಹೋಯಿತು. ಆದರೆ ಕುದುರೆಯ ಮೇಲಿನ ಸೈನಿಕನ ಚಾಟಿ ನೇರವಾಗಿ ಮಯುರನ ಬೆನ್ನಿಗೆ ಅಪ್ಪಳಿಸಿತು. ಇದೆಲ್ಲ ಕೆಲವೇ ನಿಮಿಷಗಳಲ್ಲಿ ನಡೆದು ಹೋಯಿತು. ಶಾಂತ ಸ್ವಭಾವದ ಮಯೂರ ಉಗ್ರ ಸ್ವರೋಪಿಯಾದ, ಬೆನ್ನ ಮೇಲಿನ ಬಾಸುಂಡೆಯಿಂದ ರಕ್ತ ಸೋರುತ್ತಿತ್ತು.

ಪಲ್ಲವರ ಸೈನಿಕನ ಈ ಕೃತ್ಯದಿಂದ ಮಯೂರ ಕೆಂಡ ಮಂಡಲವಾದನು. ತಕ್ಷಣವೇ ಅವನು ಅ ಸೈನಿಕನಿಗೆ ಬುದ್ದಿ ಕಲಿಸುವೆನೆಂದು ತಿರ್ಮಾನಿಸಿ ರಾಜನ ಬಳಿ ದೂರನ್ನು ಕೊಡಲು ಅಣಿಯಾದನು. ಆಗ ಗುರು ವೀರಶರ್ಮರು ಮಯೂರನಿಗೆ ಸಮಾಧಾನ ಹೇಳಿದರೂ ಮಯೂರ ತಾನು ದೊರನ್ನೇ ಕೊಡುವೆನೆದು ಹೊರಟನು.


ಮಯೂರನು ನೇರವಾಗಿ ಪಲ್ಲವೇಂದ್ರನ ಅರಮನೆಗೆ ಹೋಗಿ "ನಿನ್ನ ಸೈನಿಕರಿಂದ ನನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಬೇಕು" ಎಂದು ಕೇಳುತ್ತಾನೆ. ಆಗ ಪಲ್ಲವೇಂದ್ರ ತನ್ನ ಮಂತ್ರಿಯ ಅಭಿಪ್ರಾಯವನ್ನು ಕೇಳಿದಾಗ ಮಂತ್ರಿಯು 
"ಕುದುರೆಗೆ ಬೀಳುವ ಏಟು ಇವನಿಗೆ ಬಿದ್ದಿರಬೇಕು. ಇವನದೇ ತಪ್ಪು , ಸವಾರನದೆನು ತಪ್ಪಿಲ್ಲ" ಎಂದು ಹೇಳಿದಾಗ ದೊರೆ ಅದಕ್ಕೆ ಸಮ್ಮತಿಸುವನು.


ಮಯೂರ ಬಗೆ ಬಗೆಯಾಗಿ ತನ್ನ ಮನವಿ ಸಲ್ಲಿಸಿದರು ರಾಜಸಭೆಯಲ್ಲಿ ಯಾರು ಅವನ ಪರವಾಗಿ ನಿಲ್ಲಲಿಲ್ಲ. ಕೊನೆಗೆ ಮಯೂರ ದೊರೆಯನ್ನು ಕುರಿತು ” ನಿನ್ನ ಕೈಯಲ್ಲಿ ನಿನ್ನ ಸೈನಿಕನ್ನನ್ನು ಪತ್ತೆ ಹಚ್ಚಿ ಶಿಕ್ಷಿಸಲು ಆಗದಿದ್ದರೆ ಹೇಳಿ ನಾನೆ ಅ ಕೆಲಸ ಮಾಡುವೆ ” ಎಂದು ಹೇಳಿದಾಗ ಸಭೆಗೆ ಸಭೆಯೇ ನಗಲು ಆರಂಭಿಸಿತು.


ಪಲ್ಲವೇಂದ್ರ ಈ ಬ್ರಾಹ್ಮಣ ಏನು ಮಾಡಿಯಾನು ಎಂದು ಅದನ್ನು ಮರೆತೇ ಬಿಟ್ಟ.

ಮುಂದೆ ಮಯುರನು ಮಯೂರ ಶರ್ಮ ಎಂಬ ಬ್ರಾಹ್ಮಣ ಹೆಸರಿನಿಂದ ಮಯೂರ ವರ್ಮಯೆಂದು ಕ್ಷತ್ರಿಯ ಧರ್ಮಕ್ಕೆ ತನ್ನ ನಾಮವನ್ನು ಬದಲಾಯಿಸಿಕೊಂಡು ಪಲ್ಲವೇಂದ್ರನ ಸೊಕ್ಕನ್ನು ಅಡಗಿಸಿ, ಕನ್ನಡದ ಮೊದಲ ರಾಜ್ಯವನ್ನು ಕಟ್ಟುತ್ತಾನೆ ಅದೇ ನಾವು ನೀವು ಸಮಾಜವಿಜ್ನಾನದಲ್ಲಿ ಓದಿದ "ಕದಂಬ ಸಮ್ರಾಜ್ಯ", ಅದೂ ನಮ್ಮ ಕನ್ನಡದ ನೆಲದಲ್ಲಿ.



I am proud to be a Kannadiga n about my ancestors were like Mayura, hats off to them !!



Guys as you observed and read the Mayura history, he was in rule between 325AD - 345AD. . .So the BAHUBALI story is not at all related with Mayura, in bahubali film they have taken the role called "Aslam Khan" but Mayura was in 325AD that's 3rd century, and Islam was raised in 6th century, so Mayura, Bahubali, Aslam Khan are not at all related or from the same era.


So from the above history we can conclude that Bahubali movie is fictional (ಕಾಲ್ಪನಿಕ)


By this movie i came to know abt Mayura Varma, Kakusha, Kadamba dynasty, Real Bahubali history, Bahubali's father Rishabhadeva history, and about Jain religion. . .


I don't know how people taken this Bahubali film, but this movie made me to do research n I came to know many history parts about our great sanatana Bharat!!



ನನ್ನ ಮುಂದಿನ ಲೇಖನ "ಬಾಹುಬಲಿಯ ನಿಜವಾದ ಇತಿಹಾಸ"ದ ಬಗ್ಗೆ, ನಿರೀಕ್ಷಿಸಿ



©Vinod Hindu Nationalist







No comments:

Post a Comment