Sunday, July 12, 2015

"ಬಾಹುಬಲಿ"ಗೂ ಮಯೂರನಿಗೂ ಸಂಬಂಧ?? ಗೊತ್ತಿಲ್ಲ, ಓದಿ


ಕನ್ನಡದ ಮೊದಲ ದೊರೆ "ಮಯೂರ"






 ತೆಲುಗಿನ "ಬಾಹುಬಲಿ" ಚಿತ್ರ ಡಾ|| ರಾಜ್‌'ಕುಮಾರ ಅಭಿನಯಿಸಿದ "ಮಯೂರ" ಚಿತ್ರದ Remake?

ಇದನ್ನು ತಿಳಿಬೇಕಾದ್ರೆ ನಾವು ಒಮ್ಮೆ ನಿಜವಾದ "ಮಯೂರ ವರ್ಮ"ನ ಇತಿಹಾಸ ತಿಳಿದುಕೊಳ್ಳಬೇಕು ಅಥವ ಡಾ||ರಾಜ್ ಅಭಿನಯದ "ಮಯೂರ" ಚಿತ್ರ ನೋಡಲೇಬೇಕು, ಈಗ ಬ್ಲಾಗ್‌'ನಲ್ಲಿ ನಾನು "ಮಯೂರ ವರ್ಮ"ನ ಬಗ್ಗೆಯೇ ಇತಿಹಾಸ ತಿಳಿಸೋಕೆ ಪ್ರಯತ್ನಪಡ್ತೀನಿ.




ನಾನು ರಿಸರ್ಚ್ ಮಾಡಿದ ಪ್ರಕಾರ ಬಾಹುಬಲಿ ಚಿತ್ರದ ಬಾಹುಬಲಿಗೂ, ಬಲ್ಲಾಳದೇವನಿಗೂ, ಮಹಿಷ್ಮತಿಗೂ, ಮಯೂರನಿಗೂ, ಜೈನ್ ಧರ್ಮಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ.


ಬಾಹುಬಲಿಯ ಚಿತ್ರ ಬಿಡುಗಡೆ ಆಗುವ ಮುನ್ನ ಇದು ರಾಜಕುಮಾರ ನಟಿಸಿರುವ "ಮಯೂರ"ಕ್ಕೂ ಸಂಬಂಧವಿದೆಯೆಂದೂ ಅಂದುಕೊಂಡಿದ್ದೆ, ಆದರೆ ಚಿತ್ರದಲ್ಲಿ "ಅಸ್ಲಂ ಖಾನ್" ಪಾತ್ರ ಇರುವದನ್ನು ತಿಳಿದ ಮೇಲೆ ಬಾಹುಬಲಿಯ ನೈಜ ಇತಿಹಾಸ ತಿಳಿದುಕೊಳ್ಳೋ ಕುತೂಹಲ ನನಗೆ ಜಾಸ್ತಿಯಾಯ್ತು, ಯಾಕೆ ಗೊತ್ತಾ? ಮಯೂರನ ಇತಿಹಾಸ ತೆಗೆದು ನೋಡಿದರೆ ಅವನಿದ್ದದ್ದು 3ನೇ ಶತಮಾನದಲ್ಲಿ ಸೋ ಅಲ್ಲಿಗೆ ಅದು ಬಾಹುಬಲಿಗೆ ಸಂಬಂಧಿಸಿದ್ದಲ್ಲ ಅನ್ನೋದು ನನಗೆ ಖಾತ್ರಿಯಾಯ್ತು, ಯಾಕೆ ಗೊತ್ತಾ? ಬಾಹುಬಲಿ ಇದ್ದದ್ದು ಸಾವಿರಾರು ವರ್ಷಗಳ ಹಿಂದೆ, ಆಗ ಇಸ್ಲಾಂ ಹುಟ್ಟಿರಲೇ ಇಲ್ಲ, ಇಸ್ಲಾಂ ಹುಟ್ಟಿದ್ದೇ 6ನೇ ಶತಮಾನದಲ್ಲಿ ಸೋ ಮಯೂರನಿಗೂ, ಬಾಹುಬಲಿಗೂ, ಅಸ್ಲಂ ಖಾನ್'ನಿಗೂ ಸಂಬಂಧವೇ ಇಲ್ಲ


ಮಯೂರನಿಗೂ ಬಾಹುಬಲಿಗು ಸಂಬಂಧವೇ ಇಲ್ಲ ಮಯೂರನ ಇತಿಹಾಸ ನಾವೆಲ್ಲ ತಿಳಿದುಕೊಳ್ಳಲೇಬೇಕು, ಯಾಕೆ ಅಂತ ಗೊತ್ತಾ? ಓದಿ

ನಿಮಗೆ ಗೊತ್ತಾ ಸಾಮಾನ್ಯ ಬ್ರಾಹ್ಮಣ ವಟುವೊಬ್ಬ ತನ್ನ ರಾಜನ ವಿರುದ್ದ ಅನ್ಯಾಯದ ದನಿ ಎತ್ತಿ, ರಾಜನ ಮುಷ್ಟಿಯಲ್ಲಿದ್ದ ಪ್ರದೇಶವನ್ನು ತನ್ನ ವಶ ಮಾಡಿಕೊಂಡು ತನ್ನದೇ ಅದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಮುಂದೆ ಅ ಬ್ರಾಹ್ಮಣ ವಟು ಕ್ಷತ್ರಿಯನಾದ ಬಗೆ.


ಇದು ನಡೆದುದು ನಮ್ಮ
ಹೆಮ್ಮೆಯ ಕನ್ನಡ ನಾಡಿನಲ್ಲಿ. ಅ ಬ್ರಾಹ್ಮಣ ಬಾಲಕ ಮತ್ತಾರು ಅಲ್ಲ ಕನ್ನಡದ ಮೊದಲ ರಾಜಮನೆತನ ಕದಂಬರ ದೊರೆ ಮಯೂರ ವರ್ಮ.


ಮೂಲತಃ ಮಯೂರ ಬ್ರಾಹ್ಮಣನೇ ಅಲ್ಲ, ಅರೇ ಮತ್ತೇ ಬ್ರಾಹ್ಮಣ ವಟು ಅಂತ ಮೆಲಿನ ಲೈನ್'ನಲ್ಲಿ ಬರೆದಿದಿರಲ್ಲಾ ಅಂತ ನೀವು ಕೇಳಬಹುದು. ಅದಕ್ಕೂ ಒಂದು ಇತಿಹಾಸವಿದೆ.


ವೈಜಯಂತಿಯ ಸಿಂಹಾಸನವನ್ನು ಆಳುತ್ತಿದ್ದ ಕದಂಬರ ಅರಸು ಚಂದ್ರವರ್ಮನನ್ನು "ಪಲ್ಲವ"ರು ಮೋಸದಿಂದ ಕೊಂದು ಅವನ ಪತ್ನಿಯನ್ನು ಘಾಸಿಗೋಳಿಸುತ್ತಾರೆ. ಆದರೆ ಸಾಯುವ ಮುನ್ನ ಮಹಾರಾಣಿ ತನ್ನ ಮಗನನ್ನು ರಾಜಗುರುಗಳಿಗೆ ಒಪ್ಪಿಸಿ ಅಸುನೀಗುತ್ತಾಳೆ.ರಾಜಗುರು, ಚಂದ್ರವರ್ಮನ ನಿಷ್ಟಾವಂತ ಮಂತ್ರಿ ಷಡಾನನ ಶರ್ಮ ಮತ್ತು ಸೇನಾಧಿಪತಿ ನರಸಿಂಹದತ್ತ ಮಗುವನ್ನು ಕಾಪಾಡುವ ಹೊಣೆ ಹೊತ್ತಿರುತ್ತಾರೆ.


ಮಗು ಮಯೂರನನ್ನು ಪಲ್ಲವರ ರಾಜಧಾನಿಯಾದ ಕಾಂಚಿನಗರದಲ್ಲಿ ಈಶಭಟ್ಟರಲ್ಲಿ ಗುಟ್ಟಾಗಿ ಬ್ರಾಹ್ಮಣನಂತೆ ಬೆಳೆಸುತ್ತಾರೆ.

ಮಯೂರ ವರ್ಮನ ಮೂಲ ಹೆಸರು ಮಯೂರ ಶರ್ಮ, ಮೂಲತಃ ಶಿವಮೊಗ್ಗ ಜಿಲ್ಲೆಯ ಇಂದಿನ ತಾಳಗುಂದ ಇವನ ಹುಟ್ಟೂರು. ಇವನು ಚಂದ್ರ ಶರ್ಮನ ಮಗನು. ಇವರ ಮನೆಯ ಸಮೀಪ ಕಡವಾಲ(ಕದಂಬ) ಮರವಿತ್ತಂತೆ ಅದಕ್ಕೆ ಇವರ ಮನೆತನದ ಹೆಸರು ಕದಂಬ ಹಾಗು ಬನವಾಸಿ (ಉತ್ತರ ಕನ್ನಡ ಕಾರವಾರ ಜಿಲ್ಲೆ) ಯ "ಮಧುಕೇಶ್ವರ" ಇವರ ಮನೆದೇವರು.
ಮಯೂರ ವರ್ಮ ಕ್ರಿ.ಶ.325 ರಿಂದ 345 ರವರೆಗೆ ಕರ್ನಾಟಕದಲ್ಲಿದ್ದ, ಈತನೇ ಕದಂಬ ಸಾಮ್ರಾಜ್ಯ ಕಟ್ಟಿದವ.
ಮಯೂರನನ್ನ ಈಶಭಟ್ಟ ಎಂಬ ಬ್ರಾಹ್ಮಣ ಸಾಕಿಕೊಂಡಿರ್ತಾನೆ.



ಆಚಾರ್ಯ ವೀರಶರ್ಮರ ಹತ್ತಿರ ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಬಾಲಕ ಮಯೂರನಿಗೆ ಹೆಚ್ಚಿನದನ್ನು ಕಲಿಯುವ ತವಕ.

ಬಾಲಕನಗಿದ್ದಗಲೇ ಅಸಾಧಾರಣ ಶೌರ್ಯ, ಸಾಹಸ ಮತ್ತು ಜಾಣ್ಮೆಯನ್ನು ಪ್ರದರ್ಶಿಸುತ್ತಿದ್ದನು
ಗುರು ವೀರಶರ್ಮರು ಮಯೂರನಿಗೆ ಇನ್ನು ಹೆಚ್ಚಿನ ವಿದ್ಯಾಭ್ಯಾಸ ನೀಡಿ ಅವನನ್ನು ದೊಡ್ಡ ಪಂಡಿತನನ್ನಾಗಿ ಮಾಡಬೇಕೆಂಬ ಹಂಬಲ.


ಆಗ ವೀರಶರ್ಮರು ಮಯೂರನ ತಂದೆಯ ಹತ್ತಿರ ಮಗನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ತಮ್ಮ ಬಿನ್ನಹ ವ್ಯಕ್ತಪಡಿಸಿದರು .ಅಂದು ತಾಳಗುಂದ ಪಲ್ಲವರ ದೊರೆಯ ಅಧೀನದಲ್ಲಿತ್ತು.
ಬನವಾಸಿ ಪ್ರದೇಶದಲ್ಲಿ ಅಂತಹ ಯಾವುದೇ ದೊಡ್ಡ ವಿದ್ಯಾ ಸಂಸ್ಥೆಗಳು ಇಲ್ಲದಿರುವುದರಿಂದ ಕಂಚಿಗೆ ಕಳುಹಿಸಿವಂತೆ ಗುರು ವೀರಶರ್ಮರು ಪ್ರಸ್ತಾಪ ಮಾಡಿದರು.

ಕಂಚಿಯು ಪಲ್ಲವರ ರಾಜಧಾನಿ , ಅದು ಅತ್ಯಂತ ವೈಭವದಿಂದ ಮೆರೆಯುತ್ತಿತು. ಮಯೂರನು ತನ್ನ ಗುರು ವೀರಶರ್ಮರ ಜೊತೆ ಕಂಚಿ ತಲುಪಿ ಘಟಿಕಸ್ಥಾನ ಸೇರಿಕೊಂಡನು. ಅತ್ಯಂತ ಸರಳನು , ತೇಜಸ್ವಿಯೂ ಮತ್ತು ಮೇಧಾವಿ ಅದ ಮಯೂರನು ಎಲ್ಲರ ಅಚ್ಚು ಮೆಚ್ಚಿನವನಾದನು.



ಹೀಗಿರುವಾಗ ಒಮ್ಮೆ …


ಪ್ರತಿದಿನ ಪುಷ್ಕರಣಿಯಲ್ಲಿ ಮಿಂದು ತನ್ನ ಪಾಡಿಗೆ ಮಯೂರನು ಆಶ್ರಮದ ಕಡೆಗೆ ನಡೆದು ಹೋಗುತ್ತಿದ್ದನು. ಅವನ ಬೆನ್ನ ಹಿಂದೆ ಪಲ್ಲವರ ಸೈನಿಕರು ಬರುತ್ತಿರುವ ಶಬ್ದ ಕೇಳಿಸಿತು. ಅದಕ್ಕವನು ವೇಗವಾಗಿ ಪಕ್ಕಕೆ ಸರಿದನು.ನಂತರ ಕುದುರೆ ಅವನ ಮುಂದೆ ಹಾದು ಹೋಯಿತು. ಆದರೆ ಕುದುರೆಯ ಮೇಲಿನ ಸೈನಿಕನ ಚಾಟಿ ನೇರವಾಗಿ ಮಯುರನ ಬೆನ್ನಿಗೆ ಅಪ್ಪಳಿಸಿತು. ಇದೆಲ್ಲ ಕೆಲವೇ ನಿಮಿಷಗಳಲ್ಲಿ ನಡೆದು ಹೋಯಿತು. ಶಾಂತ ಸ್ವಭಾವದ ಮಯೂರ ಉಗ್ರ ಸ್ವರೋಪಿಯಾದ, ಬೆನ್ನ ಮೇಲಿನ ಬಾಸುಂಡೆಯಿಂದ ರಕ್ತ ಸೋರುತ್ತಿತ್ತು.

ಪಲ್ಲವರ ಸೈನಿಕನ ಈ ಕೃತ್ಯದಿಂದ ಮಯೂರ ಕೆಂಡ ಮಂಡಲವಾದನು. ತಕ್ಷಣವೇ ಅವನು ಅ ಸೈನಿಕನಿಗೆ ಬುದ್ದಿ ಕಲಿಸುವೆನೆಂದು ತಿರ್ಮಾನಿಸಿ ರಾಜನ ಬಳಿ ದೂರನ್ನು ಕೊಡಲು ಅಣಿಯಾದನು. ಆಗ ಗುರು ವೀರಶರ್ಮರು ಮಯೂರನಿಗೆ ಸಮಾಧಾನ ಹೇಳಿದರೂ ಮಯೂರ ತಾನು ದೊರನ್ನೇ ಕೊಡುವೆನೆದು ಹೊರಟನು.


ಮಯೂರನು ನೇರವಾಗಿ ಪಲ್ಲವೇಂದ್ರನ ಅರಮನೆಗೆ ಹೋಗಿ "ನಿನ್ನ ಸೈನಿಕರಿಂದ ನನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಬೇಕು" ಎಂದು ಕೇಳುತ್ತಾನೆ. ಆಗ ಪಲ್ಲವೇಂದ್ರ ತನ್ನ ಮಂತ್ರಿಯ ಅಭಿಪ್ರಾಯವನ್ನು ಕೇಳಿದಾಗ ಮಂತ್ರಿಯು 
"ಕುದುರೆಗೆ ಬೀಳುವ ಏಟು ಇವನಿಗೆ ಬಿದ್ದಿರಬೇಕು. ಇವನದೇ ತಪ್ಪು , ಸವಾರನದೆನು ತಪ್ಪಿಲ್ಲ" ಎಂದು ಹೇಳಿದಾಗ ದೊರೆ ಅದಕ್ಕೆ ಸಮ್ಮತಿಸುವನು.


ಮಯೂರ ಬಗೆ ಬಗೆಯಾಗಿ ತನ್ನ ಮನವಿ ಸಲ್ಲಿಸಿದರು ರಾಜಸಭೆಯಲ್ಲಿ ಯಾರು ಅವನ ಪರವಾಗಿ ನಿಲ್ಲಲಿಲ್ಲ. ಕೊನೆಗೆ ಮಯೂರ ದೊರೆಯನ್ನು ಕುರಿತು ” ನಿನ್ನ ಕೈಯಲ್ಲಿ ನಿನ್ನ ಸೈನಿಕನ್ನನ್ನು ಪತ್ತೆ ಹಚ್ಚಿ ಶಿಕ್ಷಿಸಲು ಆಗದಿದ್ದರೆ ಹೇಳಿ ನಾನೆ ಅ ಕೆಲಸ ಮಾಡುವೆ ” ಎಂದು ಹೇಳಿದಾಗ ಸಭೆಗೆ ಸಭೆಯೇ ನಗಲು ಆರಂಭಿಸಿತು.


ಪಲ್ಲವೇಂದ್ರ ಈ ಬ್ರಾಹ್ಮಣ ಏನು ಮಾಡಿಯಾನು ಎಂದು ಅದನ್ನು ಮರೆತೇ ಬಿಟ್ಟ.

ಮುಂದೆ ಮಯುರನು ಮಯೂರ ಶರ್ಮ ಎಂಬ ಬ್ರಾಹ್ಮಣ ಹೆಸರಿನಿಂದ ಮಯೂರ ವರ್ಮಯೆಂದು ಕ್ಷತ್ರಿಯ ಧರ್ಮಕ್ಕೆ ತನ್ನ ನಾಮವನ್ನು ಬದಲಾಯಿಸಿಕೊಂಡು ಪಲ್ಲವೇಂದ್ರನ ಸೊಕ್ಕನ್ನು ಅಡಗಿಸಿ, ಕನ್ನಡದ ಮೊದಲ ರಾಜ್ಯವನ್ನು ಕಟ್ಟುತ್ತಾನೆ ಅದೇ ನಾವು ನೀವು ಸಮಾಜವಿಜ್ನಾನದಲ್ಲಿ ಓದಿದ "ಕದಂಬ ಸಮ್ರಾಜ್ಯ", ಅದೂ ನಮ್ಮ ಕನ್ನಡದ ನೆಲದಲ್ಲಿ.



I am proud to be a Kannadiga n about my ancestors were like Mayura, hats off to them !!



Guys as you observed and read the Mayura history, he was in rule between 325AD - 345AD. . .So the BAHUBALI story is not at all related with Mayura, in bahubali film they have taken the role called "Aslam Khan" but Mayura was in 325AD that's 3rd century, and Islam was raised in 6th century, so Mayura, Bahubali, Aslam Khan are not at all related or from the same era.


So from the above history we can conclude that Bahubali movie is fictional (ಕಾಲ್ಪನಿಕ)


By this movie i came to know abt Mayura Varma, Kakusha, Kadamba dynasty, Real Bahubali history, Bahubali's father Rishabhadeva history, and about Jain religion. . .


I don't know how people taken this Bahubali film, but this movie made me to do research n I came to know many history parts about our great sanatana Bharat!!



ನನ್ನ ಮುಂದಿನ ಲೇಖನ "ಬಾಹುಬಲಿಯ ನಿಜವಾದ ಇತಿಹಾಸ"ದ ಬಗ್ಗೆ, ನಿರೀಕ್ಷಿಸಿ



©Vinod Hindu Nationalist







Wednesday, July 8, 2015

ಕ್ರಾಂತಿ ಪುರುಷ ಕುಮಾರರಾಮ

ವಿಜಯನಗರ ಸ್ಥಾಪನೆಯ ಕನಸುಗಾರ "ಕುಮಾರರಾಮ"





ವಿಜಯನಗರ  ಸಾಮ್ರಾಜ್ಯ (ಕ್ರಿ.ಶ. 1336  - ಕ್ರಿ.ಶ. 1565)ದ ಕನಸುಗಾರನೆಂದೇ ಪ್ರಖ್ಯಾತಿ ಹೊಂದಿರುವ ಗಂಡುಗಲಿ ಕುಮಾರರಾಮ ಬದುಕಿದ್ದು  ಕ್ರಿ.ಶ. 1290 - ಕ್ರಿ.ಶ. 1320 ರ ನಡುವೆ

ದಾಖಲೆಗಳ ಪ್ರಕಾರ ವಿಜಯ ನಗರದ ಸಂಸ್ಥಾಪಕರಾದ "ಹಕ್ಕ ಮತ್ತು ಬುಕ್ಕರು" ಕುಮಾರರಾಮನ ಮಾವನ ಮಕ್ಕಳಾಗಿದ್ದರು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ. - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ ನಾಗಿದ್ದ ನೆಂಬುದಕ್ಕೆ ಸಾಕಷ್ಟು ಚಾರಿತ್ರಿಕ ಘಟನೆಗಳ ಉಲ್ಲೇಖನಗಳು ಸಿಕ್ಕುತ್ತವೆ.



"ಕುಮಾರರಾಮ"ನು ಕಮ್ಮಟದುರ್ಗದ ರಾಜ ಕಂಪಿಲ ಮತ್ತು ಹರಿಯಾಲದೇವಿ/ಹರಿಹರದೇವಿಯರ ಮಗ. ಚಿಕ್ಕಂದಿನಲ್ಲೇ ಸಮಸ್ತ 64 ವಿದ್ಯೆಗಳನ್ನು ಕಲಿತು, ಶತ್ರು ರಾಜರನ್ನೇಲ್ಲಾ ಹಿಮ್ಮೆಟ್ಟಿಸಿ ಅಜೇಯನೆನಿಸಿದ್ದನು. ಕುಮಾರರಾಮನ ವೀರತ್ವವನ್ನು ಗಮನಿಸಿದ "ದೆಹಲಿಯ ಸುಲ್ತಾನ" ಅವನಿಗೆ ತನ್ನ ಮಗಳನ್ನು ಕೊಟ್ಟು ಬಾಂದವ್ಯ ಬೆಳೆಸಲು ನಿಶ್ಚಯಿಸುವನು. ಆದರೆ ಕಟ್ಟರ್ ಹಿಂದೂವಾದಿಯಾಗಿದ್ದ ಕುಮಾರರಾಮನು ಆ ಮುಸ್ಲಿಂ ಸಂಬಂಧವನ್ನು ನಿರಾಕರಿಸುವನು.

ಒಂದು ದಿನ ಕುಮಾರರಾಮ ತಂದೆಯೊಡನೆ ಬೇಟೆಗೆ ಹೊರಡಲು ಸಿದ್ದವಾಗುತ್ತಿದ್ದವನು ದಿಢೀರನೆ ತನ್ನ ಮನಸ್ಸನ್ನು ಬದಲಿಸಿ ಸ್ನೇಹಿತರೊಂದಿಗೆ ಆಟವಾಡಲು ಇಷ್ಟಪಟ್ಟು ತಾಯಿ ಹರಿಯಾಲದೇವಿಯಲ್ಲಿ ಮುತ್ತಿನ ಚೆಂಡನ್ನು ಬೇಡುತ್ತಾನೆ. ಆಗ ತಾಯಿ ಆತಂಕಗೊಂಡು ಮುತ್ತಿನ ಚೆಂಡಿನಿಂದ ಈವರೆಗೆ ಆಗಿರುವ ಅವಘಡವನ್ನು ಕುರಿತು ಹೇಳುತ್ತಾಳೆ.

ಆದರೆ ಕುಮಾರರಾಮ ಆಟವಾಡಲು ಆ ಚೆಂಡೆ ಬೇಕೆಂದು ಪಟ್ಟು ಹಿಡಿದಾಗ, ಅವಳು ತನ್ನೇದುರಿನಲ್ಲೇ ಚೆಂಡನ್ನು ಆಡುವಂತೆ ತಾಕೀತು ಮಾಡುತ್ತಾಳೆ. ಅದರಂತೆ ಕುಮಾರರಾಮ ಸ್ನೇಹಿತರೊಡಗೂಡಿ ಚೆಂಡಾಟವಾಡುವಾಗ ಅದು ಚಿಕ್ಕಮ್ಮ ರತ್ನೋಜಿ ಮನೆಯೊಳಗೆ ಬೀಳುತ್ತದೆ. ಕುಮಾರ ರಾಮ ಅದನ್ನು ತರ ಹೋದಾಗ ಚಿಕ್ಕಮ್ಮ ರತ್ನೋಜಿ ಅವನನ್ನು ಕಾಮುಕ ದೃಷ್ಟಿಯಿಂದ ಕಾಣುತ್ತಾಳೆ.

ತನ್ನ ಇಷ್ಟವನ್ನು ನೆರವೇರಿಸುವಂತೆ ಕುಮಾರರಾಮನನ್ನು ಪರಿ ಪರಿಯಾಗಿ ಬೇಡುತ್ತಾಳೆ. ಪರನಾರಿಸೋದರನೆಂಬ ಬಿರುದನ್ನು ಹೊಂದಿದ್ದ ಕುಮಾರರಾಮ ತಾಯಿಯ ಮಾತನ್ನು ಸಂಪೂರ್ಣವಾಗಿ ತಿರಸ್ಕರಿಸುವನು.

ಆಕೆ ಅನೈತಿಕ  ಸಂಬಂಧ ನಡೆಸಲು ಮುನ್ನಡೆದಾಗ, ಕುಮಾರರಾಮ ತಾಯಿಯ ಸ್ಥಾನದಲ್ಲಿರುವ ಅವಳನ್ನು ತಿರಸ್ಕರಿಸುವನು. ಇದರಿಂದ ರೊಚ್ಚಿಗೆದ್ದ ರತ್ನಾಜಿ ಕಂಪಿಲರಾಯನಿಗೆ(ಕುಮಾರರಾಮನ ತಂದೆಗೆ) ಇಲ್ಲಸಲ್ಲದ ದೂರನ್ನು ಹೇಳುವಳು. ಕಿರಿ ಪತ್ನಿಯ ಮಾತನ್ನು ನಂಬಿದ ಕಂಪಿಲರಾಯ ಕುಮಾರರಾಮನ ತಲೆ ತೆಗೆಯುವಂತೆ "ಮಂತ್ರಿ ಬೈಚಪ್ಪ"ನಿಗೆ ಆಜ್ಞಾಪಿಸುವನು.

"ಬೈಚಪ್ಪ" ಕುಮಾರರಾಮನನ್ನು ಬಚ್ಚಿಟ್ಟು ಅವನ ಬದಲಿಗೆ ಬೇರೊಬ್ಬರ ತಲೆ ಕಡಿದು ತಂದು ರಾಜನಿಗೆ ತೋರಿಸುವನು. ಕುಮಾರರಾಮನು ಇಲ್ಲವೆಂಬ ಸುದ್ದಿ "ದೆಹಲಿ ಸುಲ್ತಾನ"ನಿಗೆ ತಿಳಿದು ಅವನು "ಕಮ್ಮಟದುರ್ಗ"ದ ಮೇಲೆ ದಂಡೆತ್ತಿ ಬರುತ್ತಾನೆ. ಕಂಪಿಲರಾಯ ದೆಹಲಿಯ ಸುಲ್ತಾನನಿಗೆ ಸೋತು ಇನ್ನೇನು ಶರಣಾಗುವ ಸಂದರ್ಭದಲ್ಲಿ ಮಂತ್ರಿ ಬೈಚಪ್ಪ ಕುಮಾರರಾಮನನ್ನು ಹೊರಬಿಟ್ಟಾಗ ಅವನು ವೀರಾವೇಶದಿಂದ ಕಾದಾಡಿ ಶತ್ರು ಸೇನೆಯನ್ನು ಬಡಿದೋಡಿಸಿದನು.



ಕಂಪ್ಲಿಯು ಚಿಕ್ಕರಾಜ್ಯವಾಗಿದ್ದು ಇದರ ಪಕ್ಕದಲ್ಲಿ ಬಲಿಷ್ಠ ರಾಜರಾದ ವಾರಂಗಲ್ಲಿನ ಕಾಕತೀಯರು, ವೀರ ಬಲ್ಲಾಳದ ಹೊಯ್ಸಳರು, ಬಹುಮನಿ ಸುಲ್ತಾನರು ಹಾಗೂ ದೆಹಲಿಯ ಮಹಮದ್ ಬಿನ್ ತುಗಲಕ್ ಇವರುಗಳನ್ನು ಯುದ್ದದಲ್ಲಿ ಮಣಿಸಿದ್ದುದಕ್ಕೆ ಕುಮಾರರಾಮನನ್ನು ಗಂಡುಗಲಿ ಕುಮಾರರಾಮ ಎಂದು ಕರೆಯುತ್ತಿದ್ದುದು. ದೆಹಲಿಯ ತುಗಲಕ್‌ನ ಅಪಾರ ಸೇನೆಯನ್ನು ಕುಮಾರರಾಮನು 2 ಸಲ ಸೋಲಿಸಿ ಹಿಮ್ಮೆಟ್ಟಿಸುತ್ತಾನೆ. ಮೂರನೆಯ ಸಲ 2 ಲಕ್ಷಕ್ಕೂ ಮಿಗಿಲಾದ ತುಗಲಕ್‌ನ ಸೇನೆಯನ್ನು ಎದುರಿಸಿ ವೀರಾವೇಶದಿಂದ ಹೋರಾಡಿ ಶತೃಗಳ ಕುತಂತ್ರದಿಂದ ಯುದ್ಧದಲ್ಲಿ ಮಡಿದು ವೀರ ಸ್ವರ್ಗ ಹೊಂದುತ್ತಾನೆ.

ದೆಹಲಿ ಸುಲ್ತಾನನು "ಮಾತಂಗಿ" ಎನ್ನುವವಳ ನೇತೃತ್ವದಲ್ಲಿ ಕಮ್ಮಟದುರ್ಗವನ್ನು ವಶಪಡಿಸಿಕೊಳ್ಳಲು ಅಪಾರ ಸೇನೆ ಕಳುಹಿಸುವನು. ಅದುವರೆವಿಗೂ ಅಪ್ರತಿಮ ವೀರಾವೇಶದಿಂದ ಹೋರಾಡುತ್ತಿದ್ದ ಕುಮಾರರಾಮ ಮಾತಂಗಿ ಎದುರಾದಾಗ ಹೆಂಗಸಿನ ಮೇಲೆ ಕೈಯೆತ್ತುವುದು ತರವಲ್ಲವೆಂದು ತಟಸ್ಥನಾಗುತ್ತಾನೆ.ಆ ಸಮಯದಲ್ಲಿ ಮಾತಂಗಿ ಕುಮಾರರಾಮನನ್ನು ಸಂಹರಿಸಿ ಅವನ ರುಂಡವನ್ನು ದೆಹಲಿ ಸುಲ್ತಾನನಿಗೆ ಒಪ್ಪಿಸುತ್ತಾಳೆ.

ಮುಸಲ್ಮಾನರು ಎಷ್ಟಿದ್ದರೂ ಮೋಸಗಾರರೇ ಅನ್ನೋದಕ್ಕೆ ಕುಮಾರರಾಮನನ್ನ ಮೋಸದಿಂದ ದೆಹಲಿ ಸುಲ್ತಾನ್ ಕೊಂದಿದ್ದೇ (ಈ ತರಹ ಕುತಂತ್ರ ಬುದ್ಧಿ ಉಪಯೋಗ್ಸಿಯೇ ಈ ಮುಸಲ್ಮಾನರು ನಮ್ಮನ್ನಾಳಿದ್ದು) ಉದಾಹರಣೆ.

~ Vinod Hindu Nationalist

Tuesday, July 7, 2015

ರಾವಣನ ಮಗಳು ಸೀತೆ

ಸೀತಾ ಮಾತೆಯು ರಾವಣನ ಮಗಳು?

ಕೆಲ ದರಿದ್ರ ಬುದ್ದಿ(ಇರದ)ಜೀವಿಗಳು, ತಮಗೆ ತಾವೇ "ಜಾತ್ಯಾತೀತ(Secular)" ಅಂತ ಕರೆದುಕೊಳ್ಳುವ ಜೀವಿಗಳು ಈಗೀಗ ರಾಮನನ್ನು ಬೈದರೆ ಸಾಕು ತಾವು Popular ಆಗ್ಬಿಡ್ತಿವಿ, ಮಾಧ್ಯಮದವರು ಬಿಟ್ಟಿ ಪ್ರಚಾರ ಕೊಟ್ಟೇ ಕೊಡ್ತಾರೆ ತಮ್ಮ image ಒಳ್ಳೇಯದಾಗಿಯೋ ಕೆಟ್ಟದಾಗಿಯೋ ಒಟ್ನಲ್ಲಿ famous ಆಗ್ಬಿಡ್ತಿವಿ ಅಂತ ಅಂದ್ಕೊಂಡು ಅದರಿಂದಾನೇ ತಮ್ಮ ಹೊಟ್ಟೆ ತುಂಬಿಸಿಕೊಳ್ತಿದಾರೆ, ಇರಲಿ ರಾಮನನ್ನ ಬೈದುಕೊಳ್ಳಲಿ ಅದರಿಂದ ಅವರ ಹೊಟ್ಟೆ ತುಂಬಿಸಿಕೊಳ್ಳೋದಾದರೆ ಇರಲಿ ಆ ರಾಮನನ್ನು ದಿನಂಪ್ರತಿ ನೆನೆಯುತ್ತಿರುವ ಅವರೇ "ನಿಜವಾದ" ರಾಮನ ಭಕ್ತರು, ಆದರೆ ಅಗ್ನಿಯಷ್ಟೇ ಪವಿತ್ರಳಾದ ಸೀತಾಮಾತೆಯನ್ನ ವಿನಾಕಾರಣ ಬೈಯುತ್ತ ಅವಳನ್ನ ರಾವಣನ ಅನುಭವಿಸಿದ, ಆಕೆ ತನ್ನ ಪಾವಿತ್ರ್ಯತೆ ಕಳೆದುಕೊಂಡಿದ್ದಳು, ಲವ ಕುಶ ಯಾರ ಮಕ್ಕಳು? etc etc ತುಚ್ಛ ಮಾತನ್ನಾಡೋ ನಾಯಿಗಳಿಗೆ ಒದು ವಿಷಯವನ್ನ ತಿಳಿಸೋಕೆ ಇಷ್ಟಪಡ್ತಿನಿ.

ನೀವೇನು ರಾವಣ-ಸೀತೆಯ ಸಂಬಂಧ ಕಲ್ಪಿಸಿದ್ದೆರಲ್ಲ ಅದೆಲ್ಲ ನಿಜ ಆದರೆ ಅದು ರಾವಣ-ಸೀತೆಯ ಅನೈತಿಕ ಸಂಬಂಧ ಅಲ್ಲ ಬದಲಾಗಿ ತಂದೆ-ಮಗಳ ಸಂಬಂಧ.

ಆಶ್ಚರ್ಯವಾಯಿತಾ? ಓದಿ

ಸೀತಾಮಾತೆಯ ಜನ್ಮರಹಸ್ಯ



ನಂಬಿಕೆಗಳ ಪ್ರಕಾರ ಸೀತಾದೇವಿಯು ಭೂಮಿಯಿಂದ ಹೊರ ಬಂದವಳು. ಅಂದರೆ ಜನಕ ರಾಜನು ಒಮ್ಮೆ ಹೊಲವನ್ನು ಉಳುವಾಗ ಅದರಲ್ಲಿ ಸೀತಾದೇವಿಯು ದೊರೆತಳು. ಆಗ ಜನಕರಾಜನು ಆ ಮಗುವನ್ನು ತನ್ನ ಸಾಕು ಮಗಳಾಗಿ ಸ್ವೀಕರಿಸಿ ಸಾಕಲು ತೊಡಗಿದನು. ವಾಯುವ್ಯ ಭಾರತದಲ್ಲಿ ಕಂಡು ಬರುವ ರಾಮಾಯಣದಲ್ಲಿ ಸೀತಾ ದೇವಿಯು ಮೇನಕೆಯ ದೈವೀಕ ಮಗಳಂತೆ, ನಂತರ ಜನಕ ರಾಜನು ಆಕೆಯನ್ನು ಸಾಕು ಮಗಳಾಗಿ ಸ್ವೀಕರಿಸಿದನಂತೆ. ಇನ್ನೂ ಕೆಲವು ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನ ನಿಜವಾದ ಮಗಳಂತೆ. ಆದರೆ ಬಹುತೇಕ ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನು ಉಳುತ್ತಿದ್ದ ವ್ಯವಸಾಯದ ಭೂಮಿಯಲ್ಲಿನ ಸಾಲುಗಳಲ್ಲಿ ದೊರೆತಳಂತೆ.

ವೇದವತಿಯ ಕಥೆ


 ಇನ್ನೂ ಕೆಲವು ಕಥೆಗಳು ಹೇಳುವುದೇನೆಂದರೆ ಸೀತಾದೇವಿಯು ವೇದವತಿಯ ಅವತಾರವಂತೆ. ವೇದವತಿಯು ಒಬ್ಬ ಬ್ರಾಹ್ಮಣ ಸ್ತ್ರೀಯಾಗಿದ್ದಳು. ಈಕೆಯು ರಾವಣನಿಂದ ಬಲತ್ಕಾರಕ್ಕೆ ಒಳಪಟ್ಟಳು. ರಾವಣನಿಂದ ತನ್ನ ಪಾವಿತ್ರ್ಯಕ್ಕೆ ಭಂಗ ಬಂದ ಕಾರಣದಿಂದ, ಆಕೆಯು ಅಲ್ಲಿಯೇ ಉರಿಯುತ್ತಿದ್ದ ಚಿತೆಯನ್ನು ಏರಿ ಮುಂದಿನ ಜನ್ಮದಲ್ಲಿ ರಾವಣನ ಮೃತ್ಯುವಿನ ಸಲುವಾಗಿ ಜನ್ಮ ತಾಳುವುನೆಂದು ಹೇಳಿ ಪ್ರಾಣ ಬಿಟ್ಟಳು. ಹೀಗೆ ಸೀತಾದೇವಿಯು ಜನಿಸಿದಳು.



ರಾವಣನ ಮಗಳು




ಉತ್ತರ ಪುರಾಣದ ಪ್ರಕಾರ, ಒಮ್ಮೆ ರಾವಣನು ಅಲಕಪುರಿಯ ಯುವ ರಾಣಿಯಾದ ಮೈನಾವತಿಯ ಮೇಲೆ ಕೆಟ್ಟ ಭಾವನೆಯನ್ನು ತಳೆದನಂತೆ. ಆಗ ಆಕೆಯು ರಾವಣನ ಮೇಲೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದಳಂತೆ. ಮುಂದೆ ಆಕೆ ರಾವಣ ಮತ್ತು ಮಂಡೋದರಿಯರ ಮಗಳಾಗಿ ಜನಿಸಿದಳಂತೆ. ಆದರೆ ಜ್ಯೋತಿಷ್ಯಗಳ ಆ ಮಗುವು ಸಾಮ್ರಾಜ್ಯವನ್ನು ನಾಶ ಮಾಡುತ್ತದೆ ಎಂದು ಭವಿಷ್ಯ ನುಡಿದರಂತೆ. ಆಗ ರಾವಣನು ಆ ಮಗುವನ್ನು ಕೊಲ್ಲುವಂತೆ ತನ್ನ ಸೇವಕನಿಗೆ ಆದೇಶ ಮಾಡಿದನಂತೆ. ಆದರೆ ಆ ಸೇವಕನು ಆ ಮಗುವನ್ನು ಕೊಲ್ಲಲಿಲ್ಲವಂತೆ, ಅವನು ಆ ಮಗುವನ್ನು ಮಿಥಿಲೆಯಲ್ಲಿ ಹೂತಿಟ್ಟು ಹೋಗಿಬಿಟ್ಟನಂತೆ. ಅದೇ ಮಗುವೇ ಜನಕ ರಾಜನಿಗೆ ದೊರೆಯಿತಂತೆ. ಅವಳೇ ಸೀತೆ.




 ರಾವಣ ತನ್ನ ಮಗಳನ್ನು ತ್ಯಜಿಸಿದ್ದು

ಜೈನ ರಾಮಾಯಣಗಳಲ್ಲಿ, ಸೀತೆಯು ರಾವಣನ ಮಗಳಾಗಿಯೇ ಜನಿಸಿದಳೆಂದು ಚಿತ್ರಿತಗೊಂಡಿದೆ. ಅಲ್ಲಿಯೂ ಸಹ ಜ್ಯೋತಿಷ್ಯಗಳು ರಾವಣನ ಜ್ಯೇಷ್ಠ ಪುತ್ರಿಯಿಂದ ಕುಲ ನಾಶವೆಂದು ಭವಿಷ್ಯ ನುಡಿಯುತ್ತಾರೆ. ಆದ್ದರಿಂದ ರಾವಣನು ಆ ಮಗುವನ್ನು ತುಂಬಾ ದೂರ ತೆಗೆದುಕೊಂಡು ಹೋಗಿ, ನೆಲದಲ್ಲಿ ಊತು ಹಾಕುವಂತೆ ತನ್ನ ಸೇವಕರಿಗೆ ಆದೇಶ ನೀಡುತ್ತಾನೆ. ಅವರು ಹಾಗೆಯೇ ಮಾಡಿದರು. ಆ ಮಗುವು ಜನಕನಿಗೆ ದೊರೆತು, ಜಾನಕಿಯಾಗಿ ಅಲ್ಲಿಯೇ ಬೆಳೆದು ದೊಡ್ಡವಳಾದಳು.


ರಾವಣನಿಗೆ ಸೀತೆಯ ಕುರಿತಾದ ಪ್ರೀತಿ


ರಾವಣನು ಸೀತೆಯನ್ನು ಇಷ್ಟಪಟ್ಟನು. ಆದರೆ ಆ ಪ್ರೀತಿಯು ಒಬ್ಬ ತಂದೆ ಮಗಳೆಡೆಗೆ ಹೊಂದಿದ್ದ ಪ್ರೀತಿಯಾಗಿತ್ತು. ಈ ವರ್ಣನೆಯು ನಮಗೆ ದೊರೆಯುವುದು ಜೈನ ರಾಮಾಯಣದಲ್ಲಿ. ಅದರ ಪ್ರಕಾರ ಸೀತೆಯು ಮಂಡೋದರಿಗೆ ಜನಿಸಿದಾಗ ರಾವಣನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಮುಂದೆ ಈಕೆ ಕುಲ ಕಂಟಕಳಾಗುತ್ತಾಳೆ ಎಂಬ ಜ್ಯೋತಿಷ್ಯಗಳ ಭವಿಷ್ಯವನ್ನು ಕೇಳಿದ ನಂತರ ರಾವಣನು ಈ ಮಗುವನ್ನು ದೂರಕ್ಕೆ ತೆಗೆದುಕೊಂಡು ಹೋಗಲು ಆದೇಶ ನೀಡಿದನು. ಆದರೆ ರಾವಣನು ಆ ಮಗುವಿನ ಮೇಲೆ ನಿಗಾವಹಿಸಿದ್ದನು. ಯಾವಾಗ ಜನಕ ರಾಜನಿಗೆ ಈ ಮಗುವು ದೊರೆತು, ಆತ ಆ ಮಗುವನ್ನು ತನ್ನ ಸಾಕು ಮಗಳಾಗಿ ಬೆಳೆಸುತ್ತಿದ್ದಾನೆ ಎಂದು ತಿಳಿಯಿತೋ, ಆಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಮಗಳು ಯುವರಾಣಿಯಾಗಿ ಬೆಳೆಯುತ್ತಿರುವುದನ್ನು ಈತನು ಆಗಾಗ ಕಾಣುತ್ತಿದ್ದನು. ಅಷ್ಟೇ ಅಲ್ಲ ಇದರಲ್ಲಿ ರಾವಣನು ಸೀತಾ ಸ್ವಯಂವರಕ್ಕೆ ಆಗಮಿಸಿ, ಆ ವಿವಾಹಕ್ಕೆ ತಾನು ಸಾಕ್ಷಿಯಾಗುತ್ತಾನೆ. ಆರ್ಯು ಪುತ್ರನಾದ ಕ್ಷತ್ರಿಯ ರಾಮನನ್ನು ಸೀತೆಯು ವರಿಸಿದ್ದಕ್ಕೆ ರಾವಣನು ಸಂತೋಷವನ್ನು ಪಡುತ್ತಾನೆ. ಆದರೆ ಎಲ್ಲವೂ ಸರಿಯಾಗಿರುತ್ತದೆ. ರಾಮನು 14 ವರ್ಷ ವನವಾಸಕ್ಕೆ ಹೋಗುವವರೆಗು.

 ಸೀತಾ ದೇವಿಯ ಅಪಹರಣ: ತಂದೆ ಪ್ರೀತಿಯೇ ಅಥವಾ ದ್ವೇಷವೇ?

ಯಾವಾಗ ರಾವಣನು ಸೀತೆಯು ರಾಮನೊಂದಿಗೆ ವನವಾಸವನ್ನು ಮಾಡುತ್ತಿರುವುದನ್ನು ತಿಳಿದನೋ, ಆಗಲೇ ಅವನು ತನ್ನ ಮಗಳನ್ನು ಅಪಹರಿಸಿ, ಆಕೆ ಅನುಭವಿಸುತ್ತಿರುವ ದುಃಖಕ್ಕೆ ಅಂತ್ಯ ಹಾಡುವ ತೀರ್ಮಾನಕ್ಕೆ ಬಂದನು. ಆದ್ದರಿಂದ ಆತನು ಸೀತೆಯನ್ನು ಅಪಹರಿಸಿ, ಲಂಕೆಗೆ ತಂದನು. ಜನರು ಇದನ್ನು ರಾಮ ಮತ್ತು ಲಕ್ಷ್ಮಣರ ದ್ವೇಷದ ಪ್ರತೀಕವಾಗಿ ಕಂಡರು. ಲಕ್ಷ್ಮಣನು ರಾವಣನ ತಂಗಿಯ ಮೂಗನ್ನು ಕತ್ತರಿಸಿದ್ದನು. ಆದರೆ ಅದು ತಂದೆಯು ತನ್ನ ಮಗಳನ್ನು ದುಃಖದಿಂದ ಪಾರು ಮಾಡುವ ಕೃತ್ಯವಾಗಿತ್ತು. ಯಾವಾಗ ರಾವಣನು ಸೀತೆಯ ಹೆಸರನ್ನು ಮಲಗಿರುವಾಗಲು ಕನವರಿಸಲು ಆರಂಭಿಸಿದನೊ, ಆಗ ರಾವಣನ ಹೆಂಡತಿ ಮಂಡೋದರಿ ಸಹ ರಾವಣನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು.

ರಾವಣನ ಅಂತ್ಯ



ಸೀತೆ ರಾವಣನ ಮಗಳೋ ಅಥವಾ ಅಲ್ಲವೋ, ಆದರೆ ರಾವಣನ ಅಂತ್ಯಕ್ಕೆ ಸೀತೆಯೆ ಕಾರಣಳಾದಳು. ಮೂಲಗಳ ಪ್ರಕಾರ ರಾವಣನು ಸೀತೆಯನ್ನು ರಾಮನಿಗೆ ಒಪ್ಪಿಸಲಿಲ್ಲ. ಆತನಿಗೆ ಸೀತೆಯು ರಾಮನೊಂದಿಗೆ ಮರಳಿ ವನವಾಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಈ ವಿಚಾರ ರಾವಣನಲ್ಲಿದ್ದ ತಂದೆಯ ಮನಸ್ಸಿಗೆ ಒಪ್ಪದ ವಿಷಯವಾಗಿತ್ತು. ಅದಕ್ಕಾಗಿ ಆತ ರಾಮನ ಮೇಲೆ ಉಗ್ರವಾದ ಹೋರಾಟವನ್ನೆ ಮಾಡಿದನು. ಅದರಲ್ಲಿ ತಾನೂ ಮಡಿದನು. ಕೊನೆಗೆ ಜ್ಯೋತಿಷ್ಯಗಳ ಭವಿಷ್ಯವು ನಿಜವಾಯಿತು.




Wednesday, July 1, 2015

Operation ENTEBBE


 "ಆಪರೇಷನ್ ಎಂಟೆಬ್ಬೆ"




ಇಸ್ರೇಲ್ ರೀತಿಯಲ್ಲಿ ಆಕ್ರಮಣಕಾರಿ ನೀತಿಯನ್ನು ನಾವೂ ಅನುಸರಿಸಿದರೆ ಮಾತ್ರ ಭಾರತದ ಅನ್ನ ತಿಂದೂ ಭಾರತೀಯರಾಗಿಲ್ಲದವರಿಗೆ ಹಾಗೂ ದೇವಸ್ಥಾನದ ಮೇಲೆ ದಾಳಿ ಮಾಡಿ ಅಮಾಯಕ ಜನರನ್ನು ಕೊಂದ ಭಯೋತ್ಪಾದಕರಿಗೆ ನಮ್ಮ ದೇಶದ ಮೊಹಲ್ಲಾಗಳಲ್ಲೇ ಜಾಗ ಕೊಟ್ಟು ರಕ್ಷಣೆ ಮಾಡುವವರಿಗೆ ಬಿಸಿತಟ್ಟಲು ಸಾಧ್ಯ.

ಅದು ಕಲ್ಪನೆಗೂ ನಿಲುಕದ ವಿಚಾರವಾಗಿತ್ತು. ವಿಮಾನಕ್ಕೆ ಎಷ್ಟೇ ಇಂಧನ ತುಂಬಿಸಿದರೂ 2,200 ಮೈಲು ದೂರದಲ್ಲಿರುವ ಉಗಾಂಡಕ್ಕೆ ಹೋಗಿ `ಕಮಾಂಡೋ ಆಪರೇಶನ್' ನಡೆಸಿ, ಒತ್ತೆಯಾಳುಗಳನ್ನು ಬಿಡಿಸಿಕೊಂಡು ವಾಪಸ್ ಬಂದು ತಲುಪುವುದು ಸಾಧ್ಯವಿಲ್ಲದ ಮಾತಾಗಿತ್ತು. ಇನ್ನೊಂದೆಡೆ ಭಯೋತ್ಪಾದಕರ ಜತೆ ಕೈಜೋಡಿಸಿದ್ದ ಉಗಾಂಡ ಸರಕಾರ ಕಮಾಂಡೋ ಆಪರೇಶನ್ ನಡೆಸುವುದಕ್ಕೆ ಅವಕಾಶವನ್ನೂ ನೀಡುತ್ತಿಲ್ಲ. ಹಾಗಿರುವಾಗ ಮರು ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುತ್ತದೆಯೇ? ಹಾಗಂತ ಅಪಹರಣಕಾರರ ಬೇಡಿಕೆಗೆ ಮಣಿದು ಜೈಲಿನಲ್ಲಿದ್ದ 40 ಪ್ಯಾಲೆಸ್ತೀನಿ ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರೋಣವೆಂದರೆ ``ಪ್ರಾಣ ಹೋಗುವ ಸಂದರ್ಭ ಬಂದರೂ ಭಯೋತ್ಪಾದಕರ ಜತೆ ರಾಜೀ ಮಾಡಿಕೊಳ್ಳಬಾರದು" ಎಂಬ ಕಾನೂನೇ ಇಸ್ರೇಲ್ನಲ್ಲಿದೆ. ಒಂದು ವೇಳೆ ಕಾನೂನನ್ನು ಮುರಿದು ಭಯೋತ್ಪಾದಕರನ್ನು ಬಿಡುಗಡೆ ಮಾಡಿದರೆ ದೇಶದ ಆತ್ಮಗೌರವಕ್ಕೇ ಚ್ಯುತಿ ಬರುತ್ತದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ರೇಲ್ ಮಾಡಿದ್ದೇನು ಗೊತ್ತೆ?

ಅಂದು 1976, ಜೂನ್ 27. ಮಧ್ಯಾಹ್ನ 12.30ಕ್ಕೆ ಆಗಸಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಏರ್ ಫ್ರಾನ್ಸ್ನ `ಎಎಫ್-139' ವಿಮಾನವನ್ನು ನಾಲ್ವರು ಭಯೋತ್ಪಾದಕರು ಅಪಹರಣ ಮಾಡಿದ್ದಾರೆ ಎಂಬ ಸುದ್ದಿ ತಿಳಿಯಿತು. ಆ ವಿಮಾನ `ಲಾಡ್ ಏರ್ಪೋರ್ಟ್'ನಲ್ಲಿ ಇಳಿಯಬಹುದು ಎಂದು ಭಾವಿಸಿದ ಇಸ್ರೇಲಿನ ಕಮಾಂಡೋಗಳು ವಿಮಾನ ನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿ ನಿಂತರು. ಆದರೆ ಲಾಡ್ ಬದಲು ಬೆಂಗಾಝಿ ಏರ್ಪೋರ್ಟ್ನಲ್ಲಿ ತಾತ್ಕಾಲಿಕವಾಗಿ ವಿಮಾನವನ್ನು ಕೆಳಗಿಳಿಸಿದ ಭಯೋತ್ಪಾದಕರು ಆರೂವರೆ ಗಂಟೆಯ ಬಳಿಕ ಮತ್ತೆ ಟೇಕ್ ಆಫ್ ಮಾಡಿಸಿದರು. ವಿಮಾನ ಬೆಳಗಿನ ಜಾವ 3 ಗಂಟೆಗೆ ಉಗಾಂಡದ ಎಂಟೆಬೆ ಏರ್ಪೋರ್ಟ್ಗೆ ಬಂದಿಳಿಯಿತು. ಹಾಗೆ ಬಂದಿಳಿದ ಕೂಡಲೇ ಇನ್ನೂ ಮೂವರು ಭಯೋತ್ಪಾದಕರು ಅಪಹರಣಕಾರರ ಜತೆಗೂಡಿದರು. `ಪೆರುವಿಯನ್' ಎಂಬ ಅಡ್ಡ ಹೆಸರು ಇಟ್ಟುಕೊಂಡಿದ್ದ ಭಯೋತ್ಪಾದಕನೊಬ್ಬ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದಾದರೆ ಫ್ರಾನ್ಸ್, ಸ್ವಿಜರ್ಲ್ಯಾಂಡ್, ಪಶ್ಚಿಮ ಜರ್ಮನಿ, ಕೀನ್ಯಾದಲ್ಲಿ ಬಂಧನದಲ್ಲಿಟ್ಟಿರುವ 13 ಹಾಗೂ ಇಸ್ರೇಲಿ ಜೈಲಿನಲ್ಲಿರುವ 40 ಇಸ್ಲಾಮಿಕ್ ಭಯೋತ್ಪಾದಕರನ್ನು ಬಂಧಮುಕ್ತಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ. ಸುದ್ದಿ ಜಗತ್ತಿನಾದ್ಯಂತ ಹರಡಿತು.

ಆದರೆ ಯಾರೂ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಉಗಾಂಡ ಹೇಳಿಕೇಳಿ ಮುಸ್ಲಿಂ ರಾಷ್ಟ್ರ. ಕುಖ್ಯಾತ ಸರ್ವಾಧಿಕಾರಿ ಇದಿ ಅಮೀನ್ ಅದರ ಚುಕ್ಕಾಣಿ ಹಿಡಿದಿದ್ದ. ಈ ಎಲ್ಲ ಕಾರಣಗಳಿಂದಾಗಿಯೇ ವಿಮಾನವನ್ನು ಉಗಾಂಡಕ್ಕೆ ಅಪಹರಿಸಲಾಗಿತ್ತು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಜುಲೈ 1ರಿಂದ ದಿನವೊಂದಕ್ಕೆ ಇಂತಿಷ್ಟು ಪ್ರಯಾಣಿಕರನ್ನು ಹತ್ಯೆಗೈಯ್ಯಲಾಗುವುದು ಎಂಬ ಬೆದರಿಕೆಯನ್ನೂ ಹಾಕಿದರು. ಅಪಾಯವನ್ನರಿತ ಜಗತ್ತಿನ ಇತರ ರಾಷ್ಟ್ರಗಳು ಭಯೋತ್ಪಾದಕರ ಜತೆ ಕೈಜೋಡಿಸಿದ್ದ ಉಗಾಂಡದ ಮೇಲೆ ಒತ್ತಡ ಹೇರಲಾರಂಭಿಸಿದವು. ಅಷ್ಟಕ್ಕೂ ವಿಮಾನದಲ್ಲಿದ್ದ ಮೂರನೇ ಎರಡರಷ್ಟು ಪ್ರಯಾಣಿಕರು ಇತರ ರಾಷ್ಟ್ರಗಳ ನಾಗರಿಕರಾಗಿದ್ದರು. ಹಾಗಾಗಿ ಒತ್ತಡಕ್ಕೆ ಮಣಿದ ಇದಿ ಅಮೀನ್ 106 ಇಸ್ರೇಲಿ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಿಸಿದರು. ಅಷ್ಟೇ ಅಲ್ಲ, ಇಸ್ರೇಲ್ ಕಮಾಂಡೋ ಆಪರೇಶನ್ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಅರಿತ ಅವರು, ಇಸ್ರೇಲಿ ಪ್ರಯಾಣಿಕರನ್ನೂ ವಿಮಾನದಿಂದ ಕೆಳಗಿಳಿಸಿ ಏರ್ಪೋರ್ಟ್ ಟರ್ಮಿನಲ್ನ ಒಂದು ಕೋಣೆಯಲ್ಲಿ ಕೂಡಿ ಹಾಕಿಸಿದರು. ಅಲ್ಲದೆ ಏರ್ಪೋರ್ಟ್ನ ಹೊರಭಾಗದಲ್ಲಿ ಉಗಾಂಡ ಸೇನೆಯ ಒಂದು ತುಕಡಿಯನ್ನೂ ನಿಯೋಜನೆ ಮಾಡಿದರು. ಹೀಗೆ ಉಗಾಂಡ ಸರಕಾರವೇ ಅಪಹರಣಕಾರರ ಜತೆ ಕೈಜೋಡಿಸಿದ ಕಾರಣ ಇಸ್ರೇಲ್ ಪ್ರಧಾನಿ ಇಟ್ಜಾಕ್ ರಬಿನ್ ಮುಂದೆ ಯಾವ ದಾರಿಗಳೂ ಇರಲಿಲ್ಲ. ಕಮಾಂಡೋ ಆಪರೇಶನ್ಗೆ ಆದೇಶ ನೀಡಲು ಉಗಾಂಡ 2,200 ಮೈಲು ದೂರದಲ್ಲಿದೆ. ಅಲ್ಲಿನ ಪರಿಸ್ಥಿತಿ, ವಸ್ತುಸ್ಥಿತಿ ಹೇಗಿದೆ ಎಂಬುದೂ ತಿಳಿದಿಲ್ಲ. ಅಲ್ಲದೆ ವಿಮಾನ ಫ್ರೆಂಚ್ ಕಂಪನಿಗೆ ಸೇರಿರುವುದರಿಂದ ಅವರ ಅನುಮತಿಯೂ ಬೇಕು. ಹಾಗಾಗಿ ಬಂಧಿತ ಭಯೋತ್ಪಾದಕರನ್ನು ಬಿಡುಗಡೆ ಮಾಡುವುದಾಗಿ ಜುಲೈ 1ರಂದು ರಬಿನ್ ಘೋಷಣೆ ಮಾಡಿದರು. ಸುದ್ದಿ ತಿಳಿದ ಅಪಹರಣಕಾರರು ಕೊಲ್ಲಲು ನೀಡಿದ್ದ ಗಡುವನ್ನು ಜುಲೈ 4ರವರೆಗೂ ಮುಂದೂಡಿದರು.

ಇತ್ತ ಇಸ್ರೇಲಿ ಗುಪ್ತ ದಳದ ಮುಖ್ಯಸ್ಥ ಮೊಟ್ಟಾ ಗುರ್ ಹಾಗೂ ಜೋನಾಥನ್ ನೆತನ್ಯಾಹು ಯೋಜನೆಯೊಂದನ್ನು ರೂಪಿಸಲಾರಂಭಿಸಿದರು. ಉಗಾಂಡ ಬಿಡುಗಡೆ ಮಾಡಿದ್ದ ಪ್ರಯಾಣಿಕರಲ್ಲಿ ಗರ್ಭಿಣಿಯೊಬ್ಬಳಿದ್ದಳು. ಆಕೆ ಇಸ್ರೇಲ್ಗೆ ಎಂಟೆಬೆ ಏರ್ಪೋರ್ಟ್ನಲ್ಲಿರುವ ವಸ್ತುಸ್ಥಿತಿಯ ಚಿತ್ರಣ ನೀಡಿದಳು. ಆಕೆಯಿಂದಾಗಿ, ಏಳು ಜನ ಅಪಹರಣಕಾರರಿಗೆ ಉಗಾಂಡ ಸೈನಿಕರು ಸಹಕಾರ ನೀಡುತ್ತಿರುವ ವಿಚಾರ ಹಾಗೂ ಇಸ್ರೇಲಿ ಪ್ರಯಾಣಿಕರನ್ನು ಕೂಡಿ ಹಾಕಿರುವ ಕೊಠಡಿಯ ಬಗೆಗಿನ ಅಮೂಲ್ಯ ಮಾಹಿತಿಯೂ ದೊರೆಯಿತು. ಜತೆಗೆ ಹಿಂದೊಮ್ಮೆ ಎಂಟೆಬೆ ಏರ್ಪೋರ್ಟ್ನಲ್ಲಿ ನಿಯೋಜಿತರಾಗಿದ್ದ ಸೇನಾ ಸಾರ್ಜೆಂಟ್ ಒಬ್ಬರು ತೆಗೆದಿದ್ದ ವಿಡಿಯೋ ಚಿತ್ರಣವೂ ಸಹಾಯಕ್ಕೆ ಬಂತು. ಜುಲೈ 2ರಂದು ಕಮಾಂಡೋ ಆಪರೇಶನ್ ನಡೆಸಲು ಬೇಕಾದ ಸಕಲ ಸಿದ್ಧತೆ ಮಾಡಿದರು. ಲಾಡ್ ಏರ್ಪೋರ್ಟ್ನಲ್ಲಿ ಯಶಸ್ವಿಯಾಗಿ ಡಮ್ಮಿ ಪರೀಕ್ಷೆಯನ್ನೂ ನಡೆಸಲಾಯಿತು. ಇನ್ನೊಂದೆಡೆ ಕಮಾಂಡೋ ಆಪರೇಶನ್ ನಡೆಸುವುದು ಸುಲಭದ ಮಾತಲ್ಲ ಎಂದರಿತ ಇಸ್ರೇಲಿ ಸೇನೆ ಉಗಾಂಡದ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನೇ ಮಾಡಿ ಬಿಡಲು ಸನ್ನದ್ಧವಾಗುತ್ತಿತ್ತು. ಆದರೆ ಯಾವ ಮಾರ್ಗ ಅನುಸರಿಸುವುದು ಎಂದು ನಿರ್ಧರಿಸುವುದೇ ಕಷ್ಟದ ವಿಷಯವಾಗಿತ್ತು. ಅದೇನನ್ನಿಸಿತೋ ಗೊತ್ತಿಲ್ಲ, ಬ್ರಿಗೇಡಿಯರ್ ಜನರಲ್ ಡಾನ್ ಶೋಮ್ರಾನ್ ಅವರು ಜೋನಾಥನ್ ನೆತನ್ಯಾಹು ರೂಪಿಸಿದ ಯೋಜನೆಯ ಬಗ್ಗೆಯೇ ಒಲವು ತೋರಿದರು. ಇಸ್ರೇಲ್ ಸರಕಾರ ಆತಂಕದಿಂದಲೇ ಒಪ್ಪಿಗೆ ನೀಡಿತು.



ಜುಲೈ 3ರಂದು ಮಧ್ಯಾಹ್ನ 1.20ಕ್ಕೆ ನಾಲ್ಕು ವಿಮಾನಗಳು ಏಕಕಾಲಕ್ಕೆ ಹೊರಟವು. ಒಂದು ಪ್ರಯಾಣಿಕರನ್ನು ಬಂಧಮುಕ್ತಗೊಳಿಸಿ ವಾಪಸ್ ಕರೆತರುವ ವಿಮಾನ, ಮತ್ತೊಂದರಲ್ಲಿ ಇಂಧನ ದಾಸ್ತಾನು, ಮಗದೊಂದರಲ್ಲಿ ಒಂದಿಷ್ಟು ಕಮಾಂಡೋಗಳು, ಕೊನೆಯದರಲ್ಲಿ ಎರಡು ಲ್ಯಾಂಡ್ರೋವರ್ ಜೀಪುಗಳು ಹಾಗೂ ಒಂದು ಕಪ್ಪು ಮರ್ಸಿಡಿಸ್ ಬೆಂಝ್ ಕಾರಿತ್ತು. ಆ ಕಾರಿನ ಮೇಲೆ ಉಗಾಂಡದ ಭಾವುಟವಿತ್ತು. ಒಳಗೆ ನೆತನ್ಯಾಹುಸಹಿತ ನಾಲ್ವರು ಕಮಾಂಡೋಗಳಿದ್ದರು. ಇದಿ ಅಮೀನ್ ಬಳಸುತ್ತಿದ್ದುದೂ ಬ್ಲ್ಯಾಕ್ ಮರ್ಸಿಡಿಸ್ ಬೆಂಝ್ ಕಾರನ್ನೇ! ಶರಮ್ ಶೇಕ್ನಲ್ಲಿ ತಾತ್ಕಾಲಿಕ ನಿಲುಗಡೆ ಮಾಡಿದ ವಿಮಾನಗಳು ಎಂಟೆಬೆ ತಲುಪಲು ಬೇಕಾದ ಏಳೂವರೆ ತಾಸು ಪ್ರಯಾಣಕ್ಕೆ ಅಣಿಯಾದವು. ಅಷ್ಟಕ್ಕೂ ಆಕ್ರಮಣದ ಸಮಯ, ಸಂದರ್ಭ ಬಹುಮುಖ್ಯವಾಗಿತ್ತು. ರಾತ್ರಿ ವೇಳೆಯಲ್ಲೇ ಕಾರ್ಯಾಚರಣೆ ನಡೆಸಬೇಕಿತ್ತು. ರಾಡಾರ್ನ ಕಣ್ಣಿಗೆ ಬೀಳುವಂತಿರಲಿಲ್ಲ. ಹಾಗಾಗಿ ಸಮಯವನ್ನೂ ಲೆಕ್ಕಹಾಕಿಯೇ ನಿರ್ಧರಿಲಾಗಿತ್ತು. ಪ್ರತಿರಾತ್ರಿ 10.30ಕ್ಕೆ ಬ್ರಿಟಿಷ್ ಏರ್ವೇಸ್ನ ವಿಮಾನವೊಂದು ಇಂಧನ ತುಂಬಿಸಿಕೊಳ್ಳಲು ಎಂಟೆಬೆಯಲ್ಲಿ ಇಳಿಯುತ್ತಿತ್ತು. ಲೈಟ್ ಆರಿಸಿಕೊಂಡು ಆ ವಿಮಾನದ ಹಿಂದೆ ಹಿಂದೆ ಸಾಗಿದ ನಾಲ್ಕೂ ಇಸ್ರೇಲಿ ವಿಮಾನಗಳು ಎಂಟೆಬೆಗೆ ತೀರಾ ಸಮೀಪದಲ್ಲಿರುವ ವಿಕ್ಟೋರಿಯಾ ಸರೋವರದ ಬಳಿಗೆ ಬಂದಾಗ ರಾತ್ರಿ 10.30. ಹಾಗೆ ಆಗಮಿಸಿದ ಮೂರು ವಿಮಾನಗಳು ಆಗಸದಲ್ಲೇ ನಿಂತುಬಿಟ್ಟರೆ, ಮುಂದಿದ್ದ ವಿಮಾನ ರಸ್ತೆಗಿಳಿಯಿತು!! ಕೂಡಲೇ ಕೆಳಗಿಳಿದ 10 ಜನ ಕಮಾಂಡೋಗಳು ಉಳಿದ ವಿಮಾನಗಳು ಇಳಿಯುವುದಕ್ಕೆ ದಾರಿ ಸುಗಮಗೊಳಿಸಿದರು. ಮೊದಲು ಇಳಿದ ವಿಮಾನ ಟ್ಯಾಕ್ಸಿ ರಸ್ತೆಯಲ್ಲಿ ನಿಲ್ದಾಣದ ಹಳೆಯ ಟರ್ಮಿನಲ್ನತ್ತ ಸಾಗತೊಡಗಿತು. ಸ್ವಲ್ಪ ಮುಂದೆ ಸಾಗುತ್ತಿದ್ದಂತೆಯೇ ಆ ಕಾರ್ಗೋ ವಿಮಾನದ ತಳಭಾಗ ತೆರೆಯಿತು. ಅದರೊಳಗಿನಿಂದ 2 ಲ್ಯಾಂಡ್ರೋವರ್ಗಳು ಹಾಗೂ ಕಪ್ಪು ಮರ್ಸಿಡಿಸ್ ಹೊರಬಂತು! ಲ್ಯಾಂಡ್ ರೋವರ್ಗಳಲ್ಲಿ ಉಗಾಂಡ ಸೈನಿಕರ ಸಮವಸ್ತ್ರ ಧರಿಸಿದ್ದ 35 ಕಮಾಂಡೋಗಳಿದ್ದರು. ಹೀಗೆ ಮೂರು ವಾಹನಗಳ Convoy (ದಂಡು) ಟರ್ಮಿನಲ್ನತ್ತ ಸಾಗತೊಡಗಿತು. Silenced gun ಬಳಸಿ ಅಡ್ಡಬಂದ ಕಾವಲುಗಾರರನ್ನು ಕೊಂದು ಹಾಕಿದ ನೆತನ್ಯಾಹು ಮರ್ಸಿಡಿಸ್ ಮೂಲಕ ವಿಮಾನ ನಿಲ್ದಾಣದೊಳಕ್ಕೆ ಪ್ರವೇಶಿಸಿದರು. ಕೇವಲ ಮೂರು ನಿಮಿಷಗಳಲ್ಲಿ ಏಳು ಅಪಹರಣಕಾರರಲ್ಲಿ ನಾಲ್ವರನ್ನು ಕೊಂದುಹಾಕಿದರು.



ಗುಂಡಿನ ಶಬ್ದ ಕೇಳಿ ಎಚ್ಚೆತ್ತುಕೊಂಡ ಉಗಾಂಡ ಸೈನಿಕರನ್ನು ಲ್ಯಾಂಡ್ರೋವರ್ನಲ್ಲಿದ್ದ 35 ಕಮಾಂಡೋಗಳು ಗುಂಡಿನ ಚಕಮಕಿಯಲ್ಲಿ ತೊಡಗಿಸಿಕೊಂಡರು(engage). ಮೊದಲನೇ ವಿಮಾನ ಕೆಳಗಿಳಿದ 6 ನಿಮಿಷಗಳಲ್ಲಿ ಎರಡನೇ ವಿಮಾನವೂ ಕೆಳಗಿಳಿಯಿತು. ಅದರಲ್ಲಿದ್ದ ಕಮಾಂಡೋಗಳು ಪ್ರಯಾಣಿಕರನ್ನು ಬಂಧ ಮುಕ್ತಗೊಳಿಸಿದರು. ಅಷ್ಟರಲ್ಲಿ ಮತ್ತೊಂದು ವಿಮಾನವೂ ಕೆಳಗಿಳಿಯಿತು. ಅದರಲ್ಲಿ ಆಗಮಿಸಿದ್ದ ಕಮಾಂಡೋಗಳು ಏರ್ಪೋರ್ಟ್ನಲ್ಲಿ ಸನ್ನದ್ಧವಾಗಿ ನಿಲ್ಲಿಸಿದ್ದ ಉಗಾಂಡದ 8 ಮಿಗ್ ವಿಮಾನಗಳನ್ನು ನಾಶಪಡಿಸಿ ಸೈನಿಕರ ಜತೆ ಕಾದಾಟ ಆರಂಭಿಸಿದರು. ಈ ಮಧ್ಯೆ ಕೆಳಗಿಳಿದ ಕೊನೆ ವಿಮಾನ ಉಳಿದ ವಿಮಾನಗಳಿಗೆ ಮರು ಇಂಧನ ತುಂಬಿಸಿತು. ಹೀಗೆ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರನ್ನು ಬಂಧಮುಕ್ತಗೊಳಿಸಿ ವಿಮಾನಕ್ಕೆ ಏರಿಸಿದರು. ಆದರೆ ವಿಮಾನವನ್ನು ಟೇಕ್ ಆಫ್ ಮಾಡೋಣವೆಂದರೆ ಉಗಾಂಡ ಸೈನಿಕರು ಗುಂಡು ಹಾರಿಸಿ ಹೊಡೆದುರುಳಿಸುತ್ತಾರೆ. ಅಂತಹ ಅಪಾಯವನ್ನರಿತ ಕಮಾಂಡೋಗಳು ಏರ್ಪೋರ್ಟ್ನ ವಿದ್ಯುತ್ ಸಂಪರ್ಕವನ್ನೇ ಕಡಿದು ಹಾಕಿದರು. ರಾಸಾಯನಿಕ ಹಾಗೂ ಬಾಂಬ್ಗಳನ್ನು ಸಿಡಿಸಿ ದಟ್ಟ ಹೊಗೆಯನ್ನು ಸೃಷ್ಟಿಸಿದರು. ಹೀಗೆ ನಿರ್ಮಾಣವಾದ ಕತ್ತಲಿನಲ್ಲಿಯೇ ಟೇಕ್ ಆಫ್ ಆದ ವಿಮಾನ, 106 ಪ್ರಯಾಣಿಕರನ್ನು ಹೊತ್ತು ಇಸ್ರೇಲ್ನತ್ತ ಹೊರಟಿತು. ಇತ್ತ ತಮ್ಮ ದೇಶವಾಸಿಗಳ ಪ್ರಾಣ ರಕ್ಷಣೆ ಮಾಡಿದ ಕಮಾಂಡೋಗಳು ಒಬ್ಬೊಬ್ಬರಾಗಿಯೇ ಹಿಂದೆ ಸರಿದು ಉಳಿದ ವಿಮಾನಗಳನ್ನೇರಿದರು. ದಟ್ಟ ಹೊಗೆ ಹಾಗೂ ಅನಿರೀಕ್ಷಿತ ದಾಳಿಯಿಂದಾಗಿ ದಿಕ್ಕೆಟ್ಟಿದ್ದ ಉಗಾಂಡ ಸೈನಿಕರು ಬೆಪ್ಪಾಗಿ ನಿಂತಿದ್ದರೆ ಇಸ್ರೇಲಿ ಕಮಾಂಡೋಗಳು ವಿಮಾನಗಳೊಂದಿಗೆ ವಾಪಸ್ ಸಾಗುತ್ತಿದ್ದರು. ಇಂಥದ್ದೊಂದು `ಕಮಾಂಡೋ ಆಪರೇಶನ್' ಅನ್ನು ಇಸ್ರೇಲ್ ಬಿಟ್ಟರೆ ಜಗತ್ತಿನ ಯಾವ ರಾಷ್ಟ್ರವೂ ಇದುವರೆಗೂ ನಡೆಸಿಲ್ಲ, ಬಹುಶಃ ಮುಂದೆಯೂ ನಡೆಸಲು ಸಾಧ್ಯವಿಲ್ಲ!



ಬೇಸರದ ಸಂಗತಿಯೆಂದರೆ ಆ ದಾಳಿಯ ರೂವಾರಿ ಜೋನಾಥನ್ ನೆತನ್ಯಾಹು ವಿಮಾನದಲ್ಲಿ ಹೆಣವಾಗಿ ಮಲಗಿದ್ದರು! ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ನೆತನ್ಯಾಹು ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆದರೇನಂತೆ ತನ್ನ ಪ್ರಾಣ ಹೋಗುವ ಮೊದಲು ದೇಶದ ಮಾನ ಕಾಪಾಡಿದ್ದರು. ಇರಾನ್, ಲೆಬನಾನ್, ಪ್ಯಾಲೆಸ್ತೀನ್, ಈಜಿಪ್ತ್, ಸಿರಿಯಾ, ಇರಾಕ್ ಹೀಗೆ ಮುಸ್ಲಿಂ ರಾಷ್ಟ್ರಗಳಿಂದಲೇ ಸುತ್ತುವರಿದಿದ್ದರೂ ನಮ್ಮ ಬೆಂಗಳೂರಿನ ಮೂರು ಪಟ್ಟು ಮಾತ್ರ ದೊಡ್ಡದಿರುವ ಇಸ್ರೇಲ್ ಏಕೆ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿದೆಯೆಂದರೆ ಪ್ರತಿ ಯಹೂದಿಯ ಒಳಗೂ ಒಬ್ಬ ಜೋನಾಥನ್ ನೆತನ್ಯಾಹು ಇದ್ದಾನೆ. ಇಲ್ಲದೇ ಹೋಗಿದ್ದರೆ 1976ರಲ್ಲಿ ಐದು ಮುಸ್ಲಿಂ ರಾಷ್ಟ್ರಗಳು ಒಮ್ಮೆಲೆ ಮುಗಿಬಿದ್ದಾಗಲೇ ಇಸ್ರೇಲ್ ಅಳಿದು ಇತಿಹಾಸದ ಪುಟ ಸೇರುತ್ತಿತ್ತು.

ಈ ಅರವತ್ತು ವರ್ಷಗಳುದ್ದಕ್ಕೂ ಅದು ಭಯೋತ್ಪಾದನೆಯನ್ನು ಮೆಟ್ಟುತ್ತಲೇ ಬಂದಿದೆ. ನಾವು ನೆರೆಯಲ್ಲಿ ಎರಡು ಮುಸ್ಲಿಂ ರಾಷ್ಟ್ರಗಳನ್ನಿಟ್ಟುಕೊಂಡೇ ಹೆಣಗುತ್ತಿದ್ದೇವೆ. ಇನ್ನು ಅಕ್ಕ-ಪಕ್ಕ, ಎಲ್ಲೆಡೆಯೂ ಮುಸ್ಲಿಂ ರಾಷ್ಟ್ರಗಳನ್ನಿಟ್ಟುಕೊಂಡು ಇಸ್ರೇಲ್ ಇಂದಿಗೂ ಜೀವಂತವಾಗುಳಿದಿರುವುದು ಸಾಮಾನ್ಯ ಮಾತಲ್ಲ. ನಾವೂ ಕೂಡ ಅಗಾಗ್ಗೆ, ಅಲ್ಲಲ್ಲಿ ಒಂದಿಷ್ಟು ಭಯೋತ್ಪಾದಕರನ್ನು ಬಂಧಿಸಿ, ಮಂಪರು ಪರೀಕ್ಷೆಗೆ ಒಳಪಡಿಸಿ ಮರೆತು ಬಿಡುತ್ತೇವೆ. ನಮಗೆ ಮತ್ತೆ ಎಚ್ಚರವಾಗುವುದು ಇನ್ನೊಂದು ಭಯೋತ್ಪಾದಕ ದಾಳಿ ನಡೆದಾಗಲೇ. ಜೈಪುರದಲ್ಲಿ ದಾಳಿಯಾದಾಗ ದಿಲ್ಲಿ ಬಾಂಬ್ ಸ್ಫೋಟವನ್ನು ನೆನಪಿಸಿಕೊಳ್ಳುತ್ತೇವೆ. ದಿಲ್ಲಿಯಲ್ಲಿ ಬಾಂಬ್ ಸಿಡಿದಾಗ ಮುಂಬೈ ಸ್ಫೋಟ ನೆನಪಾಗುತ್ತದೆ. ಆದರೆ ಒಬ್ಬ ಯಹೂದಿಯನ್ನು ಕೊಂದರೆ ಇಸ್ರೇಲಿಯರು ಇಬ್ಬರು ಪ್ಯಾಲೆಸ್ತೀನಿಯರನ್ನು ಕೊಲ್ಲುತ್ತಾರೆ. ಅಷ್ಟಕ್ಕೂ ಭಯೋತ್ಪಾದಕರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು. ಅಂತಹ ಆಕ್ರಮಣಕಾರಿ ನೀತಿಯನ್ನು ನಾವೂ ಅನುಸರಿಸಿದರೆ ಮಾತ್ರ ಭಾರತದ ಅನ್ನ ತಿಂದೂ ಭಾರತೀಯರಾಗಿಲ್ಲದವರಿಗೆ ಹಾಗೂ ದೇವಸ್ಥಾನದ ಮೇಲೆ ದಾಳಿ ಮಾಡಿ ಅಮಾಯಕ ಜನರನ್ನು ಕೊಂದ ಭಯೋತ್ಪಾದಕರಿಗೆ ನಮ್ಮ ದೇಶದ ಮೊಹಲ್ಲಾಗಳಲ್ಲೇ ಜಾಗ ಕೊಟ್ಟು ರಕ್ಷಣೆ ಮಾಡುವವರಿಗೆ ಬಿಸಿತಟ್ಟಲು ಸಾಧ್ಯ.

Via Shrikant Shetty!!

Wednesday, June 24, 2015

ಅದೇ ರಾಗ ಅದೇ ಹಾಡು(So called ಬುದ್ಧಿಜೀವಿ ಹಾಗು ಬೌದ್ಧ ಜೀವಿಗಳಿಗಾಗಿ ಈ ಲೇಖನ)


ಅದೇ ರಾಗ ಅದೇ ಹಾಡು!!



ಈ ಪೋಸ್ಟ್'ನ ಕೆಲ ವಿಷಯಗಳನ್ನ ಸಂತೋಷ ತಮ್ಮಯ್ಯರವರು "ನಿಲುಮೆ"ಯಲ್ಲಿ ಬರೆದ ಅಂಕಣದಿಂದ ಕಾಪಿ ಮಾಡಲಾಗಿದೆ, ಮಿಕ್ಕಿದ್ದು ನನ್ನ ಅನುಭವ.

ಕೆಲ ಬುದ್ಧಿ(ಲದ್ದಿ) ಹಾಗು ಬೌದ್ಧ ಜೀವಿಗಳು ಹಿಂದೂಗಳನ್ನು ಯಾವಾಗಲೂ ಬೈತಾನೇ ಇರ್ತಾರೆ, ಹಿಂದೂ ಧರ್ಮವನ್ನು ಹೀಯಾಳಿಸ್ತಾನೆ ಇರ್ತಾರೆ, ನಮ್ಮ ಧರ್ಮದ ದೇವರುಗಳನ್ನ ಬಾಯಿಗೆ ಬಂದಹಾಗೆ ನಾಲಿಗೆ ಮೇಲೆ ಹಿಡಿತವಿಲ್ಲದವರ ರೀತಿ ವಿಷ ಕಕ್ಕುತ್ತಲೇ ಇರ್ತಾರೆ.



ಅದ್ವೈತ ಸಿದ್ದಾಂತ ಪ್ರತಿಪಾದಿಸಿದ, ಹಿಂದೂ ಧರ್ಮವನ್ನ ಪುನರುತ್ಥಾನಗೊಳಿಸಿದ ಶಂಕರಾಚಾರ್ಯರನ್ನಂತೂ ಬೌದ್ಧರನ್ನ, ಬೌದ್ಧ ಧರ್ಮದ ಜನರನ್ನ ದೇಶ ಬಿಟ್ಟೋಡಿಸಿದ ಕ್ರೂರಿ, ಬ್ರಾಹ್ಮಣ, ಮನುವಾದಿ ಅಂತ ಬಾಯಿಗೆ ಬಂದಹಾಗೆ ಬೈತಾರೆ.ಅಷ್ಟಕ್ಕೂ ಅವರ ಟೀಕೆಯೇನೂ ಹೊಸದಲ್ಲ.

ಬೌದ್ಧರನ್ನು ದೇಶಬಿಟ್ಟೇ ಓಡಿಸಿದರು. ರಕ್ತಪಾತ ಮಾಡಿದರು. ವೈದಿಕಶಾಹಿಯ ಮೂಲ ಪ್ರೇರಕ ಎಂದೆಲ್ಲಾ ಶಂಕರರನ್ನು ತೆಗಳುವವರು ಅನಾದಿಯಿಂದಲೂ ಇದ್ದಾರೆ. ಇದೆಲ್ಲಾ ಹುಚ್ಚು ಆರ್ಭಟಗಳು. ಬೌದ್ಧರನ್ನು ದೇಶದಿಂದ ಓಡಿಸಲು ಈ ದೇಶವೇನು ಶಂಕರಾಚಾರ್ಯರದ್ದಾಗಿತ್ತೇ? ಅವರೇನು ರಾಜರಾಗಿದ್ದರೇ?

ಭಿಕ್ಷೆ ಬೇಡುತ್ತಾ ದೇಶ ಸಂಚಾರ ಮಾಡುತ್ತಿದ್ದ ಶಂಕರರು ಬೌದ್ಧರನ್ನು ದೇಶದಿಂದ ಹೊರಗಟ್ಟಿದರು ಎನ್ನುವುದೂ ಒಂದೇ ಈ ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎನ್ನುವುದೂ ಒಂದೇ. ಅಂದು ರಾಜ್ಯವಿದ್ದುದು ರಾಜರುಗಳ ಕೈಯಲ್ಲಿ. ಶಂಕರರು ಪ್ರತಿಪಾದನೆ ಮಾಡಿದ್ದು ಆದೈತ ಸಿದ್ಧಾಂತವನ್ನು. ಆ ಸಮಯದಲ್ಲಿ ಶಂಕರರಿಗೆ ಕನಿಷ್ಠ ರಾಜಾಶ್ರಯವೂ ಇರಲಿಲ್ಲ. ಇನ್ನು ಓಡಿಸುವ ಪ್ರಶ್ನೆ ಎಲ್ಲಿಂದ ಬಂತು?

ದ್ವೈತವೇ ಆಗಲಿ, ಅದ್ವೈತವೇ ಆಗಲಿ, ವಿಶಿಷ್ಟ್ಯಾದ್ವೈತವೇ ಆಗಲಿ ಎಲ್ಲವೂ ವೇದಗಳನ್ನು ಪ್ರಮಾಣಗಳನ್ನಾಗಿ ಸ್ವೀಕರಿಸಿದ ತತ್ತ್ವಗಳು. ಭಕ್ತಿಮಾರ್ಗ, ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗಗಳನ್ನು ತಮ್ಮ ತಮ್ಮ ತತ್ತ್ವದಲ್ಲಿ ಪ್ರತಿಪಾದಿಸಿದವರು. ಇವೆಲ್ಲಕ್ಕೂ ವೇದಗಳು ಪ್ರಮಾಣಗಳು. ಅದಕ್ಕೂ ಅದೇ ಹೊತ್ತಲ್ಲಿ ಅವೈದಿಕ ಪ್ರತಿಪಾದಕರೂ ಹುಟ್ಟಿಕೊಂಡಿದ್ದರು. ಎಲ್ಲವೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ. ಚಾರ್ವಾಕನಂಥ ನಿರೀಶ್ವರವಾದಿ. ನಾಸ್ತಿಕ ಪಂಥಕ್ಕೂ ಜಾಗಕೊಟ್ಟ ಸಮಾಜ ಭಾರತದ್ದು. ಇನ್ನು ಚಾರ್ವಾಕಕ್ಕೆ ಹೋಲಿಸಿದರೆ ಅಧುನಿಕ ಎನ್ನಬಹುದಾದ ಬೌದ್ಧವನ್ನು ಯಾರಾದರೂ ಓಡಿಸಿಯಾರೇ? ಅಲ್ಲದೆ ಅವೈದಿಕ ಪಂಥಗಳ ಒಳಗೆ ಕೂಡ ತಾತ್ವಿಕ ಭಿನ್ನಾಭಿಪ್ರಾಯಗಳಿವೆ.

ಬೌದ್ಧ ಮತ್ತು ಜೈನದೊಳಗೂ ಸಾಮ್ಯತೆಗಳಿಲ್ಲ. ಜೈನ ಇಂದೂ ಭಾರತದಲ್ಲಿ ಭದ್ರವಾಗಿದೆ. ಒಂದು ವೇಳೆ ಶಂಕರರು ಅವೈದಿಕವನ್ನೆಲ್ಲಾ ಓಡಿಸಿದರು ಎಂದಿದ್ದರೆ ಜೈನವನ್ನು ಏಕೆ ಓಡಿಸಲಿಲ್ಲ? ಬುದ್ಧಪೂರ್ವದ ಯುಗದಲ್ಲಿ ಅವೈದಿಕವನ್ನು ಪ್ರತಿಪಾದನೆ ಮಾಡುವ ಸುಮಾರು ೬೦ ಧರ್ಮಗ್ರಂಥಗಳು ಅಸ್ತಿತ್ವದಲ್ಲಿದ್ದವು.

ಹಾಗಾದರೆ ಬೌದ್ಧತತ್ವ ಭಾರತಕ್ಕೆ ಹೊಸದಲ್ಲ ಎಂದಾಯಿತು ಅಂಥದ್ದರಲ್ಲಿ ಶಂಕರ ಯಾರನ್ನು ಕೊಲ್ಲಬೇಕಿತ್ತು? ಶಂಕರರನ್ನು “ಪ್ರಚ್ಛನ್ನ ಬೌದ್ಧ” ಎಂದೇ ಏಕೆ ಕರೆದರು?

ಶಂಕರ ಚರಿತ್ರೆಯಲ್ಲಿ ಅವರು ಮಂಡನಮಿಶ್ರನೆಂಬ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ತನ್ನ ಹಿಂಬಾಲಕರಾಗಿ ಮಾಡಿಕೊಂಡರು ಎಂಬ ಉಲ್ಲೇಖಗಳು ಸಿಗುತ್ತವೆ. ಶಂಕರರಿಗೆ ಶಸ್ತ್ರಸಜ್ಜಿತವಾದ ಸೈನಿಕರು ಇದ್ದಿದ್ದರೆ ತಲೆಹಾಳು ಮಾಡಿ ಕೊಂಡು ವಾದ-ವಿವಾದ ಮಾಡುವ ಅವಶ್ಯಕತೆ ಇತ್ತೇ?

ಶಂಕರರನ್ನು ಟೀಕಿಸುವವರಿಗೆ ವಾದದಲ್ಲಿ ಗೆಲ್ಲುವ ಶಕ್ತಿ ಇಲ್ಲವೆಂದ ಮಾತ್ರಕ್ಕೆ ಸಕಲರಿಗೂ ಇರುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಸರಿಯೇ?

ಇತಿಹಾಸತಜ್ಞ ಬೆಸೆಂಟ್ ಸ್ಮಿತ್ ಹೇಳುವಂತೆ “ಭಾರತೀಯ ವೈದಿಕ ಮತೀಯರಿಂದ ಬೌದ್ಧರು ಪೀಡಿಸಲ್ಪಟ್ಟಿದ್ದಾರೆ ಎನ್ನುವುದು  ಸರಿಯಲ್ಲ. ಭಾರತೀಯ ಜನತೆಯಲ್ಲಿ ಬೌದ್ಧಮತದ ಬಗ್ಗೆ ಕಿರಿಕಿರಿ , ತಿರಸ್ಕಾರ ಉಂಟಾಗಿ ಕಟ್ಟಕಡೆಯಲ್ಲಿ ಅದು ದೇಶದಿಂದಲೇ ನಶಿಸಿಹೋಯಿತು. ಏಕೆಂದರೆ ಬೌದ್ಧರು ಮತ್ತು ಮತ್ತೆ ದೇಶದ ಸ್ವಾತಂತ್ರ್ಯ ಹಾಗೂ ಸಾಮ್ರಾಜ್ಯದ ವಿಷಯದಲ್ಲಿ ಎಸಗಿದ ಕೃತ್ಯಗಳೇ ಅವನ ವಿನಾಶಕ್ಕೆ ಕಾರಣವಾಗಿತ್ತು” ಎನ್ನುತ್ತಾರೆ. ಅದು ಐತಿಹಾಸಿಕವಾದ ಸತ್ಯ.

ಏಕೆಂದರೆ ಸಂಖ್ಯೆಯಲ್ಲಿ ಹೆಚ್ಚು ಇದ್ದ ವೈದಿಕರನ್ನು ಆಳುತ್ತಿದ್ದವರು ಬೌದ್ಧ ಮತಾನುಯಾಯಿ ಅರಸರು. ಅಶೋಕನಂಥ ರಾಜನೇ ಅಹಿಂಸೆಯ ದೃಷ್ಟಿಯಿಂದ ಕೆಲವು ಆಚರಣೆಗಳನ್ನು ನಿಷೇಸಿದ್ದ. ಶಿಕ್ಷೆಯನ್ನು ಘೋಷಿಸಿದ್ದ. ಇದು ಎಷ್ಟು ದಿನ ನಡೆದೀತು? ಜನ ಸಹಜವಾಗಿಯೇ ಆಕ್ರೋಶಗೊಂಡರು. ಅಲ್ಲದೆ ರಾಜಾಶ್ರಯದ ನೆರವಿನಿಂದ ಬೌದ್ಧ ಮತ ವಿದೇಶಗಳಿಗೆ ತೆರಳಿತು. ಅಶೋಕನೇ ತನ್ನ ಮಕ್ಕಳನ್ನು ಶ್ರೀಲಂಕಾ ಮತ್ತು ಬರ್ಮಾಗಳಿಗೆ ಕಳುಹಿಸಿದ ಉಲ್ಲೇಖಗಳಿವೆ.

ಇಷ್ಟಿದ್ದ ಮೇಲೆ ಭಾರತೀಯ ಮೂಲದ  ಬೌದ್ಧ ವಿದೇಶಕ್ಕೆ ಸಾಗಿತು ಎಂದು ಹೆಮ್ಮೆ ಪಡುವ ಬದಲು ಸಂಬಂಧವೇ ಪಡದ ಶಂಕರರನ್ನು ಏಕೆ ಎಳೆದು ತರಬೇಕು?

ಒಪ್ಪಿಕೊಳ್ಳೋಣ. ಅವೈದಿಕಕ್ಕೂ ಸ್ಥಾನಮಾನ ನೀಡಿದ ದೇಶದಲ್ಲಿ ಬೌದ್ಧ ವಿದೇಶದಲ್ಲರುವಷ್ಟೇ ಗಟ್ಟಿಯಾಗಿರಬೇಕಿತ್ತು ಎಂದುಕೊಳ್ಳೋಣ. ಅದರ ಪತನಕ್ಕೆ ಕಾರಣವಾದ ವಿಪರೀತ ವಿಧಿ ನಿಷೇಧಗಳನ್ನು ವಿಧಿಸಿದ ರಾಜರನ್ನು  ದೂರೋಣ. ಒಬ್ಬ ಅಂಬೇಡ್ಕರರಿಂದ ಅದು ಭಾರತದಲ್ಲಿ ಮರುಸ್ಥಾಪನೆಯಾದುದ್ದಕ್ಕೆ ಖುಷಿ ಪಡೋಣ. ಶಂಕರಾಚಾರ್ಯರನ್ನು ಬ್ರಾಹ್ಮಣರ ಆಸ್ತಿ ಎನ್ನುವ ಮೊದಲು ಕೊಂಚವಾದರೂ ಶಂಕರನ್ನು ಅರಿಯೋಣ. ಅರಿಯದೇ ಇದ್ದರೆ ವ್ಯಕ್ತಿ ಏನಾಗುತ್ತಾನೆ ಎನ್ನುವುದನ್ನು ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ.


 ಬುದ್ಧನು ಅನ್ಯಧರ್ಮಗಳನ್ನ ದ್ವೇಷಿಸಿ ಅಂತ ಎಂದೂ ಹೇಳಿದವನಲ್ಲ, ಅವನು ಮೋಕ್ಷ ಕಂಡುಕೊಂಡು ಬದುಕನ್ನ ಸರಳವಾಗಿ, ಅಹಿಂಸೆಯ ಮಾರ್ಗದಿಂದ ಬದುಕಿ ಅಂದ ಆ ಪುಣ್ಯಾತ್ಮನ ವಿಚಾರಧಾರೆಗಳನ್ನೇ ತಿರುಚಿ ಅವನನ್ನ ಹಿಂದೂ ವಿರೋಧಿ ಅಂತ ಅವನ ತತ್ವಗಳನ್ನ ತದ್ವಿರುದ್ಧ ರೀತಿಯಲ್ಲಿ ಪಾಲಿಸೋದು ಬೌದ್ಧ ಧರ್ಮವಾ?

ಅರಿಯದೇ ದೂರಿದರೆ ಶಂಕರರು ಬ್ರಾಹ್ಮಣರ ಆಸ್ತಿಯಾಗಿ, ಕ್ರೂರಿಯಾಗಿ ಕಾಣುತ್ತಾರೆ.ತಿಳಿದವರು ಆ ಮನಸ್ಸನ್ನು ಸಿನಿಕ, ಅಸ್ವಸ್ಥ ಎಂದು ಕರೆಯುತ್ತಾರೆ.



ನೀವು ಎಷ್ಟೇ ತೆಗಳಿದರೂ, ತುಚ್ಭವಾಗಿ ಕಂಡರೂ ಹಿಂದುಗಳು ಹಿಂದುಗಳೇ, ಶಾಂತಿಪ್ರೀಯರೇ, ಬೇರೆ ಧರ್ಮಗಳನ್ನ, ದೇವರುಗಳನ್ನ ಪೂಜಿಸಿ, ಎಲ್ಲ ಧರ್ಮಗಳು ಶ್ರೇಷ್ಟ ಅನ್ನೋರೆ.

ಇದಕ್ಕೆ ನೆನ್ನೆ ನಾನೇ ಕಂಡ ಉದಾಹರಣೆ ಹೇಳ್ತಿನಿ ಕೇಳಿ, ನೆನ್ನೆ ರಾತ್ರಿ ದಂಡು ದಂಡಾಗಿ ಕುಟುಂಬ ಸಮೇತವಾಗಿ ಕೆಲ ಜನಗಳು ಕಲಬುರಗಿಯ ರಸ್ತೆಯ ಮೇಲೆ ಹೊರಟಿದ್ರು, ಅವರನ್ನ ಅಷ್ಟು ಸಂಖ್ಯೆಯಲ್ಲಿ ಕಂಡ ನನಗೆ ಕುತೂಹಲ ತಡೆಯೋಕ್ಕಾಗದೇ "ನೀವು ಯಾವ ಊರಿಂದ ಬರ್ತಿದಿರಾ, ಎಲ್ಲಿಗೆ ಹೋಗ್ತಿದಿರಾ" ಅಂತ ಕೇಳ್ದೆ.

ಅವರು ಮಹಾರಾಷ್ಟ್ರದವರಂತೆ, ಕೊಲ್ಹಾಪುರದ ಲಕ್ಷ್ಮಿ ದರ್ಶನ ಮುಗಿಸಿ ಕಲಬುರಗಿಗೆ ಬಂದಿದ್ದರಂತೆ, ಇಲ್ಲಿಯ ಬೌದ್ಧ ಮಂದಿರದಲ್ಲಿ ಬುದ್ಧನ ದರ್ಶನವೂ ಪಡೆದು ಬಂದ್ವಿ ಈಗ ಗಾಣಗಾಪುರಕ್ಕೆ ಹೋಗಿ ದತ್ತನ ದರ್ಶನ ಪಡೆದು ವಿಜಯಪುರಕ್ಕೆ(ಬಿಜಾಪುರಕ್ಕೆ) ಹೋಗ್ತಿವಿ ಅಂತಿದ್ರು.

ನೋಡಿ ನಮ್ಮ ಜನ ಹಿಂದು, ಬೌದ್ಧ ಅಥವಾ ಬೇರೆ ಯಾವುದೇ ಧರ್ಮವನ್ನ ಹೀಯಾಳಿಸಲ್ಲ ಬದಲಾಗಿ ಎಲ್ಲ ಧರ್ಮಕ್ಕೂ ಗೌರವಿಸ್ತಾರೆ ಅನ್ನೋದಕ್ಕೆ ಸಣ್ಣ ಉದಾಹರಣೆ ಅಷ್ಟೆ, ನಮ್ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಂತೂ ಜನ ದರ್ಗಾಗಳಿಗೂ ಹೋಗಿ ಬರ್ತಾರೆ, ಅದೂ ಕೂಡ ದೇವರು ಅಂತ ನಂಬ್ತಾರೆ.

ಇಂತ ಹಿಂದುಗಳಿಗೆ ಹೀಯಾಳಿಸೋದು ಒಂದೇ ನಿಮ್(ಬೌದ್ಧ ಜೀವಿಗಳು, ಲದ್ದಿ ಜೀವಿಗಳು, ಹಿಂದುಗಳನ್ನು ಅಸಹಿಷ್ಣು ಅನ್ನುವರು) ಯೋಗ್ಯತೆ ಏನು ಅಂತ ತೋರಿಸಿಕೊಡೋದು ಒಂದೇ, ನಿಮ್ ತಲೆಮೇಲೆ ನೀವೇ ಕಲ್ಲು ಹಾಕೊಂತಿದೀರಾ ಅನ್ನೋದು ಎಚ್ಚರವಿರಲಿ, ನಿಮ್ಮ ಯೋಗ್ಯತೆ ತಿಳಿದು ಹಿಂದೂ ತಿರುಗಿಬಿದ್ದರೆ ನಿಮಗೆ ಉಳಿಗಾಲ ಇಲ್ಲ ಮೂರ್ಖರೇ!

"ಹಿಂದೂ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ" ಅನ್ನೋದನ್ನ ನೀವು ಮರೆತಿರೋ ಹಾಗಿದೆ.

ಇನ್ನೂ ಕಾಲ ಮಿಂಚಿಲ್ಲ, ಬದಲಾಗಿ, ಇಲ್ಲವಾದರೆ ನಿಮ್ಮ ಅಂತ್ಯ ನಿಮಗೆ ತುಂಬಾ ದೂರವಿಲ್ಲ.

© Vinod Hindu Nationalist​



Saturday, June 20, 2015

ಅಂಡಮಾನಿನ ಇತಿಹಾಸ ಹೇಗೆ ಭಜರಂಗಬಲಿ ಹನುಮಾನ್'ಗೆ ಸಂಬಂಧಿಸಿದ್ದು?? ಓದಿ ಈ ಪೋಸ್ಟ್ "ಕಪಿಲಿಪಿಸಾರ(ಕಪಿ ಲಿಪಿ ಸಾರ)"




ಹನುಮಾನ್ - ಹಂಡುಮಾನ್ – ಅಂಡಮಾನ್
ಈ ಪೋಸ್ಟ್ ಅಂಡಮಾನ್ ಗೆ ಅಂಡಮಾನ್ ಎಂಬ ಹೆಸರೇ ಏಕೆ ಬಂತು ಅದಕ್ಕೆ ಕಾರಣ ಅಥವಾ ಸನ್ನಿವೇಶವನ್ನ ನನ್ನ ಈ ಪೋಸ್ಟ್ ತಿಳಿಸುತ್ತೆ.

ಆದರೆ ಅದಕ್ಕಿಂತ ಮೊದಲು ನಾನು ಹಾಕಿರೋ ಇಮೇಜ್'ನ ಒಮ್ಮೆ ನೋಡಿ, ಅದರಲ್ಲಿ ಏನು ಬರೆದಿದೆ ಅಂತಾ ಡಿಕೋಡ್ ಮಾಡೋಕೆ ಪ್ರಯತ್ನ ಪಡಿ. . . . .

ಅರ್ಥ ಆಗಲ್ಲ ಅಂತ ಗೊತ್ತು ಇರಲಿ ನಾನೇ ಹೇಳ್ತೀನಿ, ಈ ಚಿತ್ರ ಸುಮಾರು ನಾಲ್ಕು ವರ್ಷಗಳ ಹಿಂದೆ ಅಂಡಮಾನಿಗೆ ಸುನಾಮಿ ಅಪ್ಪಳಿಸಿದಾಗ್ ಅಕಸ್ಮಾತ್ ಆಗಿ ವಿಮಾನದಿಂದ ತೆಗೆದ ಚಿತ್ರ.

ಕೆಳಗೆ ಹಾಕಿರೋ ಚಿತ್ರ ನಂತರದಲ್ಲಿ ಅಲ್ಲಿ ಸಂಶೋಧನೆಗೆಂದು ಹೋದ ವಿಜ್ನಾನಿಗಳಿಗೆ ಒಂದು ಕುಡಿಕೆಯ ಮೇಲೂ ದ್ವೀಪದ ಮೇಲೆ ಬರೆದ ರಚನೆಯ ಹಾಗೆ same symbol ಸಿಕ್ಕಿದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು,   

ನಾವು ತಿಳಿದ ಚರಿತ್ರೆಯನಾನೇ ಬದಲಾಯಿಸುವಷ್ಟು ಪುರಾವೆ ಈ ಚಿತ್ರದಲ್ಲಿದೆ, ಅದೇ ರಾಮಾಯಣದ ಚರಿತ್ರೆ.

ರಾಮಾಯಣಕ್ಕೂ ಇಲ್ಲಿ ಸಮುದ್ರದಲ್ಲಿ ಸಿಕ್ಕ ಚಿತ್ರ ಹಾಗು ಮಡಿಕೆ ಮೇಲೆ ಚಿತ್ರಕ್ಕೆ ಹೇಗೆ ಸಂಬಂಧ ಅಂತೀರಾ? ಓದಿ

ಅದನ್ನು ಕೆತ್ತಿರುವುದು ಸಾವಿರಾರು/ಲಕ್ಷಾಂತರ ವರ್ಷಗಳ ಹಿಂದೆ, ಆದರೆ ಇದು ಸಿಕ್ಕಿದ್ದು ಎರಡನೇ ಮಹಾಯುದ್ಧದಲ್ಲಿ.

ಎರಡನೇ ಮಹಾಯುದ್ಧದ ಸಮಯದಲ್ಲಿ ಅಂಡಮಾನ್ ದ್ವೀಪಗಳು ಬ್ರಿಟಿಷರ ವಶದಲ್ಲಿದ್ದುದು ನಿಮಗೆ ತಿಳಿದಿದೆ, ಆಗಿನ ಬ್ರಿಟಿಷ್ ಅಧಿಕಾರಿಗಳು ರಾಸ್ ಐಲ್ಯಾಂಡ್ ಎಂಬ ದ್ವೀಪವನ್ನು ತಮ್ಮ ವಸಟಿಯಾ ನೆಲೆಯಾಗಿಸಿ ರಾಜ ವೈಭವದಿಂದ ಬಾಳ್ತಿದ್ರು, ಇದರ ಕುರುಹುಗಳು ಇಂದೂ ಅಲ್ಲಿ ಕಾಣೋಕೆ ಸಿಗ್ತಾವೆ.

ಈ ಮಧ್ಯೆ ಸುಭಾಷ್ ಚಂದ್ರ ಬೋಸ್, ಜೈಲಿನಿಂದ ತಪ್ಪಿಸಿಕೊಂಡು ಎಲ್ಲೆಲ್ಲೋ ಸುತ್ತಿ, ಜಪಾನ್ ಸೇರಿ ಆ ದೇಶದ ನಾಯಕರ ಬೆಂಬಲ ತಗೊಂಡು ತಮ್ಮದೇ "ಆಜಾದ್ ಹಿಂದ್" ಸೈನ್ಯವನ್ನ ಕಟ್ಟಿ ಬರ್ಮಾದ ಮೂಲಕ ಬ್ರಿಟೀಷ್ ಆಡಳಿತದ ಮೇಲೆ ದಾಳಿ ಮಾಡಲು ಆರಂಭಿಸ್ತಾರೆ. ಅದೇ ಸಮಯದಲ್ಲಿ ಜಪಾನ್'ನ ವಿಮಾನ ದಳವೂ ಅಂಡಮಾನಿನ ಬ್ರಿಟೀಷ್ ನೆಲೆಗಳ ಮೇಲೆ ದಲಿಯಾ ಶುರುಮಾಡುತ್ತೆ, ಆಗ್ ಬ್ರಿಟೀಷ್'ರ ಶೆಲ್ ದಾಳಿಯಿಂದ ಜಪಾನ್'ನ ವಿಮಾನಕ್ಕೆ ಹತ್ತಿ ಬೆಂಕಿ ತಾಗುತ್ತೆ, ಪೈಲೆಟ್ ನಿಗ್ರಹ ತಪ್ಪಿ ವಿಮಾನ "ಬಾರಾಟಂಗ್" ದ್ವೀಪದಟಾಟಾ ಹಾರುತ್ತೇ. ಸುಮಾರು 50 ಕಿ.ಮೀ ಹಾರಿ ಬಾರಾಟಂಗ್ ದ್ವೀಪದ ಗುಡ್ಡಕ್ಕೆ ಅಪ್ಪಳಿಸುತ್ತಿದ್ದಂತೆ ಅದರ ಡ್ರೈವರ್ ಹಾಗೂ ಹೆಲ್ಪರ್ ಹೊರಗೆ ಪ್ಯಾರಾಶೂಟ್ ಮುಖಾಂತರ ಹಾರಿ ಜೀವಾ ಉಳಿಸಿಕೊಳ್ತಾರೆ.

ಆದರೆ ಅವರ ಅವರ ಹಣೆಬರಹ ಸರಿ ಇರಲ್ಲ ಏನೋ ಅವರಲ್ಲಿ ಒಬ್ಬ ಅಲ್ಲಿರೋ "ಜಾರವಾ" ಅನ್ನೋ ಜನಾಂಗದ ವಿಷದ ಬಾಣಕ್ಕೆ ತುತ್ತಾಗಿ ಸಾಯ್ತಾನೆ, ಆತನ ಹೆಲ್ಪರ್ ಮಾತ್ರ ಹೇಗೋ ತಪ್ಪಿಸಿಕೊಂಡು ಆ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡ್ತಾನೆ, ಕೊನೆಗೂ ಒಂದು ವಾರದ ನಂತರ ಆ ಕಾಡಿನಿಂದ ಆಚೆ ಬರುವಷ್ಟರಲ್ಲಿ ಅಂಡಮಾನ್ ದ್ವೀಪಗಳೆಲ್ಲ ಜಪಾನಿಯರ ವಶವಾಗಿರುತ್ತೆ, ಹೊರಗೆ ಬಂದ ಆತನನ್ನು ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿ ಆಗದೆ ಆಟ ಊಟ ನಿದ್ದೆ ಇಲ್ಲದೆ ಸೊರಗಿ ಸಾಯ್ತಾನೆ ಆದರೆ ಆತನ ಬ್ಯಾಗ್ ಹುಡುಕಿ ಅದರಲ್ಲಿರೋ ವಸ್ತುಗಳನ್ನ ಆತನ ಮನೆಗೆ ತಲುಪಿಸ್ಬೇಕಾದ್ರೆ ಒಂದು ಮಡಿಕೆ ಚೂರು ಸಿಗತ್ತೆ, ಆ ಮಡಿಕೆಯ ಚೂರಿನ ಮೇಲೆ ಈ ಚಿತ್ರ ಬಿಡಿಸಲಾಗಿರುತ್ತೆ.

ಅವನಿಗೆ ಆ ಮಡಿಕೆ ಆ ಕಾಡಿನಲ್ಲಿ ಸಿಕ್ಕಿದ್ದರು ಹೇಗೆ?? ಅವನು ಒಂದು ವಾರ ಆ ಕಾಡಿನಲ್ಲಿ ಓಡಾಡಿದಾಗ ಎಲ್ಲೋ ಸಿಕ್ಕ ಆ ಮಡಿಕೆ ಅವನನ್ನ ಅದರ ಮೇಲಿರೋ ಸೂರ್ಯನ ಚಿತ್ರ ಆಕರ್ಷಿಸಿರಬೇಕು ಆತ ಅದನ್ನು ನೀರು ಕುಡಿಯಲು ಉಪಯೋಗಿಸಿ ಅದನ್ನ ತನ್ನ ಬ್ಯಾಗ್'ನೊಳಗೆ ಇಟ್ಟುಕೊಂಡಿರಬಹುದು ಅಂತ ಜಪಾನ್ ಸುಮ್ಮನಾಗಿ ಅದನ್ನು ಅಣುಬಾಂಬಿನಿಂದ ಸತ್ತವರ ನೆನಪಿಗಾಗಿ ಹತ್ತು ವರ್ಷಗಳ ನಂತರ ಪ್ರದರ್ಶನವನ್ನ ಏರ್ಪಡಿಸಿರಲಾಗತ್ತೆ, ಆದರೆ ಅದನ್ನು ಯಾರು ಗಮನಿಸದೇ ಹೋದಾಗ ಅಲ್ಲೇ ಇದ್ದ ಒಬ್ಬ ಭಾರತೀಯ ಅದನ್ನು ಭಾರತಕ್ಕೆ ತರುತ್ತಾನೆ.

ಆದರೆ ನಿಮಗೆ ಗೊತ್ತಿರಲಿಕ್ಕಿಲ್ಲ ಆ ದ್ವೀಪದಲ್ಲಿ ಅಂದರೆ ಸಾವಿರಾರು ವರ್ಷಗಳಿಂದ ಯಾವ ಜನಾಂಗವೂ ಮಡಿಕೆ ಉಪಯೋಗಿಸುತ್ತಿರಲಿಲ್ಲ. ಆದರೆ "ಜಾರವಾ" ಜನಾಂಗ ಉಪಯೋಗಿಸಿತ್ತಾ?? ಇಲ್ಲ.

ಅವರು ಆಫ್ರಿಕಾದಿಂದ 65-70 ಸಾವಿರ ವರ್ಷಗಳ ಹಿಂದೆಯೆ ಅಲ್ಲಿ ಬಂದು ನೆಲೆಯಾದವರು ಅವರು ನಾಗರಿಕ ಪ್ರಪಂಚದಿಂದ ದೂರವಾಗಿಯೇ ಉಳಿದ ಜನಾಂಗದವರಾಗಿದ್ರು, ಅವರಿಗೆ ಮಡಿಕೆ ಕುಡಿಕೆಗಳ ಎಳ್ಳಷ್ಟೂ ಜ್ನಾನವಾಗಲಿ ಅದನ್ನು ಹೇಗೆ ಉಪಯೋಗಿಸಬೇಕೆ ಅಂತಲೂ ತಿಳಿದಿರಲಿಲ್ಲ. ಅಲ್ಲಿರೋ ಜನಾಂಗದವರಿಗೆ ಇತ್ತೀಚೆಗೆ ಭಾರತದ ಸರ್ಕಾರದವರು ಊಟ ಮಾಡೋಕೆ ಅಲ್ಯುಮಿನಿಯಂ ಪ್ಲೇಟ್ ಕೊಟ್ಟು ಬಂದಿದ್ದರೆ ಅವರು ಆ ಅಲ್ಯುಮಿನಿಯಂ ಪ್ಲೇಟನ್ನೆ ಕತ್ತರಿಸಿ ಚೂರುಗಳನ್ನ ಮಾಡಿ ಅದರಿಂದ ಬಾಣದ ತುದಿಗಳಿಗೆ ಉಪಯೋಗಿಸ್ತಾರೆ, ಹಾಗಾದ್ರೆ ಅಲ್ಲಿಗೆ ಮಡಿಕೆ ಹೇಗೆ ಬಂತು??

ಅದನ್ನು ತಂದಿದ್ದು ಎಷ್ಟೋ ಸಾವಿರ/ಲಕ್ಷ ವರ್ಷಗಳ ಹಿಂದೆ ಬಂದಿದ್ದ ಹನುಮಾನ್ ಹಾಗು ಅವನ ಜನರು!!! Shocking ಅಲ್ವ??

ಜಾರವಾ ಜನಾಂಗದವರಿಗೆ ಹೊರಗಿನ ಜನರನ್ನ ಕಂಡರೆ ಆಗಲ್ಲ, ಒಂದು ವೇಳೆ ಅಲ್ಲೇನಾದರೂ ಬೇರೆ ಜನ ಕಂಡುಬಂದರೆ ಹಿಂದೆ ಮುಂದೆ ನೋಡದೆ ಅವರನ್ನ ಸಾಯಿಸಿಬಿಡ್ತಾರೆ ಜಾರವಾ ಜನಾಂಗದವರು.

ರಾಮಾಯಣದ ಕಾಲಕ್ಕೆ ಹೋಗೋಣ!! ರಾಮ ಸೀತೇಯನ್ನ ಹುಡುಕುತ್ತ ಕಿಷ್ಕಿಂದೆಯ ಬಳಿ ಬಂದು ಅಲ್ಲಿ ವಾಲಿಯ ವಧೆ ಮಾಡಿ ಸುಗ್ರೀವ್ ಹನುಮಂತರ ಜೊತೆ ಶ್ರೀಲಂಕಾಕ್ಕೆ ರಾವಣನ ಮೇಲೆ ಯುದ್ಧಕ್ಕೆ ಹೋಗಿದ್ದು ನಮಗೆಲ್ಲ ಗೊತ್ತಿರೋ ವಿಷಯವೇ ಆದರೆ ಕಥೆಯಲ್ಲಿ ಟ್ವಿಸ್ಟ್ ಇರೋದೇ ಇಲ್ಲಿ.

ಆದರೆ ವಾಲಿ ಸತ್ತ ನಂತರ ಹೆದರಿ ಪರದೇಶಿಗಳಾಗಿದ್ದ ಅವನ ಕಡೆಯ ಜನ ಹಾಗು ಸುಗ್ರೀವ್ ಶ್ರೀಲಂಕಾಗೆ ಹೋದ ಮೇಲೆ ಪರದೇಶಿಗಳಾಗಿದ್ದ ಅವನ ಪ್ರಜೆಗಳಿಗೆ ಶ್ರೀಲಂಕಾದಿಂದ ಸತ್ತ ಸಾವು ನೋವುಗಳ ಸುದ್ಧಿ ತುಂಬಾನೆ ಆಘಾತಕ್ಕೀಡು ಮಾಡಿದವು, ಯಾರದೋ ಹೆಂಡತಿಯ ರಕ್ಷಣೆಗೆ ನಮ್ಮ ಕುಟುಂಬದವರು ಸಾಯ್ತಿದ್ದಾರಲ್ಲ ಹಾಗು ನಮ್ಮ ವಾಲಿಯನ್ನೇ ಕಳೆದುಕೊಂಡು ಬಿಟ್ವಲ್ಲ ಅನ್ನೋ ಕೋಪ ಅಲ್ಲಿರೋ ಜನಗಳಲ್ಲಿತ್ತು, ಸತ್ತವರ ಪತ್ನಿಯರ ಆಕ್ರಂದನ ಶಾಪವಾಗತ್ತೆ, ಇಡೀ ಕಿಷ್ಕಿಂದೆಯ ಜನ ಸುಗ್ರೀವ ಹಾಗು ಆಂಜನೇಯರ ಕಡೆಗೆ ಸಿಡಿದೇಳುತ್ತೆ.

ರಾಮಾಯಣದಲ್ಲಿ ವೀರರಂತೆ ಚಿತ್ರಿಸಲ್ಪಟ್ಟಿರೋ ಅವರು ತಮ್ಮದೇ ಜನರಿಗೆ, ತಮ್ಮದೇ ದೇಶದಲ್ಲಿ(ಕಿಷ್ಕಿಂಧ್ಯೆಯಲ್ಲಿ) ದ್ರೋಹಿಗಳಾಗಿ ಕಾಣ್ತಾರೆ. ಅಲ್ಲಿ ಭುಗಿಲೆದ್ದ ದ್ವೇಷದಿಂದ ಜನ ಅವರನ್ನು ದೇಶದೊಳಗೆ ಬಿಟ್ಟುಕೊಳ್ಳದೇ ಹೊಡೆದೊಡಿಸುತ್ತಾರೆ. ರಾಜಧಾನಿ ಬಿಟ್ಟು ಓಡಿದ ಅವರಿಗೆ ಎಲ್ಲೂ ಆಶ್ರಯ ಸಿಗದೇ ಕೊನೆಗೆ ದೋಣಿ ಹತ್ತಿ ಸಮುದ್ರದಲ್ಲಿ ತಪ್ಪಿಸಿಕೊಂಡು ಹೋದ ಅವರು ಪೂರ್ವದಲ್ಲಿನ ದ್ವೀಪಗಳನ್ನು(ಈಗಿನ ಅಂಡಮಾನ್, ನಿಕೋಬಾರ್) ಸೇರಿ ಅಲ್ಲೇ ನೆಲೆಸ್ತಾರೆ. ಆ ದ್ವೀಪಗಳೇ ಮುಂದೆ ಹನುಮಾನ್ ಅಂತಲೂ ನಂತರ ಹಂಡುಮಾನ್ ಅಂತಲೂ ಕೊನೆಗೆ ಅಂಡಮಾನ್ ಅಂತಲೂ ಹೆಸರಾಗತ್ತೆ.

ಈ ಕಥೆಯ ಸಾರಾಂಶ ಈಗಲೂ ಅಂಡಮಾನ್'ನಲ್ಲಿರೋ ಮ್ಯೂಸಿಯಮ್'ನಲ್ಲಿರೋ explainations ಹೇಳ್ತಾವೆ, ಇಂಡೋನೆಷಿಯಾದ ಜನರ ನಂಬಿಕೆಯಂತೆ ಹನುಮಾನ್, ಸೀತೆಯ ಹುಡುಕಾಟದಲ್ಲಿ ಇಂಡೋನೇಷಿಯಾದಿಂದ ಹಾರಿ ಮೊದಲು ಈ ದ್ವೀಪದಲ್ಲಿಯೇ ಹೆಜ್ಜೆ ಇಟ್ಟು, ನಂತರ ಲಂಕೆಗೆ ಹೋದನಂತೆ. ಅದಕ್ಕೆಂದೆ ಅದನ್ನ "ಹಂಡುಮಾನ್" ಎನ್ನುತ್ತಾರೆ ಅನ್ನೋ ನಂಬಿಕೆ ಅಲ್ಲಿದೆ. ಆದರೆ ಸತ್ಯವೆಂದರೆ ಇದು ಆತನ ಮತ್ತು ಅವರ ಜನರ ಮೊದಲ ಹೆಜ್ಜೆಯಲ್ಲ ಕೊನೆಯ ತಾಣವಾಗಿರಬೇಕು.

ಇದಕ್ಕೆ ಪುರಾವೆ ಇಲ್ಲ ಹೇಗೆ ನಂಬಬೇಕು ಅಂತೀರಾ?? ಅಂತಹ ಪುರಾವೆಗಳೂ ಇವೆ, ದೆಹಲಿಯಲ್ಲಿರೋ ಪಾರೋ.ಪದ್ಮನಾಭರಾವ್ ಎನ್ನುವವರು ಒಂದು ವೆಬ್'ಸೈಟಿನಲ್ಲಿ ಹೀಗೆ ಬರೀತಾರೆ.
“On the basis of ‘SKANDA PURANA’, the author has identified or discovered Andaman as the legendary Gandhamadana”
ಅವರು ಹೀಗೆ ಹೇಳುವ ಹಾಗೆ, ರಾಮಾಯಣದ ಕೊನೆಯಲ್ಲಿ ಆಂಜನೆಯನು "ಗಂಧಮಾನ ಗಿರಿ" ಎಂಬ ಸ್ಥಳಕ್ಕೆ ಹೊರಟನೆಂದು ತಿಳಿಸಿದ್ದರು ಆ ಸ್ಥಳ ಎಲ್ಲಿದೆ ಅನ್ನೋದು ಇನ್ನೂ ವಿವಾದವೇ ಆಗಿದೆ. ಆದರೆ ಸ್ಕಂದಪುರಾಣಗಳಲ್ಲಿ ಉಲ್ಲೇಖಿಸಿರೋ ಬೆಟ್ಟದ ಸಾಲುಗಳು ಅಂಡಮಾನ್ ಎಂದೇ ವಾದಿಸುತ್ತಾರೆ, ಹಾಗೆ ಯೂರೋಪಿಯನ್ನರು ಈ ದ್ವೀಪಕ್ಕೆ ಸಾವಿರಾರು ವರ್ಷಗಳಿಂದಲೇ ಬರುತ್ತಿದ್ದು ಅವರ ನಾಲಿಗೆಯಲ್ಲಿ "ಗಂಧಮಾಧನ"ವನ್ನ ಅಂಡಮಾನ್ ಆಗಿರಲೂಬಹುದು ಅಂತಾರೆ.

ಆದರೆ ಹನುಮಾನ್ ಹಾಗು ಅವರ ಜನರು ಅಂಡಮಾನ್ ದ್ವೀಪಕ್ಕೆ ಬಂದಾಗ ತಂದ ಕುಡಿಕೆಗಳೆ ಈಗ ಸಿಕ್ಕಿರೋ ಕುಡಿಕೆ ಹಾಗು ಸಮುದ್ರದಲ್ಲಿ ಕಂಡ ಆ ಚಿತ್ರಗಳು ಅನ್ನೋದು ವಿಜ್ನಾನಿಗಳ ವಾದ.

ಆದರೆ ನಂತರ ಹನುಮಾನ್ ಹಾಗು ಅವನ ಜನರ ಕಥೆ ಏನಾಯ್ತು ಅನ್ನೋದನ್ನ ನೋಡದ್ರೆ ನಿಮಗೆ ಮೊದಲೇ ತಿಳಿಸಿರೋ ಹಾಗೆ ಜಾರವಾಗಳು ಹೊರಗಿನಿಂದ ಬಂದ ಜನರನ್ನು ಜೀವಸಹಿತ ಉಳಿಸ್ತಿರಲಿಲ್ಲ ಹಾಗು ಹನುಮಾನ್ ಸೈನ್ಯದಿಂದ ಯುದ್ಧ ಘರ್ಷಣೆಯಾಗಿ ಅವರ ಸಂತತಿ ನಾಶವಾಗಿರಬಹುದು ಅನ್ನೋದು ಇತಿಹಾಸದಲ್ಲಿ ಇನ್ನೂ ಬಚ್ಚಿಟ್ಟಿರೋ ರಹಸ್ಯವೇ ಸರಿ.

ಕೊನೆಗೆ ನಿಮಗೆ ಅರ್ಥವಾಗದ್ದೂ ಒಂದು ವಿಷಯ ಉಳಿದೆ ಅಂತ ನನಗೆ ಗೊತ್ತು, ಮೇಲೆ ಹಾಕಿರೋ ಇಮೇಜ್‌'ನಲ್ಲಿರೋ ಚಿತ್ರದ meaning ಏನು ಅನ್ನೋದು!! right??

ಈಗ ಚಿತ್ರ observe ಮಾಡಿ(right to left ಓದಿ) ಮೊದಲು ಕಾಣೋದು ದೊಡ್ಡ ಸೂರ್ಯನ ಚಿತ್ರ(ಸೂರ್ಯವಂಶದವ) ನಂತರ ಚಿಕ್ಕ ಸೂರ್ಯ(ಸೂರ್ಯನ ಸೇವಕ), ನೀರಿನ ಜಾಡಿಗೆ, ನೀರಿನ ಚಿತ್ರ(ಮೂರು ಗೆರೆಗಳು), ನಂತರ ಇರುವ ಚಿತ್ರ ತೋರಿಸೋದು ಐಲ್ಯಾಂಡ್

ಅದನ್ನು Decode ಮಾಡಿದ ವಿಜ್ನಾನಿಗಳ ಪ್ರಕಾರ ಅದರರ್ಥ(right to left ಓದಿ) "ಸೂರ್ಯ ವಂಶದ ರಾಜನ ಯೋಧ/ಸೇವಕ ಸಾಗರ ದಾಟಿ ದ್ವೀಪ ಸೇರಿದ" ಅಂತ
ಇಲ್ಲಿ ಸೂರ್ಯ ವಂಶದ ರಾಜ ಎಂದರೆ "ರಾಮ" ಹಾಗು ಯೋಧ/ಸೇವಕ ಅಂದರೆ "ಹನುಮಾನ್" ಎಂದಲೂ ಅರ್ಥ.
"ರಾಮನ ಭಕ್ತನಾದ ಆಂಜನೇಯ ಸಾಗರವನ್ನು ದಾಟಿ ಅಂಡಮಾನ್ ಸೇರಿದ"

For more details about the name of Andaman you can visit and check the below links

1) http://www.knowandamans.com/2013/03/a-brief-history-of-andamans.html
2) https://en.wikipedia.org/?title=Andaman_Islands
3) http://aniidco.and.nic.in/about-andaman.php






Wednesday, June 17, 2015

ವಿಜಯನಗರ ಸಾಮ್ರಾಜ್ಯದ ಕಥೆ ಯಶೋಗಾಥೆ "ಕರಿಸಿರಿಯಾನ"

ನೆನ್ನೆ ವಿಜಯನಗರದ ಗತ್ತು, ವೈಭವ, ಅದರ ಆಡಳಿತ, ಆ ಸಾಮ್ರಾಜ್ಯ ಈಗಲೂ ಪೃಕ್ರತಿಯ ಮಡಿಲಲ್ಲಿ ಬಿಟ್ಟು ಹೋಗಿರೋ ಅದೆಷ್ಟೋ ರಹಸ್ಯಗಳು ಹಾಗು ಅದರ ಪತನದ ಬಗ್ಗೆ ಕೆ.ಎನ್.ಗಣೇಶಯ್ಯ ಬರೆದ "ಕರಿಸಿರಿಯಾನ" ಓದುತ್ತಿದ್ದೆ. ಅದರಲ್ಲಿ ನಾನು ತಿಳಿದುಕೊಂಡ ಕೆಲ ಮಾಹಿತಿ ಹಾಗು ನನ್ನ ಅನಿಸಿಕೆಗಳು ಬರೀತಿದ್ದೇನೆ.

ನಮ್ಮ ಹಿಂದುಗಳಲ್ಲಿರೋ ಸೊಕ್ಕು ದರ್ಪದಿಂದ ಹಾಗು ಮುಸಲ್ಮಾನರ ಕುತಂತ್ರ, ಉಂಡಮನೆಗೆ ಅವರು ಯಾವತ್ತಿದ್ದರೂ ದ್ರೋಹ ಬಗೀತಾರೆ ಅನ್ನೋ ಕಾರಣದಿಂದ ದಕ್ಷಿಣದ ವಿಜಯನಗರ ಸಾಮ್ರಾಜ್ಯ ಪತನವಾಗಿ ಮುಸಲ್ಮಾನರು ನಮ್ಮ ಮೇಲೆ ವಿಜಯ ಸಾಧಿಸಿದರು ಹಾಗು ಇನ್ನೂ ಕೂಡ ನಮ್ಮ ಮೇಲೆ ನಿಯಂತ್ರಣ ಸಾಧಿಸ್ತಿದಾರೆ ಅನ್ನೋದನ್ನ ಎಷ್ಟು ಜನ ಹಿಂದುಗಳು ಒಪ್ಗೋತೀರಾ?

ನಾವು ಹಿಂದುತ್ವವಾದಿಗಳು, ಹಿಂದೂಗಳು ನಮ್ಮ ಸೊಕ್ಕು ದರ್ಪದಿಂದ ನಾವು ಇನ್ನೂ ಸಂಕಷ್ಟ ಅನುಭವಿಸ್ತಿದ್ದೇವೆ ಅನ್ನೋದನ್ನ ಬಿಟ್ಟು ಮುಸಲ್ಮಾನರ ಕುತಂತ್ರ ಒಂದನ್ನೇ ನಂಬ್ತೇವೆ.

ಇಲ್ಲಿ ಕೇಳಿ, ನಾವು ಹಿಂದುಗಳ ಸೊಕ್ಕು ದರ್ಪ, ನಮ್ಮನ್ಯಾರು ಏನ್ ಮಾಡ್ತಾರೆ ಹಾಗು ಅಸಂಘಟಿತ ಮನೋಭಾವವೇ ನಮಗೆ ಮುಳು ಆಯ್ತು, ಇನ್ನೂ ಆಗ್ತಿದೆ ಅನ್ನೋದನ್ನ ಯಾರೂ ಅಲ್ಲಗಳೆಯೋಕೆ ಸಾಧ್ಯವೇ ಇಲ್ಲ.

ವಿಜಯನಗರದ ಪತನಕ್ಕೆ ಇವೆಲ್ಲಾ ಹೇಗೆ ಕಾರಣಗಳಾದ್ವು ಅನ್ನೋದನ್ನ ಹೇಳ್ತಿನಿ ಕೇಳಿ!
ವಿಜಯನಗರದ ಅಂತಿಮ(ಪತನ) ಯುದ್ಧ, ರಕ್ಕಸತಂಗಡಿ ಯುದ್ಧ(ಕ್ರಿ.ಶ.1565) ನಿಮಗೆ ನೆನಪಿರಬೇಕಲ್ವ? ಆ ಯುದ್ಧದ ನಂತರವೇ ವಿಜಯನಗರ ಸಾಮ್ರಾಜ್ಯ, ದಕ್ಷಿಣದ ಹಿಂದು ಸಾಮ್ರಾಜ್ಯ ಪತನವಾಗಿ ಮುಸಲ್ಮಾನರ ಕರ್ನಾಟಕ, ಆಂಧ್ರ, ಕೇರಳದಲ್ಲಿ ಪ್ರಭಾವ ಜಾಸ್ತಿ ಆಯ್ತು.

ರಕ್ಕಸತಂಗಡಿ ಕದನದಲ್ಲಿ ಭಾಗವಹಿಸಿದ ವಿಜಯನಗರದ ರಾಜ ರಾಮರಾಯನಿಗೆ ಆಗ 90 ವರ್ಷ, ಅವನಿಗೆ ಯುದ್ಧದಲ್ಲಿ ಭಾಗವಹಿಸುವಾಗ ಅವನಿಗಿದ್ದ ಒಂದು ಸೊಕ್ಕೆಂದರೆ ಅವನು ಯುದ್ಧದಲ್ಲಿ ಯಾವತ್ತೂ ಪಲ್ಲಕ್ಕಿಯಲ್ಲೇ ಕೂತಿರ್ತಿದ್ದ ಹಾಗು ಪಲ್ಲಕ್ಕಿಯಲ್ಲಿ ಕೂತೇ ಯುದ್ಧ ಮಾಡ್ತಿದ್ದ ಅನ್ನೋದು ಇತಿಹಾಸದಿಂದ ತಿಳಿದುಬರೋ ಸಂಗತಿ.

ಯುದ್ಧದಲ್ಲಿ ವಿಜಯನಗರದ ಸೈನಿಕರು ಬಿಜಾಪುರ್ ಸುಲ್ತಾನರ ಸೈನ್ಯದಿಂದ ಅಪಾಯದ ಮುನ್ಸೂಚನೆ ಅರಿತ ಕೂಡಲೇ ರಾಜ ರಾಮರಾಯನಿಗೆ ಪಲ್ಲಕ್ಕಿಯನ್ನು ಬಿಟ್ಟು ಕೆಳಗಿಳಿದು ಯುದ್ಧ ನಡೆಸಲು ಕೋರುತ್ತಾರೆ, ಆದರೆ ರಾಮರಾಯ ಹೇಳ್ತಾನೆ "ಮಕ್ಕಳೆದುರು ನಿಲ್ಲುವಾಗ ಯಾವ ಎಚ್ಚರಿಕೆಯು ಬೇಕಿಲ್ಲ.... ಇದು ಯುದ್ಧವೇ ಅಲ್ಲ" ಅಂತ ಹೇಳಿ ಆತ ಪಲ್ಲಕ್ಕಿಯಲ್ಲೇ ಕೂತ, ಆಗ ನಿಜಾಮನ ಸೈನ್ಯವು ಮದವೇರಿದ ಆನೆಯನ್ನ ರಾಮರಾಯನ ಪಲ್ಲಕ್ಕಿಯ ಕಡೆಗೆ ಓಡಿಸುತ್ತಾರೆ, ಮದವೇರಿದ ನುಗ್ಗಿ ಬರುತ್ತಿರುವ ಆನೆಯನಾನು ಕಂಡು ಪಲ್ಲಕ್ಕಿ ಹೊತ್ತಿದ್ದವರು ಹೆದರಿ ದಿಕ್ಕಾಪಾಲಾಗಿ ಓದಿದಾಗ ರಾಮರಾಯ ಕೆಳಗೆ ಬಿದ್ದ, ಬಿದ್ದ ತಕ್ಷಣ ಎದುರಾಳಿ ಸೈನಿಕರು ರಾಮರಾಯನನ್ನ ಬಂಧಿಸಿ ಅವನ ತಲೆ ಕಡಿದು ಆ ತಲೆಯನ್ನು ಯುದ್ಧಭೂಮಿಯನ್ನು ದೊಡ್ಡ ಭರ್ಚಿಗೆ ಸಿಕ್ಕಿಸಿ ಇಡೀ ರಣಾಂಗಣವನ್ನೇ ಓಡಾಡಿ ಯುದ್ಧ ಗೆದ್ದ ಸಂಭ್ರಮ ಆಚರಿಸುತ್ತಾರೆ.

ನೆನಪಿರಲಿ ಅವರು ರಾಮರಾಯನ ತಲೆಯನ್ನು ಬರೋಬ್ಬರಿ 264 ವರ್ಷಗಳವರೆಗೆ ಅಂದರೆ 1565 ರಿಂದ 1829 ರವರೆಗೆ ಅಹ್ಮದ್'ನಗರ ದಲ್ಲಿ ತಮ್ಮ ಆಸ್ಥಾನದಲ್ಲಿಟ್ಟು ಜಗತ್ತಿಗೆ ಭಾರತದ ಅತೀದೊಡ್ಡ ವಿಜಯನಗರ ಸಾಮ್ರಾಜ್ಯವನ್ನ ಹೇಗೆ ಸೋಲಿಸಿ ವಶಪಡಿಸಿಕೊಂಡ್ವಿ ಅನ್ನೋದನ್ನ ಸಾರಿ ಹೇಳಿದರಂತೆ.

ಈ ತಲೆಯ ಪ್ರದರ್ಶನ ಬಾರಿ ಒಬ್ಬ ನಾಯಕನ ಸೋಲಾಗುವುದಿಲ್ಲ, 250 ವರ್ಷಗಳ ಕಾಲ ಭವ್ಯತೆಯಿಂದ ಮೆರೆದ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದ, ಚರಿತ್ರೆಯಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾಗಿದಾದಾ ವಿಜಯನಗರದ ಪತನದ ಸಂಕೇತವಾಗಿದೆ. ಭಾರತದ ಚರಿತ್ರೆಯಲ್ಲಿ ಒಂದು ಮಹಾಯುಗದ ಅಂತ್ಯದ ಪ್ರತೀಕವಾಗುತ್ತೆ. ಭಾಷೆ, ಕಲೆ, ಸಂಸ್ಕ್ರಟಿಯಾ ಹೊಸ ಮಜಲುಗಳನ್ನು ಎಂದೆಂದೂ ಹುಟ್ಟು ಹಾಕುವ ಸ್ಪೂರ್ತಿಯಿಂದ ಕಂಡಿದ್ದ ಭಾರತಮಾತೆಯ ರಾಜಕೀಯ ಪರಿಸ್ಥಿತಿ ಅಧೋಗತಿ ಇಲ್ಲಿಂದ ಶುರುವಾಗಿ ಇನ್ನೂ ಮುಂದುವರೆದಿದೆ.... ಇದಲ್ವಾ ನಮ್ಮ ನಿಜವಾದ ಅಹಂಕಾರದ ಸೋಲು?

ಇನ್ನು ಮುಸಲ್ಮಾನರನ್ನು ಯಾವತ್ತೂ ನಂಬಬಾರದು, ಅವರ ಉಂಡ ಮನೆಗೆ ದ್ರೋಹ ಬಗೆಯೋದು ಗ್ಯಾರಂಟಿ ಅಂತ ಹೇಳಿದ್ದೆ, ಕೇಳಿ ವಿಜಯನಗರ ಸಾಮ್ರಾಜ್ಯದಲ್ಲಿ ಮುಸಲ್ಮಾನರನ್ನು ಅಣ್ಣತಮ್ಮಂದಿರ ಹಾಗೆ ಅರಸರು ನಡೆಸಿಕೊಂಡಿದ್ದರು, ಅವರಿಗೋಸ್ಕರ ಮಸೀದಿ, ಮನೆ ಮಠ ಎಲ್ಲ ಮಾಡಿಸಿಕೊಟ್ಟು ಸೈನ್ಯದ ಉನ್ನತ ಜವಾಬ್ದಾರಿಯಾದ ಸೈನ್ಯಾಧಿಪತಿಗಳ ಸ್ಥಾನವನ್ನು ಕೊಟ್ಟಿತ್ತು. ಆದರೆ ಅದೇ ಮುಸಲ್ಮಾನ ಸೈನ್ಯಾಧಿಕಾರಿಗಳು 1565ರಲ್ಲಿ ನಡೆದ ರಕ್ಕಸತಂಗಡಿ ಕದನದ ಯುದ್ಧಭೂಮಿಯಲ್ಲಿ ಎದುರಾಳಿ ಬಿಜಾಪುರ ಸುಲ್ತಾನ ಒಬ್ಬ ಮುಸಲ್ಮಾನ ನಾವು ಇಸ್ಲಾಮ್ ನಂಬುತ್ತೇವೆ, ಇಸ್ಲಾಮಿಗೆ ನಮ್ಮ ನಿಷ್ಟೆ ಅಂತ ವಿಜಯನಗರದ ರಾಮರಾಯನನ್ನು ಬಿಟ್ಟು ಎದುರಾಳಿ ಸುಲ್ತಾನರ ಕಡೆಗೆ ಸೇರಿಕೊಂಡು ಬೆನ್ನಿಗೆ ಚೂರಿ ಹಾಕ್ತಾರೆ.

ಇತಿಹಾಸದುದ್ದಕ್ಕೂ ನಮ್ಮನ್ನು ಕಾಡುತ್ತ ಬಂದ ಈಗಲೂ ಕಾಡುತ್ತಿರುವ ಪಿಶಾಚಿಗಳನ್ನ ಮಾತ್ರ ನಾವು ಹಿಂದುಗಳು ಭಾಯಿ ಭಾಯಿ ಅಂತ ಸೆಕ್ಯೂಲರ್ ಗಾಂಡುಗಳಾಗಿ ಕರೆದು ವರ್ತಿಸ್ತಿರೋದು ಮಾತ್ರ ನಮ್ಮ ದೇಶಕ್ಕೆ, ಧರ್ಮಕ್ಕೆ ಮಾರಕವೇ ಸರಿ.

~ Vinod Hindu Nationalist​